ಶಿವಮೊಗ್ಗ: ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಿಸಲು ನಿಜವಾದ ಹಕ್ಕಿರುವುದು ಕಾಂಗ್ರೆಸ್ಗೆ ಮಾತ್ರ. ಕಾಂಗ್ರೆಸ್ ನಾಯಕರು ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿ, ಪ್ರಾಣತ್ಯಾಗ ಮಾಡಿದ್ದಾರೆ. ಆದರೆ ಬಿಜೆಪಿಯವರು ಯಾರೂ ಸಹ ಈ ಹೋರಾಟದಲ್ಲಿ ಭಾಗಿಯಾಗಿರಲಿಲ್ಲ. ಬಿಜೆಪಿ ಹರ್ ಘರ್ ತಿರಂಗ ಅಭಿಯಾನ ನಡೆಸುತ್ತಿದೆ. ಇದು ಬಿಜೆಪಿಯ ಸ್ವಾರ್ಥ ರಾಜಕಾರಣ ಎಂದು ಟೀಕಿಸಿದರು.
ಕರಾವಳಿ ಭಾಗದಲ್ಲಿ ಬಿಜೆಪಿ ಸೇರಿದಂತೆ ಹಿಂದೂಪರ ಸಂಘಟನೆಗಳು ನಡೆಸಿದ ಪ್ರಯೋಗ ಈಗ ಅವರಿಗೆ ಮುಳುವಾಗಿದೆ. ಶೇ.20ರಷ್ಟು ಜನರಿಗೆ ತೊಂದರೆ ಕೊಡಲು ಹೋಗಿ, ಶೇ.80 ರಷ್ಟು ತೊಂದರೆ ಕೊಡ್ತಿದ್ದಾರೆ. ಕರಾವಳಿಯಲ್ಲಿ ಬಿಜೆಪಿ ವಿರುದ್ಧ ಅವರ ಕಾರ್ಯಕರ್ತರೇ ತಿರುಗಿ ಬಿದ್ದಿದ್ದಾರೆ ಎಂದರು.
ಅಮೃತ ಮಹೋತ್ಸವ ಅಂಗವಾಗಿ ಕಾಂಗ್ರೆಸ್ ಪಕ್ಷದ ವತಿಯಿಂದ ಕ್ಷೇತ್ರದಲ್ಲಿ 15 ಕಿ.ಮೀ ಪಾದಯಾತ್ರೆ ನಡೆಸಲು ಆದೇಶ ನೀಡಲಾಗಿದೆ. ಅದರಂತೆ ನಾಳೆ ನಾನು ಆನವಟ್ಟಿಯಲ್ಲಿ ಪಾದಯಾತ್ರೆ ನಡೆಸುತ್ತೇನೆ. ನಮ್ಮ ಪಕ್ಷ ಮುಂದಿನ ಚುನಾವಣೆಯ ದೃಷ್ಟಿಯಿಂದ ಪ್ರಣಾಳಿಕೆ ಸಮಿತಿಗೆ ನನ್ನನ್ನು ನೇಮಿಸಿದೆ. ಅದರಂತೆ ಆಯಾ ಪ್ರದೇಶಕ್ಕೆ ಅನುಗುಣವಾಗಿ ಪ್ರಣಾಳಿಕೆ ಸಿದ್ಧಪಡಿಸಲಾಗುವುದು ಎಂದು ತಿಳಿಸಿದರು.
ಇದನ್ನೂ ಓದಿ: ಸ್ವಾತಂತ್ರ್ಯದ ವಿಚಾರದಲ್ಲಿ ನಮಗಿರುವ ಹಕ್ಕು, ನೈತಿಕತೆ ಬೇರೆ ಪಕ್ಷದವರಿಗಿಲ್ಲ: ಡಿ.ಕೆ.ಶಿವಕುಮಾರ್