ETV Bharat / state

ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನಕ್ಕೆ ಡಾ.ಸರಸ್ವತಿ ಚಿಮ್ಮಲಗಿ ಸ್ಪರ್ಧೆ - ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನಕ್ಕೆ ಡಾ.ಸರಸ್ವತಿ ಚಿಮ್ಮಲಗಿ ಸ್ಪರ್ಧೆ

ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಏಕೈಕ ಮಹಿಳಾ ಅಭ್ಯರ್ಥಿ ಡಾ.ಸರಸ್ವತಿ ಚಿಮ್ಮಲಗಿ ತಮ್ಮನ್ನು ಗೆಲ್ಲಿಸುವಂತೆ ಮನವಿ ಮಾಡಿದ್ರು.

dr saraswathi chimmalagi contests in kasapa president post
ಡಾ.ಸರಸ್ವತಿ ಚಿಮ್ಮಲಗಿ ಸುದ್ದಿಗೋಷ್ಟಿ
author img

By

Published : Apr 19, 2021, 6:53 PM IST

ಶಿವಮೊಗ್ಗ: ಮೇ 9 ರಂದು ನಡೆಯಲಿರುವ ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನಕ್ಕೆ ಏಕೈಕ ಮಹಿಳೆಯಾಗಿ ಸ್ಪರ್ಧಿಸಿರುವ ಡಾ.ಸರಸ್ವತಿ ಚಿಮ್ಮಲಗಿ, ತಮ್ಮನ್ನು ಗೆಲ್ಲಿಸಬೇಕು ಎಂದು ಕೇಳಿಕೊಂಡರು.

ಡಾ.ಸರಸ್ವತಿ ಚಿಮ್ಮಲಗಿ ಸುದ್ದಿಗೋಷ್ಟಿ

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಹಿತ್ಯ ಪರಿಷತ್ತು ಕನ್ನಡಿಗರ ಹೆಮ್ಮೆಯ ಸಂಸ್ಥೆಯಾಗಿದೆ. ಇದುವರೆಗೂ 25 ಜನರು ಅಧ್ಯಕ್ಷರಾಗಿದ್ದಾರೆ. ಆದರೆ, ಒಬ್ಬ ಮಹಿಳೆಯೂ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿಲ್ಲ. ಇದು ಪ್ರಜಾಪ್ರಭುತ್ವಕ್ಕೊಂದು ಕಪ್ಪು ಚುಕ್ಕೆಯಾಗಿದೆ. ಕನ್ನಡ ಸಾಹಿತ್ಯ ಪರಿಷತ್ತು ಮಹಿಳೆಯರನ್ನು ದೂರ ಇಡುತ್ತಿದೆ ಎನ್ನುವುದಕ್ಕೆ ಇದು ಸಾಕ್ಷಿಯಾಗಿದೆ. ಇಂದು ಮಹಿಳೆ ಎಲ್ಲಾ ಕ್ಷೇತ್ರದಲ್ಲಿಯೂ ಸೈ ಎನಿಸಿಕೊಂಡಿದ್ದಾಳೆ. ಹಾಗಾಗಿ ಈ ಬಾರಿ ನಾನು ಏಕೈಕ ಮಹಿಳೆಯಾಗಿ ಸ್ಪರ್ಧಿಸಿದ್ದೇನೆ. ಮಹಿಳೆಯರೂ ಮಾತ್ರವಲ್ಲದೇ ಪುರುಷ ಸಹೋದರರು ನನ್ನನ್ನು ಆಯ್ಕೆ ಮಾಡಬೇಕು ಎಂದು ಮನವಿ ಮಾಡಿದರು. ನಾನು ಮಹಿಳೆ ಎಂಬ ಕಾರಣಕ್ಕೆ ಸ್ಪರ್ಧಿಸುತ್ತಿಲ್ಲ, ಸಾಹಿತ್ಯ, ರಂಗಕ್ಷೇತ್ರ, ಸಾಮಾಜಿಕ ಸೇವೆ, ಶೋಷಿತರ ಪರ ಹೋರಾಟ, ಮಾನವೀಯ ಕಾಳಜಿಗಳು, ನನ್ನಲ್ಲಿ ಇವೆ. ಹಲವು ವರ್ಷಗಳಿಂದ ಸಾಹಿತ್ಯ ಸೇವೆ ಮಾಡಿಕೊಂಡು ಬಂದಿದ್ದೇನೆ. ಸಂಘಟಕಿಯಾಗಿ, ಲೇಖಕಿಯಾಗಿ, ಕಲಾವಿದೆಯಾಗಿ, ಕೆಲಸ ಮಾಡಿದ್ದೇನೆ. ಸಾಹಿತ್ಯ ಪರಿಷತ್ತಿಗೆ ಮೊದಲ ಬಾರಿಗೆ ಮಹಿಳೆಯೊಬ್ಬಳನ್ನು ಆಯ್ಕೆ ಮಾಡಿದ ಶ್ರೇಯಸ್ಸು ನಿಮ್ಮದಾಗಲಿ ಎಂದರು.

ನಾಡು, ನುಡಿ, ನೆಲ, ಜಲ, ಗಡಿ ಸಮಸ್ಯೆಗಳ ಬಗ್ಗೆ ಗಮನ ಹರಿಸುವುದು. ಮಹಿಳೆಯರಿಗೆ ಆದ್ಯತೆ ನೀಡುವುದು. ತಾಲೂಕು ಅಧ್ಯಕ್ಷರ ಆಯ್ಕೆ ಸೇರಿದಂತೆ ಬೈಲಾದಲ್ಲಿ ಕೆಲವು ತಿದ್ದುಪಡಿ ಮಾಡುವುದು, ಸಮ್ಮೇಳನಗಳನ್ನು ಆಯೋಜಿಸುವುದು, ಮಗಡಿನಾಡು ಸಮ್ಮೇಳನ ಮಾಡುವುದು. ರಾಜ್ಯ ಮಟ್ಟದಿಂದ ಹಳ್ಳಿಯವರೆಗೆ ಸಾಹಿತ್ಯ ಸರಸ್ವತಿ ಕೊಂಡೊಯ್ಯುವುದು ನನ್ನ ಮುಂದಿನ ಆಯ್ಕೆಯಾಗಿವೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.