ETV Bharat / state

ಚುನಾವಣೆಯ ಸೋಲು ನನ್ನ ವೈಯಕ್ತಿಕ ಸೋಲೆ ಹೊರತು ಪಕ್ಷದ ಸೋಲಲ್ಲ : ಎಚ್.ಸಿ. ಯೋಗೀಶ್

author img

By

Published : May 15, 2023, 11:06 PM IST

ಮುಂದಿನ ದಿನಗಳಲ್ಲಿ ಜನರ ಮನಸ್ಸನ್ನು ಗೆಲ್ಲುವ ಪ್ರಯತ್ನ ಮಾಡುತ್ತೇನೆ ಎಂದು ಎಚ್.ಸಿ. ಯೋಗೀಶ್ ಹೇಳಿದರು.

ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಎಚ್.ಸಿ.ಯೋಗೀಶ್
ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಎಚ್.ಸಿ.ಯೋಗೀಶ್

ಚುನಾವಣೆಯ ಸೋಲು ನನ್ನ ವೈಯಕ್ತಿಕ ಸೋಲು.

ಶಿವಮೊಗ್ಗ : ಚುನಾವಣೆಯ ಸೋಲು ನನ್ನ ವೈಯಕ್ತಿಕ ಸೋಲೆ ಹೊರತು ಪಕ್ಷದ ಸೋಲಲ್ಲ ಎಂದು ಶಿವಮೊಗ್ಗ ನಗರ ಕ್ಷೇತ್ರದ ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಎಚ್.ಸಿ. ಯೋಗೀಶ್ ಹೇಳಿದರು. ಸೋಮವಾರ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಈ ಸೋಲಿನಿಂದ ವಿಚಲಿತನಾಗುವುದಿಲ್ಲ. ನಾನು ಸೋತರೂ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಪಕ್ಷದ ಎಲ್ಲಾ ಭರವಸೆಗಳನ್ನು ನಗರದ ಜನರಿಗೆ ಮುಟ್ಟಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.

ಜನ ನನ್ನನ್ನು ವೈಯಕ್ತಿಕವಾಗಿ ತಿರಸ್ಕರಿಸಿದ್ದಾರೆ. ಮುಂದಿನ ದಿನಗಳಲ್ಲಿ ಮನಸ್ಸನ್ನು ಗೆಲ್ಲುವ ಪ್ರಯತ್ನ ಮಾಡುತ್ತೇನೆ. ನಗರದ ಜನರು ನನಗೆ ಮತ ನೀಡಿ ಹಾರೈಸಿದ್ದಾರೆ. ಅವರೆಲ್ಲರಿಗೂ ನಾನು ಧನ್ಯವಾದ ಅರ್ಪಿಸುತ್ತೇನೆ. ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿರುವವರು ಸಹ ನಮ್ಮ ಜೊತೆಗಿರುತ್ತಾರೆ. ನಾವು ಅವರ ಜೊತೆಗಿರುತ್ತೇವೆ. ಎಲ್ಲರೂ ಸೇರಿ ಅಭಿವೃದ್ಧಿ, ಶಾಂತಿ ನೆಲೆಸುವಂತೆ ಮಾಡುತ್ತೇವೆ ಎಂದು ಎಚ್.ಸಿ.ಯೋಗೀಶ್ ಹೇಳಿದರು.

ಕಾಂಗ್ರೆಸ್​ ಪಕ್ಷದಲ್ಲಿ ಟಿಕೆಟ್​ ಸಿಗದೆ ಪಕ್ಷವನ್ನು ಧಿಕ್ಕರಿಸಿ ಹೋದವರ ಬಗ್ಗೆ ಯಾವುದೇ ಅನುಕಂಪ ತೋರಿಸುವುದಿಲ್ಲ. ಕಾಂಗ್ರೆಸ್ ಪಕ್ಷದಲ್ಲಿದ್ದು, ಅಧಿಕಾರ ಅನುಭವಿಸಿ ಪಕ್ಷ ಬಿಟ್ಟು ಹೋದವರ ಜೊತೆ ಮತ್ತೆ ಸ್ನೇಹ ಅಸಾಧ್ಯ. ಅವರನ್ನು ಈಗಾಗಲೇ ಪಕ್ಷದಿಂದ ಉಚ್ಚಾಟಿಸಲಾಗಿದೆ. ಅವರನ್ನು ಯಾವುದೇ ಕಾರಣಕ್ಕೂ ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂದು ಎಚ್.ಸಿ. ಯೋಗೀಶ್ ತಿಳಿಸಿದರು.

ಸೋಲಿನಿಂದ ವಿಚಲಿತನಾಗಿಲ್ಲ : ಅಯನೂರು ಮಂಜುನಾಥ್ : ಚುನಾವಣೆ ಸೋಲಿನಿಂದ ನಾನು ವಿಚಲಿತವಾಗಿಲ್ಲ, ಶಾಂತಿ ಕಾಪಾಡುವ ನಮ್ಮ ಪ್ರಯತ್ನದಲ್ಲಿ ಹಿನ್ನಡೆಯಾಗುವುದಿಲ್ಲ ಎಂದು ಶಿವಮೊಗ್ಗ ನಗರದ ಸೋತ ಜೆಡಿಎಸ್ ಅಭ್ಯರ್ಥಿ ಆಯನೂರು ಮಂಜುನಾಥ್ ತಿಳಿಸಿದರು. ತಮ್ಮ ಪಕ್ಷದ ಚುನಾವಣಾ ಕಾರ್ಯಾಲಯದಲ್ಲಿ ಮಾತನಾಡಿದ ಅವರು, ನಮ್ಮ ನಿರೀಕ್ಷೆಗೆ ವಿರುದ್ಧವಾಗಿ ಮತಗಳು ಬಂದಿವೆ. ಅತ್ಯಂತ ವಿನಯ ಪೂರ್ವಕವಾಗಿ ಸೋಲನ್ನು ಸ್ವೀಕರಿಸಿದ್ದೇವೆ ಎಂದರು.

ಚುನಾವಣಾ ಫಲಿತಾಂಶದಲ್ಲಿ ಸ್ವಲ್ಪ ನಿರಾಸೆಯಾಗಿದೆ. ಜನರ ಮುಂದೆ ಇಟ್ಟ ವಿಷಯಗಳಿಗೆ ಜನ ಬೆಂಬಲ ಸಿಗಲಿಲ್ಲ ಎಂಬ ನಿರಾಸೆ ಇದೆ. ಶಿವಮೊಗ್ಗ ನಗರದಲ್ಲಿ ಶಾಂತಿ, ಸೌಹಾರ್ದತೆ, ಸರ್ಕಾರಿ ನೌಕರರ ಸಮಸ್ಯೆ ಇವುಗಳನ್ನು ಮುಂದಿಟ್ಟು ಚುನಾವಣೆಗೆ ಸ್ಪರ್ಧೆ ಮಾಡಿದ್ದೆವು. ಯಾರೂ ನಿರೀಕ್ಷೆ ಮಾಡದಷ್ಟು ಕಡಿಮೆ ಮತಗಳು ಬಂದಿವೆ. ಸೋಲು ನಮಗೆ ಬೇಸರ ತರಿಸಿಲ್ಲ. ಜನ ನಮ್ಮ ವಿಚಾರ ತಿಳಿದುಕೊಂಡಿಲ್ಲ ಎಂಬ ನಿರಾಸೆ ಇದೆ ಎಂದು ಬೇಸರ ವ್ಯಕ್ತಪಡಿಸಿದರು.

ಬಿಜೆಪಿಗೆ‌ ನಿರೀಕ್ಷಿತ ಫಲಿತಾಂಶ ಸಿಕ್ಕಿದೆ : ಬಿಜೆಪಿಗೆ ಅನಿರೀಕ್ಷಿತ ಫಲಿತಾಂಶ ಸಿಕ್ಕಿದೆ. ಬೆಲೆ ಏರಿಕೆ, ಆಡಳಿತ ವಿರೋಧಿ ನೀತಿ, ಕಾಂಗ್ರೆಸ್ ನ ಭರವಸೆಗಳು ಜನರನ್ನು ಸೆಳೆದಿವೆ. ಪ್ರಣಾಳಿಕೆಯಲ್ಲಿನ ಅಂಶಗಳನ್ನು ಅವರು ಪೂರೈಸಬೇಕು. ರಾಜ್ಯದಲ್ಲಿ ಬಿಜೆಪಿಗೆ ಬಹುದೊಡ್ಡ ಪೆಟ್ಟು ಬಿದ್ದಿದೆ. ಅಧಿಕಾರದಲ್ಲಿದ್ದರೆ ಏನು ಬೇಕಾದರೂ ಮಾಡಬಹುದು ಎನ್ನುತ್ತಿದ್ದವರನ್ನು ಬೇಜವಾಬ್ದಾರಿ‌ ಹೇಳಿಕೆ ನೀಡುತ್ತಿದ್ದ ಎಲ್ಲರನ್ನೂ ಜನತೆ ಮನೆಗೆ ಕಳುಹಿಸಿದ್ದಾರೆ. ಒಳ ಮೀಸಲು ವರ್ಗೀಕರಣ ಹಿನ್ನಡೆ ತಂದಿದೆ. ರಾಜ್ಯದ ಜನ‌ ತಮಗೆ ಬೇಕಾದ ಸರ್ಕಾರವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಹಿಂದುತ್ವದ ಆಧಾರದಲ್ಲಿ ಮತ ಕೇಳಿದ ಬಿಜೆಪಿ ಅಭ್ಯರ್ಥಿ ಯಾವ ರೀತಿ ಅಭಿವೃದ್ಧಿ ಮಾಡುತ್ತಾರೆ ಎಂಬುದನ್ನು ನೋಡಬೇಕಿದೆ. ಗೆದ್ದ ಅಭ್ಯರ್ಥಿಗೆ ಅಭಿನಂದನೆ, ಶಾಂತಿ ನೆಲೆಸಲು ಸಹಕರಿಸಬೇಕು ಅಯನೂರು ಮಂಜುನಾಥ್ ಎಂದು ಹೇಳಿದರು.‌

ಇದೇ ವೇಳೆ ಮಾತನಾಡಿದ ಮಾಜಿ ಶಾಸಕ ಕೆ.ಬಿ.ಪ್ರಸನ್ನ ಕುಮಾರ್, ಕಡಿಮೆ‌ ಅವಧಿಯಲ್ಲಿ ಪ್ರತಿ ಮನೆ ಮುಟ್ಟಲು ಅವಕಾಶ ಆಗಲಿಲ್ಲ. ಧರ್ಮಗಳ ವಿಭಜನೆ ದೊಡ್ಡ ಹೊಡೆತ ಕೊಟ್ಟಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಅದೇ ರೀತಿ ಮಾಡಿವೆ. ಈ ಫಲಿತಾಂಶಕ್ಕೆ ನಾವು ತಲೆ ಬಾಗುತ್ತೇವೆ. ಬೇರುಮಟ್ಟದಿಂದ ಪಕ್ಷ ಸಂಘಟಿಸುತ್ತೇವೆ. ಮುಂಬರುವ ಎಲ್ಲಾ ಚುನಾವಣೆಗಳಿಗೆ ಪಕ್ಷ ಗಟ್ಟಿ ಮಾಡುತ್ತೇವೆ. ಗೆದ್ದ ಅಭ್ಯರ್ಥಿಗೆ ಅಭಿನಂದನೆ ಅವರು ಶಾಂತಿ ನೆಲೆಸಲು ಸಹಕರಿಸಬೇಕು. ನಾವು ಹೇಳಿದ ಮಾತಿಗೆ ತಕ್ಕಂತೆ ನಡೆದುಕೊಳ್ಳುತ್ತೇವೆ. ಜನರ ಜೊತೆ ನಿಲ್ಲುತ್ತೇವೆ. ಪಕ್ಷಕ್ಕೆ ಸಹಾಯ ಮಾಡಿದ ಎಲ್ಲರಿಗೂ ಧನ್ಯವಾದಗಳು ಎಂದರು.

ನಂತರ‌ ಮಾತನಾಡಿದ ಜೆಡಿಎಸ್ ‌ಜಿಲ್ಲಾಧ್ಯಕ್ಷ ಎಂ. ಶ್ರೀಕಾಂತ್ ರವರು, ಈ ಬಾರಿ ಜಿಲ್ಲೆಯಲ್ಲಿ‌ ಮೂರು ಸ್ಥಾನ ಗೆಲುವ ವಿಶ್ವಾಸವಿತ್ತು. ಆದರೆ ಗ್ರಾಮಾಂತರ ಕ್ಷೇತ್ರ ಮಾತ್ರ ಗೆದ್ದಿದ್ದೇವೆ. ಸೋಲನ್ನು ಸ್ವೀಕರಿಸಿದ್ದೇವೆ. ಮತದಾರರ ತೀರ್ಮಾನಕ್ಕೆ ತಲೆ ಬಾಗುತ್ತೇವೆ. ನಾವು ಜನರ ಪರವಾಗಿ ಹೋರಾಟ ಮುಂದುವರೆಯಲಿದ್ದೇವೆ. ಗೆದ್ದ ಅಭ್ಯರ್ಥಿ ನಗರದ ಶಾಂತಿಗೆ ಸಹಕರಿಸಬೇಕು‌ ಎಂದು ಹೇಳಿದರು.

ಇದನ್ನೂ ಓದಿ : ಡಾ ಜಿ ಪರಮೇಶ್ವರ್​ ಅವರನ್ನು ಮುಖ್ಯಮಂತ್ರಿ ಮಾಡಿ: ಬಸವ ನಾಗಿದೇವ ಸ್ವಾಮೀಜಿ ಆಗ್ರಹ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.