ETV Bharat / state

ಸಿದ್ದರಾಮಯ್ಯ ಅಲ್ಪಸಂಖ್ಯಾತರನ್ನು ಕೇವಲ ಬಳಸಿಕೊಳ್ತಾರೆ ಎಂಬುದು ಈ ಚುನಾವಣೆಯಲ್ಲಿ ಸಾಬೀತು: ಈಶ್ವರಪ್ಪ

ಸಿದ್ದರಾಮಯ್ಯನವರು, ರೇವಣ್ಣ, ಹೆಚ್​ ವಿಶ್ವನಾಥ್, ಬೈರತಿ ಬಸವರಾಜ್, ಎಂ.ಟಿ.ಬಿ ನಾಗರಾಜ್ ಅವರನ್ನೇ ಕೈಬಿಟ್ಟರು. ಬಾದಾಮಿಯಲ್ಲಿ ಚಿಮ್ಮನಕಟ್ಟಿಗೂ ಮೋಸ ಮಾಡಿದ್ದರು. ಕುರುಬರನ್ನೇ ಬಿಡದ ಸಿದ್ದು, ಹಿಂದುಳಿದವರಿಗೆ ಏನು ಅನುಕೂಲ ಮಾಡಿಕೊಟ್ಟಿದ್ದೀರಿ ಎಂದು ಈಶ್ವರಪ್ಪ ಪ್ರಶ್ನಿಸಿದ್ದಾರೆ.

former-minister-eshwarappa-criticised-siddaramaiah
ಸಿದ್ದರಾಮಯ್ಯ ಅಲ್ಪಸಂಖ್ಯಾತರನ್ನು ಕೇವಲ ಬಳಸಿಕೊಳ್ತಾರೆ ಎಂಬುದು ರಾಜ್ಯಸಭೆ ಚುನಾವಣೆಯಲ್ಲಿ ಸಾಬೀತು: ಈಶ್ವರಪ್ಪ
author img

By

Published : Jun 11, 2022, 8:42 PM IST

ಶಿವಮೊಗ್ಗ: ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿ ಮೂರು ಸ್ಥಾನಗಳನ್ನು ಗೆಲ್ಲಲು ಸಿದ್ದರಾಮಯ್ಯನವರು ಸಹಕರಿಸಿದ್ದಾರೆ. ಅವರಿಗೆ ಅಭಿನಂದನೆಗಳು ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಸಿದ್ದರಾಮಯ್ಯವರಿಗೆ ಕುಟುಕಿದ್ದಾರೆ. ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ನೀವು ಮುಸ್ಲಿಂರ ಪರ ಎನ್ನುವುದು ಸುಳ್ಳು ಅಂತ ದೇಶದ ಜನರಿಗೆ ತಿಳಿದಿದೆ‌. ನೀವು ಮುಸ್ಲಿಮರನ್ನು ಬಳಸಿಕೊಂಡು ಕೊನೆಗೆ ಕೈ ಕೊಡುವುದು ಎಂಬುದನ್ನು ತೋರಿಸಿದ್ದೀರಿ ಎಂದಿದ್ದಾರೆ.

ಬಿಜೆಪಿಯನ್ನು ಕೋಮು ಶಕ್ತಿ ಎನ್ನುವುದನ್ನು ಬಿಡಬೇಕು. ಜೆಡಿಎಸ್ ಅನ್ನು ಯಾರೂ ನಂಬಲ್ಲ, ರಾಜ್ಯದ ಜನ ಬಿಜೆಪಿ ಪರ ಬೆಂಬಲ ಕೊಟ್ಟಿರುವುದು ಕಂಡು ಬಂದಿದೆ‌. ರಾಜ್ಯದಲ್ಲಿ ನಮಗೆ ಪೂರ್ಣ ಬಹುಮತ ನೀಡಿಲ್ಲ. ಇದರಿಂದ ನಮಗೆ ಮುಂಬರುವ ಚುನಾವಣೆಯಲ್ಲಿ ಪೂರ್ಣ ಬಹುಮತ ನೀಡಬೇಕು. ಕೇಂದ್ರ ಸರ್ಕಾರ ರಚನೆ ಮಾಡಲು ಮೋದಿ ಅವರಿಗೆ ಪೂರ್ಣ ಬಹುಮತ ನೀಡಿದಂತೆ ರಾಜ್ಯದಲ್ಲೂ ನೀಡಿ. ರಾಜ್ಯದಲ್ಲಿ ಸಂಘಟನೆ ವ್ಯವಸ್ಥಿತವಾಗಿ ನಡೆಯುತ್ತಿದೆ‌. ಸಂಘಟನೆ, ಅಭಿವೃದ್ಧಿ, ಮೋದಿ ಮೂರು ಅಂಶವನ್ನು ಇಟ್ಟುಕೊಂಡು ಜನ ನಮಗೆ ಬೆಂಬಲ‌ ‌ನೀಡಬೇಕು ಎಂದು ವಿನಂತಿಸಿಕೊಂಡರು.

ಸಿದ್ದರಾಮಯ್ಯ ಕುರುಬ ನಾಯಕರನ್ನೇ ರಾಜಕೀಯವಾಗಿ ಮುಗಿಸಿಬಿಟ್ಟರು: ಸಿದ್ದರಾಮಯ್ಯನವರು, ರೇವಣ್ಣ, ಹೆಚ್​ ವಿಶ್ವನಾಥ್, ಬೈರತಿ ಬಸವರಾಜ್, ಎಂ.ಟಿ.ಬಿ ನಾಗರಾಜ್ ಅವರನ್ನೇ ಕೈಬಿಟ್ಟರು. ಬಾದಾಮಿಯಲ್ಲಿ ಚಿಮ್ಮನಕಟ್ಟಿಗೂ ಮೋಸ ಮಾಡಿದ್ದರು. ಕುರುಬರನ್ನೇ ಬಿಡದ ಸಿದ್ದು, ಹಿಂದುಳಿದವರಿಗೆ ಏನು ಅನುಕೂಲ ಮಾಡಿಕೊಟ್ಟಿದ್ದೀರಿ. ವೀರಶೈವ ಲಿಂಗಾಯತ ಬೇರ್ಪಡಿಸಿ ಅಧಿಕಾರ ಕಳೆದುಕೊಂಡರು. ಹಿಜಾಬ್ ವಿಚಾರದಲ್ಲಿ ವಿದ್ಯಾರ್ಥಿನಿಯರಿಗೆ ಬುದ್ಧಿ ಹೇಳಲಿಲ್ಲ. ಕೋರ್ಟ್ ತೀರ್ಪು ಬಳಿಕ ಬಂದ್ ಮಾಡಿದಾಗ ಬುದ್ಧಿ ಹೇಳಲಿಲ್ಲ. ಹುಬ್ಬಳ್ಳಿ ಗಲಾಟೆಯಲ್ಲಿ ಬಂಧನವಾದವರನ್ನು ಅಮಾಯಕರು ಎಂದು ಕರೆದರು. ಅಮಾಯಕರ ಬಂಧನ ಅಂತ ಹೇಳಿದ್ರು. ಮುಸ್ಲಿಮರನ್ನು ಸಿದ್ದರಾಮಯ್ಯ ಹಾಳು ಮಾಡಿಬಿಟ್ಟರು. ದಲಿತ ಹಿಂದುಳಿದ, ಅಲ್ಪ ಸಂಖ್ಯಾತರ ಹೆಸರಿನಲ್ಲಿ ಸಿಎಂ ಆಗಿ ಕೈಬಿಟ್ಟರು ಎಂದು ಈಶ್ವರಪ್ಪ ಟೀಕಿಸಿದರು.

ಪೂರ್ಣ ಬಹುಮತ ಬಂದ್ರೆ ಆಪರೇಷನ್ ಆಗಲ್ಲ: ಪೂರ್ಣ ಬಹುಮತ ಬಂದ್ರೆ, ‌ಆಪರೇಷನ್ ಕಮಲ‌ ಮಾಡಲು ಅವಶ್ಯಕತೆ ಬರುವುದಿಲ್ಲ. ಇದರಿಂದ ನಮಗೆ ಪೂರ್ಣ ಬಹುಮತ ನೀಡಿ ಎಂದು ವಿನಂತಿಸಿ‌ಕೊಂಡರು. ಈಗಲೇ ಬರುವವರು ಪಕ್ಷಕ್ಕೆ ಬರಲಿ ಎಂದು ಆಹ್ವಾನ ನೀಡಿದರು. ವಿಶ್ವನಾಥ ಅವರಿಗೆ ಚುನಾವಣೆಯಲ್ಲಿ ನಿಲ್ಲಬೇಡಿ ಅಂದ್ರು, ನಿಂತ್ರು ಸೋತರು. ಸೋತವರಿಗೆ ಎಂಎಲ್ಸಿ ಮಾಡಿ ಸಚಿವರನ್ನಾಗಿ ಮಾಡಲು ಆಗುತ್ತದೆಯೇ ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ಅನ್ನು ಬಿಜೆಪಿಯ ಬಿ ಟೀಂ ಅಂತ ಕರೆದ್ರೆ, ನಮಗೆ ನಾಚಿಕೆ ಆಗುತ್ತದೆ : ಕಾಂಗ್ರೆಸ್ ಬಿಜೆಪಿಯ ಬಿ ಟೀಂ ಅಂತ ಹೇಳುವುದಕ್ಕೆ ನಮಗೂ ನಾಚಿಕೆ ಆಗುತ್ತದೆ. ಸಿದ್ದರಾಮಯ್ಯ ರಾಷ್ಟ್ರದ್ರೋಹಿ. ರಾಷ್ಟ್ರದ್ರೋಹಿ ಪಕ್ಷದ ನಾಯಕ ಸಿದ್ದರಾಮಯ್ಯ. ಸಿದ್ದರಾಮಯ್ಯನವರ ಧೂಳು ನಮಗೆ ಬೇಡ. ಆರ್​ಎಸ್​ಎಸ್​ನಲ್ಲಿ ಹಿಂದುಳಿದ- ದಲಿತರು ಪದಾಧಿಕಾರಿಗಳಿಲ್ಲ, ಅಲ್ಲಿ ಪದಾಧಿಕಾರಿಗಳಾದವರೆಲ್ಲರು ಹಿಂದುಗಳೇ ಎಂದರು.

ಇದನ್ನೂ ಓದಿ : ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡ ಮತದಾನ: ಇಬ್ಬರು ಶಾಸಕರ ಉಚ್ಚಾಟಿಸಲು ಜೆಡಿಎಸ್‍ ನಿರ್ಧಾರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.