ಶಿವಮೊಗ್ಗ : ಶಾರ್ಟ್ ಸರ್ಕ್ಯೂಟ್ನಿಂದ ಭಾರತೀಯ ಸ್ಟೇಟ್ ಬ್ಯಾಂಕ್( SBI) ಕಚೇರಿಯಲ್ಲಿರುವ ಪೀಠೋಪಕರಣ ಸೇರಿದಂತೆ ಮಹತ್ವದ ದಾಖಲೆಗಳು ಸುಟ್ಟು ಕರಕಲಾದ ಘಟನೆ ಶಿವಮೊಗ್ಗದ ವಿದ್ಯಾನಗರದಲ್ಲಿ ನಡೆದಿದೆ.
ಇಂದು ಬೆಳಗ್ಗೆ ಸುಮಾರು 10 ಗಂಟೆಗೆ ಬ್ಯಾಂಕ್ನಲ್ಲಿ ಹೊಗೆ ಕಾಣಿಸಿಕೊಂಡಿತ್ತು. ತಕ್ಷಣ ಸ್ಥಳೀಯರು ಅಗ್ನಿ ಶಾಮಕದಳದವರಿಗೆ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಅಗ್ನಿ ಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ. ಆದರೆ, ಈ ವೇಳೆಗಾಗಲೇ ಬ್ಯಾಂಕ್ನಲ್ಲಿದ್ದ ದಾಖಲಾತಿ ಪೇಪರ್ಗಳಿಗೂ ಬೆಂಕಿ ತಗುಲಿದ್ದರಿಂದ ಅವು ಸುಟ್ಟು ಭಸ್ಮವಾಗಿವೆ.
ಜೊತೆಗೆ ಕಂಪ್ಯೂಟರ್ ಸೇರಿದಂತೆ ಸಿಸಿ ಕ್ಯಾಮೆರಾದ ಸರ್ವರ್ಗಳು ಸುಟ್ಟು ಹೋಗಿವೆ. ಹೀಗಾಗಿ, ಬ್ಯಾಂಕ್ನ ಯಾವುದೇ ದಾಖಲೆಗಳು ಸಿಗದಂತಾಗಿದೆ. ಘಟನಾ ಸ್ಥಳದಲ್ಲಿ ಅಗ್ನಿ ಶಾಮಕ ದಳದ ಠಾಣೆಯ ಅಶೋಕ್, ಪ್ರವೀಣ್ ಸೇರಿ ಸಿಬ್ಬಂದಿ ಇದ್ದರು. ಈ ಕುರಿತು ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಓದಿ: ಅಸಲಿ ಪೊಲೀಸರ ಅತಿಥಿಗಳಾದ ನಕಲಿ ಪೊಲೀಸರು.. ಹೈವೇನಲ್ಲಿ ವಾಹನಸವಾರರಿಂದ ಹಣ ಪೀಕುತ್ತಿದ್ದರು..