ETV Bharat / state

ಸಚಿವನನ್ನಾಗಿ ಮಾಡಿದರೆ ಸಂತೋಷ ಇಲ್ಲವಾದರೆ ಇಲ್ಲ: ಕೆಎಸ್ ಈಶ್ವರಪ್ಪ - etv bharat karnataka

ರಾಜ್ಯ ಹಾಗೂ ಕೇಂದ್ರದ ನಾಯಕರಿಗೆ ಇನ್ನೊಂದು ಸಮಸ್ಯೆ ಉಂಟು ಮಾಡಲು ನಾನು ಸಿದ್ಧನಿಲ್ಲ - ಸಚಿವನನ್ನಾಗಿ ಮಾಡಿದರೆ ಸಂತೋಷ ಇಲ್ಲವಾದರೆ ಇಲ್ಲ - ಮಂತ್ರಿ ಸ್ಥಾನದ ಕುರಿತು ಮಾಜಿ ಸಚಿವ ಕೆಎಸ್ ಈಶ್ವರಪ್ಪ ಅಚ್ಚರಿಯ ಹೇಳಿಕೆ.

Former minister KS Eshwarappa reaction
ಸಚಿವನನ್ನಾಗಿ ಮಾಡಿದರೆ ಸಂತೋಷ ಇಲ್ಲವಾದರೆ ಇಲ್ಲ: ಕೆಎಸ್ ಈಶ್ವರಪ್ಪ
author img

By

Published : Jan 20, 2023, 5:35 PM IST

ಸಚಿವನನ್ನಾಗಿ ಮಾಡಿದರೆ ಸಂತೋಷ ಇಲ್ಲವಾದರೆ ಇಲ್ಲ: ಕೆಎಸ್ ಈಶ್ವರಪ್ಪ

ಶಿವಮೊಗ್ಗ: ಸಚಿವ ಸ್ಥಾನದ ಆಸೆಯನ್ನು ನಾನು ಬಿಟ್ಟಿದ್ದೇನೆ ಎಂದು ಮಾಜಿ ಸಚಿವ ಕೆಎಸ್ ಈಶ್ವರಪ್ಪ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಬಿಜೆಪಿ ಕಚೇರಿಯಲ್ಲಿ ಸಂಪುಟ ವಿಸ್ತರಣೆ ಕುರಿತು ಪ್ರತಿಕ್ರಿಯೆ ನೀಡಿದ ಅವರು ನಾನು ಸರ್ಕಾರಕ್ಕೆ ಇನ್ನೊಂದು ಸಮಸ್ಯೆಯಾಗಲು ಸಿದ್ಧನಿಲ್ಲ, ಈಗಾಗಲೇ ಕ್ಲೀನ್ ಚಿಟ್ ಸಿಕ್ಕಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಸಾಕಷ್ಟು ಜನರು ಸಚಿವರಾಗುವಂತೆ ಅಪೇಕ್ಷೆ ವ್ಯಕ್ತಪಡಿಸಿದ್ದರು. ಅದನ್ನೇ ಮುಖ್ಯಮಂತ್ರಿಗಳ ಬಳಿ ತಿಳಿಸಿದ್ದೆ. ಅವರು ರಾಷ್ಟ್ರೀಯ ನಾಯಕರ ಬಳಿ ಮಾತನಾಡುವ ಭರವಸೆ ನೀಡಿದ್ದರು. 224 ಶಾಸಕರೂ ಮಂತ್ರಿ ಆಗಲು ಆಗುವುದಿಲ್ಲ. ಪಕ್ಷದ ಯೋಚನೆ ಬೇರೆ ಇರಬಹುದು ಈಗ ನಾನು ಸಚಿವ ಸ್ಥಾನದ ಆಸೆ ಬಿಟ್ಟಿದ್ದೇನೆ ಎಂದರು.

ಸಚಿವನನ್ನಾಗಿ ಮಾಡಿದರೆ ಸಂತೋಷ ಇಲ್ಲವಾದರೆ ಇಲ್ಲ:ಆಡಳಿತ ನಡೆಸುವ ವ್ಯವಸ್ಥೆ ಸುಲಭವಾಗಿ ನಡೆಯುವುದಿಲ್ಲ. ಅವರಿಗೆ ಏನೇನು ಪರಿಸ್ಥಿತಿಗಳಿವೆಯೋ ನನಗೆ ಗೊತ್ತಿಲ್ಲ. ಹಾಗಾಗಿ ರಾಜ್ಯ ಹಾಗೂ ಕೇಂದ್ರದ ನಾಯಕರಿಗೆ ಇನ್ನೊಂದು ಸಮಸ್ಯೆ ಉಂಟು ಮಾಡಲು ನಾನು ಸಿದ್ಧನಿಲ್ಲ. ಸಚಿವನನ್ನಾಗಿ ಮಾಡಿದರೆ ಸಂತೋಷ ಇಲ್ಲವಾದರೆ ಇಲ್ಲ ಎಂದು ತಿಳಿಸಿದರು. ನಾನೇ ಮಂತ್ರಿಯಾಗಬೇಕು ಎನ್ನುವ ಮೂಲಕ ಸರ್ಕಾರಕ್ಕೆ ಇನ್ನೊಂದು ಸಮಸ್ಯೆಯಾಗಲು ನಾನು ಇಷ್ಟಪಡಲ್ಲ ಎಂದ ಅವರು ಈ ನಿಟ್ಟಿನಲ್ಲಿ ಏನೇನು ಸಮಸ್ಯೆ ಇದೆಯೋ ಗೊತ್ತಿಲ್ಲ ಎಂದರು.

ಶ್ರೀಕೃಷ್ಣಪರಮಾತ್ಮನಿಗಿಂತಲೂ ಹೆಚ್ಚಿನ ತಂತ್ರಗಾರಿಕೆ ದೆಹಲಿ ನಾಯಕರು ಮಾಡುತ್ತಿದ್ಧಾರೆ: ಶ್ರೀಕೃಷ್ಣಪರಮಾತ್ಮನಿಗಿಂತಲೂ ಹೆಚ್ಚಿನ ತಂತ್ರಗಾರಿಕೆ ದೆಹಲಿ ನಾಯಕರು ಮಾಡುತ್ತಿದ್ಧಾರೆ. ನ್ಯಾಯಬದ್ಧ ತಂತ್ರಗಾರಿಕೆಯಿಂದಲೇ ಎಲ್ಲೆಡೆ ಬಿಜೆಪಿ ಗೆಲ್ಲುತ್ತಿದೆ, ಅನೇಕ ಕಡೆ ಹೊಸ ಹೊಸ ಮುಖಗಳಿಗೆ ಟಿಕೆಟ್ ನೀಡಿದರು. ಹಲವೆಡೆ ಹಿಂದಿನ ಎಂಎಲ್‌ಎಗಳಿಗೆ ಟಿಕೆಟ್ ನೀಡಿಲ್ಲ. ಅಲ್ಲಿಯು ಸರ್ಕಾರಗಳು ಬಂದಿವೆ. ಹಾಗಾಗೀ ದೆಹಲಿ ನಾಯಕರು ತಂತ್ರಗಾರಿಕೆ ಮಾಡಿದ ಮೇಲಷ್ಟೆ ಗೊತ್ತಾಗುತ್ತದೆ ಎಂದರು.

ಇನ್ಮುಂದೆ ಇಡೀ ದೇಶದ ನಾಯಕರು ಕರ್ನಾಟಕದಲ್ಲಿ ಇರುತ್ತಾರೆ: ನನ್ನಗಿಂತ ಹೆಚ್ಚು ಪ್ರಭಾವವಂತರು, ಬುದ್ದಿವಂತರು, ಕೆಲಸ ಮಾಡುವವರು ಇರಬಹುದು. ಸರ್ವೆಯಲ್ಲಿ ಕೇಂದ್ರದ ನಾಯಕರು ತೆಗೆಯುತ್ತಾರೆ. ಈ 224 ಸೀಟಿಗೆ ಅಭ್ಯರ್ಥಿಗಳನ್ನು ಹಾಕುವಾಗ ಪಕ್ಷಕ್ಕೆ, ದೇಶಕ್ಕೆ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ತೀರ್ಮಾನಿಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತಾರೆ. ಇನ್ಮುಂದೆ ಇಡೀ ದೇಶದ ನಾಯಕರು ಕರ್ನಾಟಕದಲ್ಲಿ ಇರುತ್ತಾರೆ. ಎಲ್ಲ ಚುನಾವಣೆಗಳು ಇದೇ ರೀತಿಯಲ್ಲಿ ನಡೆಯುತ್ತೇವೆ. ಚುನಾವಣೆ ಬಂದಾಗ ಚುನಾವಣೆಗೆ ತಯಾರಿ, ಉಳಿದಂತಹ ದಿನಗಳಲ್ಲಿ ಪಕ್ಷ ಸಂಘಟನೆ ಹಾಗೂ ಸಮಾಜಸೇವೆಯನ್ನು ಸಹ ಮಾಡುತ್ತಿರುತ್ತೇವೆ ಎಂದು ತಿಳಿಸಿದರು.

ಫೆ .5 ರಂದು ಪೇಜ್ ಪ್ರಮುಖರ ಸಮಾವೇಶ: ಜಿಲ್ಲಾ ಬಿಜೆಪಿ ವತಿಯಿಂದ ಪೇಜ್ ಪ್ರಮುಖರ ಸಮಾವೇಶ ಫೆ. 5ರಂದು ನಗರದ ಎನ್‌ಇಎಸ್ ಮೈದಾನದಲ್ಲಿ ಬೆಳಿಗ್ಗೆ 11 ಗಂಟೆಗೆ ಆಯೋಜಿಸಲಾಗಿದೆ ಎಂದು ಶಾಸಕ ಕೆಎಸ್ ಈಶ್ವರಪ್ಪ ತಿಳಿಸಿದರು. ಬಿಜೆಪಿ ಪೇಜ್ ಪ್ರಮುಖರ ಸಮಾವೇಶವನ್ನು ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್‌ ಉದ್ಘಾಟಿಸಲಿದ್ದಾರೆ, ನಗರದ ಸುಮಾರು 8426ಪೇಜ್ ಪ್ರಮುಖರು ಮತ್ತು ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದರು.

ಬಿಜೆಪಿ ವ್ಯವಸ್ಥೆಯಲ್ಲಿ ಮಹಾಶಕ್ತಿ ಕೇಂದ್ರಗಳಿವೆ. ನಗರದಲ್ಲಿ 69 ಶಕ್ತಿ ಕೇಂದ್ರಗಳಿವೆ. 299 ಬೂತ್‌ಗಳಿವೆ. ಪ್ರತಿ ಬೂತ್ ವ್ಯಾಪ್ತಿಯಲ್ಲಿ 5 ರಿಂದ 6 ಮನೆಗೆ ಒಬ್ಬರಂತೆ ಪೇಜ್ ಪ್ರಮುಖರನ್ನು ನಿಯೋಜನೆ ಮಾಡಲಾಗಿದೆ. ಮುಂಬರುವ ವಿಧಾನಸಭಾ ಚುನಾವಣೆ, ಮಹಾನಗರ ಪಾಲಿಕೆ ಚುನಾವಣೆ ಹಾಗೂ 2024ರ ಲೋಕಸಭಾ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಪೇಜ್ ಪ್ರಮುಖರು ಕಾರ್ಯನಿರ್ವಹಿಸಲಿದ್ದಾರೆ ಎಂದು ಹೇಳಿದರು.

ಸೈದ್ಧಾಂತಿಕವಾಗಿ ಮತದಾರರನ್ನು ಒಪ್ಪಿಸುವ ಕೆಲಸ ಮಾಡಲಿದ್ದಾರೆ: ಪಕ್ಷದ ಸಿದ್ಧಾಂತ, ದೇಶ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳನ್ನು ಜನರಿಗೆ ಪೇಜ್ ಪ್ರಮುಖರು ಮನವರಿಕೆ ಮಾಡಿಕೊಡಲಿದ್ದಾರೆ. ಸೈದ್ಧಾಂತಿಕವಾಗಿ ಮತದಾರರನ್ನು ಒಪ್ಪಿಸುವ ಕೆಲಸ ಮಾಡಲಿದ್ದಾರೆ. ಬೂತ್ ಮಟ್ಟದಲ್ಲಿ ವಿಜಯ್ ಸಂಕಲ್ಪ ಅಭಿಯಾನ ನಡೆಸಲಾಗುತ್ತಿದ್ದು, ಇದರಲ್ಲಿಯೂ ಪೇಜ್ ಪ್ರಮುಖರು ಭಾಗವಹಿಸುತ್ತಿದ್ದಾರೆ ಎಂದು ತಿಳಿಸಿದರು.

ಒಟ್ಟು ಐದು ಅಂಶಗಳನ್ನು ಜನರಿಗೆ ತಿಳಿಸುವ ಕೆಲಸ ಪೇಜ್ ಪ್ರಮುಖರದ್ದಾಗಿದೆ. ಮುಂದಿನ ದಿನಗಳಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸಮಾವೇಶ ನಡೆಸುವ ಗುರಿ ಇರಿಸಿಕೊಳ್ಳಲಾಗಿದೆ ಎಂದರು. ನಗರ ಬಿಜೆಪಿ ಅಧ್ಯಕ್ಷ ಜಗದೀಶ್, ಪಾಲಿಕೆ ಆಡಳಿತ ಪಕ್ಷದ ನಾಯಕ ಜ್ನಾನೇಶ್ವರ್, ಸದಸ್ಯ ಚೆನ್ನಬಸಪ್ಪ, ಕೆ.ವಿ.ಅಣ್ಣಪ್ಪ, ಎಂ.ಜಿ.ಬಾಲು ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದರು.

ಇದನ್ನೂ ಓದಿ:ಹುಣಸೋಡು ಸಂತ್ರಸ್ತರ ಪ್ರತಿಭಟನೆ: ಪರಿಹಾರ ನೀಡಲು ಬರಲ್ಲ ಎಂದ ಈಶ್ವರಪ್ಪ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.