ETV Bharat / state

ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ RQY ಅಂತಾರಾಷ್ಟೀಯ ಕೋಡ್: ಸಂಸದ ಬಿ.ವೈ.ರಾಘವೇಂದ್ರ

author img

By ETV Bharat Karnataka Team

Published : Aug 28, 2023, 10:35 PM IST

ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಸಂಬಂಧಿಸಿದಂತೆ ಸಂಸದ ಬಿ.ವೈ.ರಾಘವೇಂದ್ರ ಹೊಸ ಮಾಹಿತಿ ನೀಡಿದ್ದಾರೆ.

flights-from-shimoga-airport-will-start-from-august-31-says-mp-b-y-raghavendra
ಶಿವಮೊಗ್ಗ ಏರ್​ಪೋರ್ಟ್​ನಿಂದ ಆಗಸ್ಟ್ 31ರಿಂದ ವಿಮಾನ ಸಂಚಾರ ಆರಂಭ: ಸಂಸದ ಬಿ.ವೈ.ರಾಘವೇಂದ್ರ
ಸಂಸದ ಬಿ.ವೈ.ರಾಘವೇಂದ್ರ ಹೇಳಿಕೆ

ಶಿವಮೊಗ್ಗ: "ಆಗಸ್ಟ್ 31ರಿಂದ ಮಲೆನಾಡಿನ ಜನರಿಗೆ ವಿಮಾನ ಹಾರಾಟ ಸೌಲಭ್ಯ ಲಭ್ಯವಾಗಲಿದೆ" ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದರು. ಶಿವಮೊಗ್ಗದ ಬಿಜೆಪಿ ಕಚೇರಿಯಲ್ಲಿ ಇಂದು ಮಾತನಾಡಿದ ಅವರು, "ಈಗಾಗಲೇ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ RQY ಎಂದು ಅಂತಾರಾಷ್ಟೀಯ ಕೋಡ್ ನೀಡಲಾಗಿದೆ. ಆರ್​ಕ್ಯೂವೈ ಎಂದು ಸರ್ಚ್​ ಮಾಡಿದರೆ ಶಿವಮೊಗ್ಗದ ವಿಮಾನ ಹಾರಾಟದ ವೇಳಾಪಟ್ಟಿ ಸಿಗುತ್ತದೆ" ಎಂದರು.

"ಆಗಸ್ಟ್‌ 31ರಂದು ಯಡಿಯೂರಪ್ಪನವರ ನೇತೃತ್ವದಲ್ಲಿ ಇಂಡಿಗೋ ವಿಮಾನ ಬೆಳಗ್ಗೆ 9:50ಕ್ಕೆ ಬೆಂಗಳೂರಿನಿಂದ ಹೊರಟು, ಶಿವಮೊಗ್ಗಕ್ಕೆ 11:05 ತಲುಪಲಿದೆ. ಈ ವೇಳೆ ಜಿಲ್ಲಾ ಉಸ್ತುವಾರಿ ಸಚಿವರು, ಮೂಲಭೂತ ಸೌಕರ್ಯ ಸಚಿವರು ಸೇರಿದಂತೆ ಜಿಲ್ಲೆಯ ಎಲ್ಲಾ ಶಾಸಕರು, ಪರಿಷತ್ ಸದಸ್ಯರು, ಚುನಾಯಿತ ಪ್ರತಿನಿಧಿಗಳು ಉಪಸ್ಥಿತರಿರುತ್ತಾರೆ. ಇಂಡಿಗೋ ಮ್ಯಾನೇಜ್‌ಮೆಂಟ್​ನಿಂದ ಪ್ರೋಟೋಕಾಲ್​ ಪ್ರಕಾರ 15 ಸೀಟುಗಳು ಬುಕಿಂಗ್​ ಆಗಿರುವುದು ಬಿಟ್ಟು ಉಳಿದೆಲ್ಲವನ್ನು ಸಾರ್ವಜನಿಕರು ಬುಕಿಂಗ್ ಮಾಡಿಕೊಂಡಿದ್ದಾರೆ. ವಿಮಾನ ವಾಪಸ್ 11:25ಕ್ಕೆ ಶಿವಮೊಗ್ಗದಿಂದ ಹೊರಟು 12:25ಕ್ಕೆ ಬೆಂಗಳೂರು ತಲುಪಲಿದೆ" ಎಂದು ಮಾಹಿತಿ ನೀಡಿದರು.

"ಶಿವಮೊಗ್ಗ- ಬೆಂಗಳೂರು ವಿಮಾನ ಮಾರ್ಗ ಉಡಾನ್​ (RCS) ಯೋಜನೆಯದ್ದಲ್ಲ. ಸಾಫ್ಟ್‌ವೇರ್ ಮೂಲಕ ವಿಮಾನ ದರ ಏರಿಳಿತವಾಗುತ್ತಿರುತ್ತದೆ. ಸಮಯ, ಬುಕಿಂಗ್​ ಮತ್ತು ವಿಮಾನದ ಕನೆಕ್ಟಿವಿಟಿ ಆಧಾರದ ಮೇಲೆ ಸಾಫ್ಟ್‌ವೇರ್ ತಾನಾಗಿಯೇ ದರ ನಿಗದಿಪಡಿಸುತ್ತದೆ ಎಂದರು.

ಉಡಾನ್​ RCS ವಿಮಾನ ಮಾರ್ಗವಾಗಿ ತಿರುಪತಿ, ಚೆನ್ನೈ, ಗೋವಾ ಘೋಷಣೆಯಾಗಿದೆ. ಈ ಮಾರ್ಗದಲ್ಲಿ ವಿಮಾನಗಳ ಹಾರಾಟ ಇನ್ನೊಂದೆರಡು ತಿಂಗಳಲ್ಲಿ ಪ್ರಾರಂಭವಾಗಲಿದೆ. ಈ ವಿಮಾನಗಳಿಗೆ RCS ಮಾರ್ಗಸೂಚಿ ಅನ್ವಯ ಪ್ರತಿ ಸೀಟಿಗೆ ನಮ್ಮ ಸರ್ಕಾರ 50%ರಷ್ಟು ಸಬ್ಸಿಡಿ ಕೊಡುತ್ತದೆ" ಎಂದು ತಿಳಿಸಿದರು.

"ಆಗಸ್ಟ್‌ 31ನೇ ತಾರೀಖು ಐತಿಹಾಸಿಕ ಕ್ಷಣವಾಗಲಿದೆ. ಮಧ್ಯ ಕರ್ನಾಟಕದ ಕೇಂದ್ರ ನಮ್ಮ ಶಿವಮೊಗ್ಗ. ಸುಮಾರು ವರ್ಷಗಳ ಕನಸು, ತಪಸ್ಸು, ಯಡಿಯೂರಪ್ಪನವರ ಕೆಲಸ, ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಸರ್ಕಾರ ಉಡಾನ್​ ಯೋಜನೆಯನ್ನು ಜಾರಿಗೆ ತಂದಿದ್ದರ ಪ್ರತಿಫಲ ಇಂದು ಎಲ್ಲ ವಿಮಾನ ನಿಲ್ದಾಣಗಳಲ್ಲಿ ವಿಮಾನ ಹಾರಾಟ ಮಾಡುತ್ತಾ ಸಾರ್ವಜನಿಕರಿಗೆ ಸೇವೆ ಒದಗಿಸುತ್ತಿವೆ" ಎಂದು ಹೇಳಿದರು.

"ವಿಶೇಷವಾಗಿ ಯಾವುದೇ ವಿಮಾನ ನಿಲ್ದಾಣ ನಿರ್ಮಾಣವಾದ ಮೇಲೆ ವಿಮಾನ ಹಾರಾಟಕ್ಕೆ ಎರಡ್ಮೂರು ವರ್ಷ ಸಮಯ ತೆಗೆದುಕೊಳ್ಳುತ್ತದೆ. ಆದರೆ ಶಿವಮೊಗ್ಗ ವಿಮಾನ ನಿಲ್ದಾಣ ನಿರ್ಮಾಣವಾದ 6 ತಿಂಗಳಿಗೆ ಈ ಎಲ್ಲ ಸೌಲಭ್ಯವನ್ನು ನಮ್ಮ ಸರ್ಕಾರ ಕೊಟ್ಟಿದೆ. ಇದರಲ್ಲಿ ನಮ್ಮ ಅಧಿಕಾರಿಗಳ ಶ್ರಮ ಇದೆ. ಮುಂದಿನ 10 ವರ್ಷಗಳಲ್ಲಿ ನಮ್ಮ ಶಿವಮೊಗ್ಗ ವಿಮಾನ ನಿಲ್ದಾಣ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಿ ಬದಲಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ವಿಮಾನ ನಿಲ್ದಾಣಕ್ಕೆ ಕುವೆಂಪು ವಿಮಾನ ನಿಲ್ದಾಣ ಎಂಬ ಹೆಸರನ್ನು ಕೇಂದ್ರ ಸರ್ಕಾರವೇ ನಾಮಕರಣ ಮಾಡಿದೆ" ಎಂದು ಬಿ.ವೈ.ರಾಘವೇಂದ್ರ ಸ್ಪಷ್ಟನೆ ನೀಡಿದರು.

ಇದನ್ನೂ ಓದಿ: ರಾಯಚೂರು: 'ಕಲ್ಯಾಣ ರಥ' ಮಲ್ಟಿ ಎಕ್ಸಲ್​ ವೋಲ್ವೋ ಬಸ್ ಸಂಚಾರಕ್ಕೆ ಸಚಿವ ರಾಮಲಿಂಗಾರೆಡ್ಡಿ ಚಾಲನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.