ETV Bharat / state

ಸಚಿವ ಕೋಟಾ ಶ್ರೀನಿವಾಸ್ ಪೂಜಾರಿಗೆ ಶಿವಮೊಗ್ಗ ಜಿಲ್ಲಾ ಬಿಜೆಪಿಯಿಂದ ಸನ್ಮಾನ - MP BY Raghavendra

ಸಚಿವರಾದ ಮೇಲೆ ಮೊದಲ ಭಾರಿಗೆ ಶಿವಮೊಗ್ಗ ಜಿಲ್ಲೆಗೆ ಆಗಮಿಸಿದ ಮುಜುರಾಯಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿಯನ್ನು ಜಿಲ್ಲಾ ಬಿಜೆಪಿ ಘಟಕದ ವತಿಯಿಂದ ಸನ್ಮಾನಿಸಲಾಯಿತು.

ಸಚಿವ ಕೋಟಾ ಶ್ರೀನಿವಾಸ್ ಪೂಜಾರಿಗೆ ಶಿವಮೊಗ್ಗ ಜಿಲ್ಲಾ ಬಿಜೆಪಿಯಿಂದ ಸನ್ಮಾನ
author img

By

Published : Sep 4, 2019, 9:53 PM IST

ಶಿವಮೊಗ್ಗ: ಮುಜಾರಾಯಿ ಖಾತೆ ಸಚಿವರಾಗಿ ಆಯ್ಕೆಯಾಗಿರುವ ಕೋಟಾ ಶ್ರೀನಿವಾಸ್ ಪೂಜಾರಿಯವರನ್ನು ಜಿಲ್ಲಾ ಬಿಜೆಪಿ ವತಿಯಿಂದ ಸನ್ಮಾನಿಸಲಾಯಿತು.

ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸಚಿವರಿಗೆ ಶಾಲು ಹೊದಿಸಿ, ಹಾರ ಹಾಕಿ ಸನ್ಮಾನ ಮಾಡಲಾಯಿತು. ಸಚಿವರಾದ ಮೇಲೆ ಕೋಟಾ ಶ್ರೀನಿವಾಸ್ ಪೂಜಾರಿ ಪ್ರಥಮ ಭಾರಿ ಶಿವಮೊಗ್ಗ ಜಿಲ್ಲೆಗೆ ಆಗಮಿಸಿದ್ದರಿಂದ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಸಚಿವ ಕೋಟಾ ಶ್ರೀನಿವಾಸ್ ಪೂಜಾರಿಗೆ ಶಿವಮೊಗ್ಗ ಜಿಲ್ಲಾ ಬಿಜೆಪಿಯಿಂದ ಸನ್ಮಾನ

ಸಚಿವರು ನನಗೆ ಮೀನು ತಿನ್ನಿಸಿಲ್ಲ ಎಂದು ಹಾಸ್ಯ ಚಟಾಕಿ ಹಾರಿಸಿದ ಸಂಸದರು:

ಸಚಿವರಿಗೆ ಸನ್ಮಾನ ನಡೆಸಿದ ಬಳಿಕ ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಉಡುಪಿಯ ಬೈಂದೂರು ಕ್ಷೇತ್ರ ಸೇರಿಸಿದ ಮೇಲೆ ಮಲೆನಾಡು ಕರಾವಳಿ ಒಂದಾಗಿದೆ. ಪಕ್ಷಕ್ಕೆ ಶಿಸ್ತಿನಿಂದ ದುಡಿದ ಪರಿಣಾಮ ಇಂದು ಕೋಟಾ ಶ್ರೀನಿವಾಸ ಪೂಜಾರಿಯವರು ಸಚಿವರಾಗಿದ್ದಾರೆ. ಶ್ರೀನಿವಾಸ ಪೂಜಾರಿ ಸಚಿವರಾಗಿದ್ದರೂ ಸಹ ತಮಗೆ ಮೀನು ತಿನ್ನಿಸಿಲ್ಲ ಎಂದು ಹಾಸ್ಯ ಚಟಾಕಿ ಹಾರಿಸಿದರು.

ನಾನು ಗ್ರಾಮ ಪಂಚಾಯಿತಿಯಿಂದ ವಿಧಾನಸೌಧಕ್ಕೆ ಹೋದವನು:

ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಮಾತನಾಡಿ, ನಾನು ಗ್ರಾಮ ಪಂಚಾಯತ್, ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯಿತಿ, ಜಿಲ್ಲಾ ಬಿಜೆಪಿ‌ ಅಧ್ಯಕ್ಷನಾದ ನಂತರ ಶಾಸಕನಾದೆ. ಎಲ್ಲ ಕಡೆ ನನ್ನನ್ನೇ ಯಾಕೆ ಕಳುಹಿಸಿದ್ರು ಅಂದ್ರೆ ಆಗ ಬಿಜೆಪಿಯಿಂದ ಯಾರು ಅಭ್ಯರ್ಥಿ‌ ಆಗುವುದಕ್ಕೆ ಮುಂದೆ ಬರುತ್ತಿರಲಿಲ್ಲ. ಒಮ್ಮೆ ನನ್ನನ್ನು ಜಿಲ್ಲಾ ಬಿಜೆಪಿ ಅಧ್ಯಕ್ಷನಾಗಬೇಕು ಎಂದಾಗ, ಕಚೇರಿ‌ಗೆ ಖರ್ಚು ಮಾಡಲು ನನ್ನ ಬಳಿ ಹಣ ಇಲ್ಲದ ಕಾರಣ ನಾನು ಅದನ್ನು ನಿರಾಕರಿಸಿದೆ, ಆದ್ರೆ ಪಕ್ಷದ ಹಿರಿಯರು ಪಕ್ಷದ ಕಚೇರಿ‌ ನಿರ್ವಹಣೆಗೆ ಅಲ್ಲದೇ ನಮ್ಮ ಮನೆ ನಿರ್ವಹಣೆಗೆ ಹಣ ನೀಡುವುದಾಗಿ ಹೇಳಿದ್ದರು ಎಂದರು.

ಕೋಟಿ ಕೊಟ್ಟು ಅಧ್ಯಕ್ಷರಾಗೋರಿದ್ದಾರೆ..ಆಗ ನನಗೆ ನಾಯಕರೇ ಹಣ ಕೊಟ್ಟು ಪ್ರೆಸಿಡೆಂಟ್​ ಮಾಡಿದ್ದರು:

ಒಂದು ಕೋಟಿ ರೂ. ಕೊಡುತ್ತೇನೆ ನಮ್ಮನ್ನು ಜಿಲ್ಲಾಧ್ಯಕ್ಷರನ್ನಾಗಿ ಮಾಡಿ ಎಂದು‌ ಬಹಳ‌ ಜನ ಬರಬಹುದು. ಆದ್ರೆ, ಪಕ್ಷದ, ಸಂಘಟನೆಯ ಬೆಂಬಲದಿಂದ ನಾನು ಸಚಿವ ಸ್ಥಾನಕ್ಕೆ ಬಂದಿರುವೆ. ಗ್ರಾಮ ಪಂಚಾಯತ್‌ ಸದಸ್ಯನಾದಾಗ ನಾನು ಸೈಕಲ್​ನಲ್ಲಿ ಹೋಗುತ್ತಿದ್ದೆ. ಈಗ ಸಚಿವನಾದ ಮೇಲೆ ನಾನು ಭದ್ರತೆಯಲ್ಲಿ ಹೋಗುವಾಗ ಜನ ನನ್ನನ್ನು ನೋಡುತ್ತಾರೆ. ನನಗೆ ಧನ್ಯತಾ ಭಾವ ಮೂಡುತ್ತದೆ ಎಂದು ತಮ್ಮ ಅನುಭವ ಬಿಚ್ಚಿಟ್ಟರು.

Intro:ಮುಜಾರಾಯಿ ಖಾತೆ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ರವರನ್ನು ಜಿಲ್ಲಾ ಬಿಜೆಪಿ ವತಿಯಿಂದ ಆತ್ಮೀಯವಾಗಿ ಸನ್ಮಾನ ಮಾಡಲಾಯಿತು. ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸಚಿವರಿಗೆ ಶಾಲು ಹೊದಿಸಿ, ಹಾರ ಹಾಕಿ ಸನ್ಮಾನ ಮಾಡಲಾಯಿತು. ಸಚಿವರಾದ ಮೇಲೆ ಕೋಟಾ ಶ್ರೀನಿವಾಸ್ ಪೂಜಾರಿರವರು ಪ್ರಥಮ ಭಾರಿ ಜಿಲ್ಲೆಗೆ ಆಗಮಿಸಿದ್ದರಿಂದ ಜಿಲ್ಲಾ ಬಿಜೆಪಿ‌ ಆತ್ಮೀಯವಾಗಿ ಸನ್ಮಾನ ನಡೆಸಿ ಸಣ್ಣದೂಂದು ಕಾರ್ಯಕ್ರಮ ನಡೆಸಿತು.

ಸಚಿವರು ನನಗೆ ಮೀನು ತಿನ್ನಿಸಿಲ್ಲ ಎಂದು ಹಾಸ್ಯ ಚಟಾಕಿ ಹಾರಿಸಿದ ಸಂಸದರು-

ಸಚಿವರಿಗೆ ಸನ್ಮಾನ ನಡೆಸಿದ ನಂತ್ರ ಮಾತನಾಡಿದ ಸಂಸದ ಬಿ.ವೈ.ರಾಘವೇಂದ್ರ ರವರು, ಶಿವಮೊಗ್ಗ ಲೋಕಸಭ ಕ್ಷೇತ್ರಕ್ಕೆ ಉಡುಪಿಯ ಬೈಂದೂರು ಕ್ಷೇತ್ರ ಸೇರಿಸಿದ ಮೇಲೆ ಮಲೆನಾಡು ಕರಾವಳಿ ಒಂದಾಗಿದೆ. ಶ್ರೀನಿವಾಸ ಪೂಜಾರಿರವರು ಸಚಿವರಾಗಿದ್ರು ಸಹ ತಮಗೆ ಮೀನು ತಿನ್ನಿಸಿಲ್ಲ ಎಂದು ಹಾಸ್ಯ ಚಟಾಕಿ ಹಾರಿಸಿದರು. ಈ ವೇಳೆ ಸಭೆ ನಗೆಗಡಲಲ್ಲಿ ತೆಲಿದು. ಪಕ್ಷಕ್ಕೆ ಶಿಸ್ತಿನಿಂದ ದುಡಿದ ಪರಿಣಾಮ ಇಂದು ಕೋಟಾ ಶ್ರೀನಿವಾಸ ಪೂಜಾರಿ ರವರು ಸಚಿವರಾಗಿದ್ದಾರೆ ಎಂದು ಕಾರ್ಯಕರ್ತರಿಗೆ ಪೂಜಾರಿರವರ ಉದಾಹರಣೆ ನೀಡಿದರು.

Body:ನಂತ್ರ ಮಾತನಾಡಿದ ಸಚಿವ ಕೋಟಾ ಶ್ರೀನಿವಾಸ ಪೂಜಾರಿರವರು, ನಾನು ಮೊದಲು ಗ್ರಾಮ ಪಂಚಾಯತಿ, ತಾಲೂಕು ಪಂಚಾಯತಿ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಬಿಜೆಪಿ‌ ಅಧ್ಯಕ್ಷ ನಂತ್ರ‌ ಶಾಸಕನಾದೆ. ಎಲ್ಲಾ‌ ಕಡೆ ನನ್ನನ್ನೆ ಯಾಕೆ ಕಳುಹಿಸಿದ್ರು ಅಂದ್ರೆ ಆಗ ಬಿಜೆಪಿಯಿಂದ ಯಾರು ಅಭ್ಯರ್ಥಿ‌ ಆಗುವುದಕ್ಕೆ ಮುಂದೆ ಬರುತ್ತಿರಲಿಲ್ಲ. ಒಮ್ಮೆ ನನಗೆ ಜಿಲ್ಲಾ ಬಿಜೆಪಿ ಅಧ್ಯಕ್ಷನಾಗಬೇಕು ಎಂದಾಗ ಕಚೇರಿ‌ಗೆ ಖರ್ಚು ಮಾಡಲು ಹಣ ನನ್ನ ಬಳಿ ಇಲ್ಲದ ಕಾರಣ ನಾನು ಅದನ್ನು ನಿರಾಕರಿಸಿದೆ, ಆದ್ರೆ ಪಕ್ಷದ ಹಿರಿಯರು ಪಕ್ಷದ ಕಚೇರಿ‌ ನಿರ್ವಹಣೆಗೆ ಅಲ್ಲದೆ ನಮ್ಮ ಮನೆ ನಿರ್ವಹಣೆಗೆ ಹಣ ನೀಡುವುದಾಗಿ ಹೇಳಿದ್ರು.

Conclusion:ನಿನ್ನನ್ನು ಬಿಟ್ಟು ಬೇರೆಯವರನ್ನು ಅಧ್ಯಕ್ಷರನ್ನಾಗಿ‌ ನೇಮಕ ಮಾಡಲು‌ ಆಗಲ್ಲ ಎಂದರು. ಇಂದು ಕೋಟಿ ರೂ ಕೊಡುತ್ತೆನೆ ನಮ್ಮನ್ನು ಜಿಲ್ಲಾಧ್ಯಕ್ಷರನ್ನಾಗಿ ಮಾಡಿ ಎಂದು‌ ಬಹಳ‌ ಜನ ಬರಬಹುದು. ಆದ್ರೆ, ಪಕ್ಷದ ಸಂಘಟನೆಯ ಬೆಂಬಲ ದಿಂದ ನಾನು ಸಚಿವ ಸ್ಥಾನಕ್ಕೆ ಬಂದಿರುವೆ. ಗ್ರಾಮ ಪಂಚಾಯತಿ‌ ಸದಸ್ಯನಾದಾಗ ನಾನು ಸೈಕಲ್ ನಲ್ಲಿ ಹೋಗುತ್ತಿದ್ದೆ, ಈಗ ಸಚಿವನಾದ ಮೇಲೆ ನಾನು ಎಸ್ಸಕಾರ್ಟ್ ನಲ್ಲಿ ಹೋಗುವಾಗ ಜನ ನನ್ನನ್ನು ನೋಡಿದಾಗ ನನಗೆ ಧನ್ಯತ ಭಾವ ಮೂಡುತ್ತದೆ ಎಂದು ತಮ್ಮ ಅನುಭವ ಬಿಚ್ಚಿಟ್ಟರು. ಈ ವೇಳೆ ಜಿಲ್ಲಾಧ್ಯಕ್ಷ ರುದ್ರೇಗೌಡ, ಮಾಜಿ ಎಂಎಲ್ಸಿ ಭಾನು ಪ್ರಕಾಶ್ ಸೇರಿ ಇತರರು ಹಾಜರಿದ್ದರು.

ಬೈಟ್: ಬಿ.ವೈ.ರಾಘವೇಂದ್ರ. ಸಂಸದರು.

ಬೈಟ್: ಕೋಟಾ ಶ್ರೀನಿವಾಸ ಪೂಜಾರಿ. ಸಚಿವರು.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.