ಶಿವಮೊಗ್ಗ: ಪೊಲೀಸ್ ಹಾಗೂ ಅಬಕಾರಿ ಅಧಿಕಾರಿಗಳು ಜಂಟಿ ದಾಳಿ ನಡೆಸಿ 110 ಲೀ ಕಳ್ಳಭಟ್ಟಿ ಕೊಳೆಯನ್ನು ವಶಕ್ಕೆ ಪಡೆದಿದ್ದಾರೆ.
ಸಾಗರ ತಾಲೂಕು ಹೊಸಕೊಪ್ಪದ ಪ್ರಕಾಶ್ ಎಂಬವರ ಅಡಿಕೆ ತೋಟದಲ್ಲಿ ಕಳ್ಳಭಟ್ಟಿ ಸಂಗ್ರಹ ಮಾಡಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು 4 ಕ್ಯಾನ್ ಹಾಗೂ 2 ಕೊಡ ಸೇರಿ ಒಟ್ಟು 110 ಲೀ ಕಳ್ಳಭಟ್ಟಿ ಕೊಳೆಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಈ ಕುರಿತು ಸಾಗರ ಅಬಕಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಧಿಕಾರಿಗಳ ತಂಡದಲ್ಲಿ ಸಾಗರ ಡಿವೈಎಸ್ಪಿ ವಿನಾಯಕ್ ಹಾಗೂ ಗ್ರಾಮಾಂತರ ಪಿಎಸ್ ಐ ಭರತ್, ಅಬಕಾರಿ ಪಿಎಸ್ಐ ಸತೀಶ್ ಇದ್ದರು.