ETV Bharat / state

ಶಿವಮೊಗ್ಗದ ಶಾಲೆಗೆ ಭೇಟಿ ನೀಡಿದ ಶಿಕ್ಷಣ ಸಚಿವರು: ಓದು ನಿಲ್ಲಿಸದಂತೆ ಮಾತು ಪಡೆದ ಸುರೇಶ್​ ಕುಮಾರ್​

author img

By

Published : Jan 20, 2021, 1:14 PM IST

ಇಂದು ಶಿಕ್ಷಣ ಸಚಿವ ಸುರೇಶ್​ ಕುಮಾರ್​​ ಅವರು ಶಿವಮೊಗ್ಗ ನಗರದ ದುರ್ಗಿಗುಡಿಯಲ್ಲಿರುವ ಸರ್ಕಾರಿ ಆಂಗ್ಲ ಶಾಲೆಗೆ ಭೇಟಿ ನೀಡಿದರು. ಈ ವೇಳೆ ಶಾಲೆಯಲ್ಲಿ ನಡೆಯುತ್ತಿರುವ ಸ್ಮಾರ್ಟ್​​ ಕ್ಲಾಸ್​ಗಳ ಕುರಿತಂತೆ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಂದ ಮಾಹಿತಿ ಪಡೆದರು.

ಶಿವಮೊಗ್ಗದ ಶಾಲೆಗಳಿಗೆ ಭೇಟಿ ನೀಡಿದ ಶಿಕ್ಷಣ ಸಚಿವರು
Education Minister Suresh kumar visited shimoga schools

ಶಿವಮೊಗ್ಗ: ಎಸ್​ಎಸ್​​ಎಲ್​​​ಸಿ ನಂತರ ಹೆಣ್ಣು ಮಕ್ಕಳು ತಮ್ಮ ಶಿಕ್ಷಣ ನಿಲ್ಲಿಸದೇ ಮುಂದುವರೆಸಬೇಕು ಎಂದು ವಿದ್ಯಾರ್ಥಿನಿಯರಿಂದ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಮಾತು ಪಡೆದುಕೊಂಡರು.

ಶಿವಮೊಗ್ಗದ ಶಾಲೆಗಳಿಗೆ ಭೇಟಿ ನೀಡಿದ ಶಿಕ್ಷಣ ಸಚಿವರು

ಇಂದು ಸಚಿವರು ನಗರದ ದುರ್ಗಿಗುಡಿ ಸರ್ಕಾರಿ ಆಂಗ್ಲ ಶಾಲೆಗೆ ಭೇಟಿ ನೀಡಿದರು. ಈ ವೇಳೆ ಅಲ್ಲಿ ನಡೆಯುತ್ತಿರುವ ಸ್ಮಾರ್ಟ್​ ಕ್ಲಾಸ್​ಗಳ ಕುರಿತಂತೆ ಪರಿಶೀಲಿಸಿ, ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಂದ ಮಾಹಿತಿ ಪಡೆದುಕೊಂಡರು. ಬಳಿಕ ಹೈಸ್ಕೂಲ್ ವಿಭಾಗಕ್ಕೆ ಭೇಟಿ ನೀಡಿದರು.

ಓದಿ: ಜೆಡಿಎಸ್‌ ಪಕ್ಷ ದೇವೇಗೌಡ್ರ ಹಿಡಿತದಲ್ಲಿ ಇಲ್ಲ : ಹೆಚ್​ಡಿಕೆ ವಿರುದ್ಧ ಮುಂದುವರಿದ ಜಿ.ಟಿ.ಡಿ ಮುನಿಸು

ಸುಮಾರು 9 ತಿಂಗಳುಗಳ ಕಾಲ ರಜೆ ಅನುಭವಿಸಿದ್ದೀರಾ, ಮುಂದೆ ರಜೆಯ ಬಗ್ಗೆ ಯೋಚನೆ ಮಾಡಬೇಡಿ. ನೀವೆಲ್ಲ ಒಳ್ಳೆಯ ಶಾಲೆಯಲ್ಲಿದ್ದೀರಾ, ಚೆನ್ನಾಗಿ ಓದಿ ಭವಿಷ್ಯದ ಬಗ್ಗೆ ಚಿಂತನೆ ನಡೆಸಿ ಎಂದು ಕಿವಿ ಮಾತು ಹೇಳಿದರು. ಇದೇ ವೇಳೆ ವಿದ್ಯಾರ್ಥಿನಿಯರು ಎಸ್​ಎಸ್​ಎಲ್​ಸಿ ಮುಗಿದ ನಂತರ ಓದುವುದನ್ನು ಬಿಡದೇ ಮುಂದೆ ವ್ಯಾಸಂಗ ಮುಂದುವರಿಸುವಂತೆ ಮಾತು ಪಡೆದರು.

ಈ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ, ಡಿಡಿಪಿಐ ರಮೇಶ್ ಹಾಗೂ ದುರ್ಗಿಗುಡಿ ಶಾಲೆಯ ಶಿಕ್ಷಕರು ಹಾಜರಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.