ETV Bharat / state

ಕಾಡಾನೆ ದಾಳಿಯಿಂದ ಗಂಭೀರ ಗಾಯ: ಜೀರೋ ಟ್ರಾಫಿಕ್ ಮೂಲಕ ಡಾ.ವಿನಯ್​ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಶಿಫ್ಟ್ - ಈಟಿವಿ ಭಾರತ ಕನ್ನಡ

ಕಾಡಾನೆ ದಾಳಿಯಿಂದ ಗಾಯಗೊಂಡಿದ್ದ ಡಾ.ವಿನಯ್​ ಅವರನ್ನು ಜೀರೋ ಟ್ರಾಫಿಕ್ ಮೂಲಕ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಯಿತು.

zero-traffic
ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಶಿಫ್ಟ್
author img

By

Published : Apr 13, 2023, 10:58 AM IST

Updated : Apr 13, 2023, 1:03 PM IST

ಜೀರೋ ಟ್ರಾಫಿಕ್ ಮೂಲಕ ಡಾ.ವಿನಯ್​ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಶಿಫ್ಟ್

ಶಿವಮೊಗ್ಗ: ಸಕ್ರೆಬೈಲು ಆನೆ ಬಿಡಾರದ ವೈದ್ಯರಾದ ವಿನಯ್ ಅವರನ್ನು ಜಿರೋ ಟ್ರಾಫಿಕ್ ಮೂಲಕ ಶಿವಮೊಗ್ಗದ ನಂಜಪ್ಪ‌ ಆಸ್ಪತ್ರೆಯಿಂದ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಯಿತು. ಕಳೆದ ಎರಡು ದಿನಗಳ ಹಿಂದೆ ದಾವಣಗೆರೆ ಜಿಲ್ಲೆ ಹೊನ್ನಾಳಿಯ ಜಿನಹಳ್ಳಿ ಬಳಿಯಲ್ಲಿ ಕಾಡಾನೆಯು ಡಾ.ವಿನಯ್ ಅವರ ಮೇಲೆ ದಾಳಿ ಮಾಡಿತ್ತು. ಈ ಕಾಡಾನೆ ದಾಳಿಯಿಂದಾಗಿ ವಿನಯ್​ ಅವರಿಗೆ ತೀವ್ರವಾದ ಗಾಯವಾಗಿತ್ತು.

ಹೀಗಾಗಿ ಅವರನ್ನು ಜಿನಹಳ್ಳಿಯಿಂದ ಶಿವಮೊಗ್ಗದ ನಂಜಪ್ಪ ಆಸ್ಪತ್ರೆಗೆ ಚಿಕಿತ್ಸೆಗೆಂದು ಕರೆ ತರಲಾಗಿತ್ತು. ಅದರಂತೆ ಕಳೆದ ಎರಡು ದಿನಗಳಿಂದ ನಂಜಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಡಾ.ವಿನಯ್ ಅವರಿಗೆ ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದ ಕಾರಣ ಅವರನ್ನು ಜಿರೋ ಟ್ರಾಫಿಕ್​ ಮೂಲಕ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಸಾಗಿಸಲಾಯಿತು.

ಬೆಂಗಳೂರಿನಿಂದ ಬಂದಿದ್ದ ವೈದ್ಯರ ತಂಡ: ಡಾ.ವಿನಯ್ ಅವರಿಗೆ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆದು‌ಕೊಂಡು ಹೋಗಲು ಬೆಂಗಳೂರು ಮಣಿಪಾಲ್ ಆಸ್ಪತ್ರೆ ವೈದ್ಯರ ತಂಡ ಆಗಮಿಸಿತ್ತು. ಇದಕ್ಕಾಗಿ ಎರಡು ಆಂಬ್ಯುಲೆನ್ಸ್ ಬಂದಿತ್ತು. ಒಂದು ಆಂಬ್ಯುಲೆನ್ಸ್​ನಲ್ಲಿ ಡಾ.ವಿನಯ್ ರನ್ನು ಹಾಗೂ ಇನ್ನೊಂದರಲ್ಲಿ ಔಷಧಗಳನ್ನು ಶಿಫ್ಟ್ ಮಾಡಲಾಯಿತು.

"ಶಿವಮೊಗ್ಗದಿಂದ ಬೆಂಗಳೂರಿಗೆ ತಲುಪಲು ಸುಮಾರು 5 ಗಂಟೆ ಸಮಯ ಬೇಕು. ನಮ್ಮ ಅಂಬ್ಯುಲೆನ್ಸ್​ನಲ್ಲಿ ರೋಗಿಗೆ ಬೇಕಾದ ಎಲ್ಲಾ ವ್ಯವಸ್ಥೆ ಇದೆ" ಎಂದು ಈ ವೇಳೆ ಅಂಬ್ಯುಲೆನ್ಸ್ ಚಾಲಕ ಪೃಥ್ವಿ ಈಟಿವಿ‌ ಭಾರತ್ ಗೆ ತಿಳಿಸಿದರು. ಆಸ್ಪತ್ರೆಯಿಂದ ಡಾ. ವಿನಯ್ ರನ್ನು ಶಿಫ್ಟ್ ಮಾಡುವಾಗ ಅವರ ಪತ್ನಿ, ತಾಯಿ, ಮಗಳು ಸೇರಿದಂತೆ ಎಂಎಲ್​ಸಿ ಆಯನೂರು ಮಂಜುನಾಥ್ ಸೇರಿ ಸ್ನೇಹಿತರ ಬಳಗದವರು ಹಾಜರಿದ್ದು, ಶೀಘ್ರವಾಗಿ ಗುಣಮಖರಾಗಿ ಬನ್ನಿ ಎಂದು ಹಾರೈಸಿದರು.

ದಾಳಿ ಮಾಡಿದ ಒಂಟಿ ಸಲಗ ಸೆರೆ: ಏಪ್ರಿಲ್​ 11 ರಂದು ಬೆಳಗ್ಗೆ ವಿನಯ್​ ಅವರು ಕಾಡಾನೆಗೆ ಡಾಟ್​ ಮಾಡಿದ್ದರು. ಕಾಡಾನೆ ನೆಲಕ್ಕುರುಳಿದ ಬಳಿಕ ಕಾಡಾನೆ ಬಳಿಗೆ ಹೋಗಿದ್ದರು. ಸಾಮಾನ್ಯವಾಗಿ ಡಾಟ್​ ಮಾಡಿದ ತಕ್ಷಣ ಆನೆ ಪ್ರಜ್ಞೆ ತಪ್ಪಿ ಬೀಳುತ್ತದೆ. ಮತ್ತೆ ಪ್ರಜ್ಞೆ ಬಂದು ಮೇಲೇಳಲು ಸುಮಾರು 40 ನಿಮಿಷ ಬೇಕು. ಆದರೆ ಕಾಡಾನೆ ಏಕಾಏಕಿ ಮೇಲೆದ್ದು ಡಾ.ವಿನಯ್​ ಅವರ ಬೆನ್ನಿನ ಮೇಲೆ ಕಾಲಿಟ್ಟಿತ್ತು. ಅಷ್ಟರಲ್ಲಿ ಅರಣ್ಯ ಸಿಬ್ಬಂದಿ ಫೈರ್​ ಮಾಡಿದ್ದರು. ಇದರಿಂದ ಕಾಡಾನೆ ಅಲ್ಲಿಂದ ಅಡ್ಡಾದಿಡ್ಡಿಯಾಗಿ ಓಡಿತ್ತು. ಕೊನೆಗೆ ಎಲ್ಲರ ಸಹಕಾರ, ಹರಸಾಹಸದಿಂದ ಒಂಟಿ ಸಲಗವನ್ನು ಸೆರೆ ಹಿಡಿಯಲಾಗಿತ್ತು.

ಇದನ್ನೂ ಓದಿ: ಕಾಡಿನಿಂದ ನಾಡಿಗೆ ಬಂದ ಒಂಟಿ ಆನೆ, ಗಜರಾಯನ ದಾಳಿಯಿಂದ ಯುವತಿ ಸಾವು

ತೋಟದ ಕೆರೆಗೆ ಬಿದ್ದ ಕಾಡಾನೆಗಳು: ಸುಳ್ಯದ ಅಜ್ಜಾವರ ಎಂಬಲ್ಲಿ ನಾಲ್ಕು ಕಾಡಾನೆಗಳು ತೋಟದ ಕೆರೆಗೆ ಬಿದ್ದು ಪರದಾಡಿದ ಘಟನೆ ನಿನ್ನೆ (ಬುಧವಾರ) ರಾತ್ರಿ ನಡೆದಿದೆ. ರಾತ್ರಿ ಆಹಾರ ಹುಡುಕುತ್ತ ಬಂದಿದ್ದ ಕಾಡಾನೆಗಳು ಅಜ್ಜಾವರ ನಿವಾಸಿ ಸನತ್​ ರೈ ಎಂಬರ ತೋಟದ ಕೆರೆಗೆ ಬಿದ್ದಿವೆ. ಸ್ಥಳಕ್ಕೆ ಸುಳ್ಯ ಅರಣ್ಯಾಧಿಕಾರಿಗಳು ಆಗಮಿಸಿದ್ದು, ಜೆಸಿಬಿ ಬಳಸಿ ಕೆರೆಯನ್ನು ಅಗಲ ಮಾಡಿ ಕಾಡಾನೆಗಳನ್ನು ಹೊರತೆಗೆಯುವ ಪ್ರಯತ್ನದ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ. ಜೊತೆಗೆ ಕಾಡಾನೆಗಳನ್ನು ಸೆರೆಹಿಡಿದು ಸ್ಥಳಾಂತರ ಮಾಡುವಂತೆ ಸ್ಥಳೀಯರು ಆಗ್ರಹಿಸುತ್ತಿದ್ದಾರೆ.

Last Updated : Apr 13, 2023, 1:03 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.