ETV Bharat / state

'ಡಿಸಿಸಿ ಬ್ಯಾಂಕ್​​ನ ನೂತನ ಅಧ್ಯಕ್ಷರಿಂದ ದೌರ್ಜನ್ಯ ನಡೆಯುತ್ತಿದೆ': ದುಗ್ಗಪ್ಪಗೌಡ ಆರೋಪ - ಶಿವಮೊಗ್ಗ

ಡಿಸಿಸಿ ಬ್ಯಾಂಕಿನ ನೂತನ ಅಧ್ಯಕ್ಷರಿಂದ ದೌರ್ಜನ್ಯ ನಡೆಯುತ್ತಿದೆ ಎಂದು ಡಿಸಿಸಿ ಬ್ಯಾಂಕ್ ನಿರ್ದೇಶಕ ಕೆ.ಪಿ.ದುಗ್ಗಪ್ಪಗೌಡ ಆರೋಪಿಸಿದ್ದಾರೆ.

shivamogga
ಡಿಸಿಸಿ ಬ್ಯಾಂಕ್ ನಿರ್ದೇಶಕ ಕೆ.ಪಿ ದುಗ್ಗಪ್ಪಗೌಡ ಸುದ್ದಿಗೋಷ್ಠಿ
author img

By

Published : Apr 10, 2021, 7:40 PM IST

ಶಿವಮೊಗ್ಗ: ಡಿಸಿಸಿ ಬ್ಯಾಂಕಿನ ನೂತನ ಅಧ್ಯಕ್ಷರು ಆಡಳಿತ ಮಂಡಳಿಯೊಂದಿಗೆ ವಿಶ್ವಾಸದಿಂದ ವರ್ತಿಸುತ್ತಿಲ್ಲ. ಅಧ್ಯಕ್ಷರಿಂದ ದೌರ್ಜನ್ಯ ನಡೆಯುತ್ತಿದೆ ಎಂದು ಡಿಸಿಸಿ ಬ್ಯಾಂಕ್ ನಿರ್ದೇಶಕ ಕೆ.ಪಿ.ದುಗ್ಗಪ್ಪಗೌಡ ಗಂಭೀರ ಆರೋಪ ಮಾಡಿದ್ದಾರೆ.

ಡಿಸಿಸಿ ಬ್ಯಾಂಕ್ ನಿರ್ದೇಶಕ ಕೆ.ಪಿ.ದುಗ್ಗಪ್ಪಗೌಡ

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಧ್ಯಕ್ಷ ಚನ್ನವೀರಪ್ಪನವರು ಏಕಪಕ್ಷೀಯ ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದಾರೆ. ನಿರ್ದೇಶಕನಾಗಿ ನಾನು ಕೆಲವು ಸಂದೇಹ ಮತ್ತು ಪ್ರಶ್ನೆಗಳಿಗೆ ಅಧ್ಯಕ್ಷರು ಹಾಗೂ ವ್ಯವಸ್ಥಾಪಕ ನಿರ್ದೇಶಕರು ಉತ್ತರ ಕೊಡಬೇಕೆಂದು ಪಟ್ಟು ಹಿಡಿದು ಪ್ರತಿಭಟನೆಗೆ ಕೂತಾಗ ನನ್ನನ್ನು ಬಂಧಿಸಲು ಪೊಲೀಸರಿಗೆ ಸೂಚನೆ ನೀಡಿದ್ದಾರೆ ಎಂದು ದೂರಿದರು.

ಏಕಾಂಗಿ ಪ್ರತಿಭಟನೆ ಮಾಡುತ್ತಿದ್ದರೂ ಕೂಡ ಪೊಲೀಸರನ್ನು ಕರೆಸಿ ನನಗೆ ಅವಮಾನ ಮಾಡಿ ಬಲತ್ಕಾರದಿಂದ ಹೊರ ದಬ್ಬಿದ್ದಾರೆ. ಇವರ ದೌರ್ಜನ್ಯ ಮಿತಿ ಮೀರುತ್ತಿದೆ. ಏಕಪಕ್ಷೀಯ ತೀರ್ಮಾನದಿಂದ ಬ್ಯಾಂಕ್ ಹೋದರೆ ಹೋಗಲಿ ಎಂಬ ತೀರ್ಮಾನಕ್ಕೆ ಬಂದಿದ್ದಾರೆ. ಅಧ್ಯಕ್ಷರ ವರ್ತನೆ ಹೀಗೆ ಮುಂದುವರೆದರೆ ನಾವು ಅಸಹಕಾರ ಚಳವಳಿ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಅಡಳಿತ ಮಂಡಳಿಯ ಅನುಮತಿಯಿಲ್ಲದೆ ಬ್ಯಾಂಕಿನ ನೌಕರರನ್ನು ವರ್ಗಾವಣೆ ಮಾಡುವ ಅಧಿಕಾರ ಅಧ್ಯಕ್ಷರಿಗೆ ಇಲ್ಲ. ಆದರೆ ಇವರ ಅವಧಿಯಲ್ಲಿ 23 ಮಂದಿ ನೌಕರರನ್ನು ವರ್ಗಾವಣೆ ಮಾಡಿದ್ದಾರೆ. ಇದರಲ್ಲಿ ಅವ್ಯವಹಾರವಾಗಿದೆ ಎಂಬ ಅನುಮಾನ ಇದೆ. ಅಶಿಸ್ತಿನಿಂದ ಗೈರು ಹಾಜರಾಗಿದ್ದ, ಶಿಕ್ಷೆಗೆ ಒಳಪಟ್ಟ ಸಿಬ್ಬಂದಿಗೂ ಕೂಡ ಕ್ಷೇತ್ರಾಧಿಕಾರಿಯಂತಹ ಹುದ್ದೆಯನ್ನು ನೀಡಿದ್ದಾರೆ ಎಂದು ಆರೋಪಿಸಿದರು.

ಕಳೆದ ವರ್ಷ ಬ್ಯಾಂಕ್ 19 ಕೋಟಿ ರೂ. ಲಾಭದಲ್ಲಿತ್ತು. ಸೆಪ್ಟೆಂಬರ್ 20ರವರೆಗೂ ಇದ್ದ ಹಿಂದಿನ ಅಧ್ಯಕ್ಷರ ಅವಧಿಯಲ್ಲಿ ಸೌಹಾರ್ದಯುತ ವಾತಾವರಣವಿತ್ತು. ಆದ್ದರಿಂದ ಬ್ಯಾಂಕ್ ಲಾಭ ಗಳಿಸಲು ಸಾಧ್ಯವಾಯಿತು. ಆದರೆ ಈಗಿನ ಅಧ್ಯಕ್ಷರು ತಾವು ಅಧ್ಯಕ್ಷರಾಗುವ ಪೂರ್ವದಲ್ಲಿ ಹೆಚ್ಚುವರಿ ಷೇರುಗಳನ್ನು ವಾಪಸ್​​ ಕೊಡುತ್ತೇನೆ ಎಂದು ಭರವಸೆ ನೀಡಿದ್ದರು. ಆದರೆ ಭರವಸೆ ಹಾಗೆಯೇ ಉಳಿದಿದೆ. ಜೊತೆಗೆ ಇವರ ಅಧ್ಯಕ್ಷ ಅವಧಿಯಲ್ಲಿ ಯಾವ ರೈತರಿಗೂ ಹೊಸ ಸಾಲ ನೀಡಿಲ್ಲ ಎಂದು ದೂರಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.