ETV Bharat / state

ಮನೆ ನಿರ್ಮಾಣಕ್ಕೆಂದು ಮರಕ್ಕೆ ಕೊಡಲಿ ಇಟ್ಟ ವೈದ್ಯ: ನೋಟಿಸ್ ನೀಡಿದ ಅರಣ್ಯ ಇಲಾಖೆ - ಅನುಮತಿ ಪಡೆಯದೆ ಕಡಿದು ಹಾಕಿದ್ದಾರೆ

ಮನೆ ನಿರ್ಮಾಣಕ್ಕೆ ರಸ್ತೆಯಲ್ಲಿದ್ದ ಮರದ ಬುಡಕ್ಕೆ ಕೊಡಲಿ ಇಟ್ಟ ವೈದ್ಯರೊಬ್ಬರಿಗೆ ಶಿವಮೊಗ್ಗ ಅರಣ್ಯ ಇಲಾಖೆ ನೋಟಿಸ್ ಜಾರಿ ಮಾಡಿದೆ.

ನೋಟಿಸ್
author img

By

Published : Oct 23, 2019, 5:39 AM IST

ಶಿವಮೊಗ್ಗ: ತಿಲಕ್ ನಗರದ ಕಾರ್ಮಿಕ ಇಲಾಖೆಯ ಮುಂಭಾಗದಲ್ಲಿ ಡಾ. ಮಂಜುನಾಥ್ ರವರು ಮನೆ ನಿರ್ಮಾಣಕ್ಕೆ ಮರವೊಂದು ಅಡ್ಡವಿದೆಯೆಂದು ಕಡಿದು ಹಾಕಿದ ಪರಿಣಾಮ

ಡಾ. ಮಂಜುನಾಥ್ ರವರು ಮನೆ ನಿರ್ಮಾಣಕ್ಕಾಗಿ ಹಳೆ ಮನೆಯನ್ನು ಕೆಡವಲು ಮುಂದಾಗಿದ್ದಾರೆ. ಇದಕ್ಕೆ ಕಾಂಪೋಡ್ ಒಳಗೆ ಜೆಸಿಬಿ ಹೋಗಲು ಅಡ್ಡವಾಗುತ್ತದೆಯೆಂದು ಸುಮಾರು 10 ವರ್ಷದ ಹೊಂಗೆ ಮರವನ್ನು ಕಡಿದು ಹಾಕಲಾಗಿದೆ.‌

ವಲಯಾಧಿಕಾರಿಗಳ ಕಚೇರಿಯಿಂದ ನೋಟಿಸ್

ರಸ್ತೆ ಬದಿ ಪಾಲಿಕೆಯವರು ಅರಣ್ಯ ಇಲಾಖೆಯವರ ಜೊತೆ ನೆಟ್ಟಿದ್ದ ಹೊಂಗೆ ಮರವನ್ನು ಅರಣ್ಯ ಇಲಾಖೆಯ ಅನುಮತಿ ಪಡೆಯದೆ ಕಡಿದು ಹಾಕಿದ್ದಾರೆ. ಮರ ಕಡಿದ ವಿಚಾರ ಅರಣ್ಯ ಇಲಾಖೆಗೆ ತಿಳಿಯುತ್ತಿದ್ದಂತೆ ವಲಯಾಧಿಕಾರಿಗಳ ಕಚೇರಿಯಿಂದ ನೋಟಿಸ್ ಜಾರಿ ಮಾಡಿದ್ದಾರೆ.

Intro:ಮನೆ ನಿರ್ಮಾಣಕ್ಕೆ ಮನೆ ಮುಂದಿನ ಮರಕ್ಕೆ ಕೊಡಲಿ ಇಟ್ಟ ವೈದ್ಯ: ಅರಣ್ಯ ಇಲಾಖೆಯಿಂದ ನೋಟಿಸ್.(ಎಕ್ಸ್ ಕ್ಲೋಸಿವ್)

ಶಿವಮೊಗ್ಗ: ಹೊಸ ಮನೆ ನಿರ್ಮಾಣಕ್ಕೆ ರಸ್ತೆಯಲ್ಲಿದ್ದ ಮರದ ಬುಡಕ್ಕೆ ಕೊಡಲಿ ಇಟ್ಟ ವೈದ್ಯರಿಗೆ ಶಿವಮೊಗ್ಗ ಅರಣ್ಯ ಇಲಾಖೆ ನೋಟಿಸ್ ಜಾರಿ ಮಾಡಿದೆ. ಶಿವಮೊಗ್ಗದ ಪ್ರತಿಷ್ಠಿತ ಬಡಾವಣೆಗಳಲ್ಲಿ ಒಂದಾದ ತಿಲಕ್ ನಗರದ ಕಾರ್ಮಿಕ ಇಲಾಖೆಯ ಮುಂಭಾಗದಲ್ಲಿ ಡಾ. ಮಂಜುನಾಥ್ ರವರು ಮನೆ ನಿರ್ಮಾಣ ಮಾಡುತ್ತಿದ್ದಾರೆ. ಇದಕ್ಕೆ ಹಳೆ ಮನೆಯನ್ನು ಕೆಡವಲು ಮುಂದಾಗಿದ್ದಾರೆ. ಇದಕ್ಕೆ ಕಾಂಪೋಡ್ ಒಳಗೆ ಜೆಸಿಬಿ ಹೋಗಲು ರಸ್ತೆ ಪಕ್ಕದಲ್ಲಿ ಇದ್ದ ಹೊಂಗೆ ಮರ ಅಡ್ಡವಾಗಿತ್ತು ಅಂತ ಹೊಂಗೆ ಮರವನ್ನು ಕಡಿದು ಹಾಕಲಾಗಿದೆ.‌ ಸುಮಾರು 10 ವರ್ಷದ ಹೊಂಗೆ ಮರ ಇದಾಗಿದೆ.Body: ಆದರೆ ರಸ್ತೆ ಬದಿ ಪಾಲಿಕೆಯವರು ಅರಣ್ಯ ಇಲಾಖೆಯವರ ಜೊತೆ ನೆಟ್ಟಿದ್ದ ಹೊಂಗೆ ಮರವನ್ನು ಅರಣ್ಯ ಇಲಾಖೆಯ ಅನುಮತಿ ಪಡೆಯದೆ ಮನೆ ನಿರ್ಮಾಣಕ್ಕೆ ಅಡ್ಡಿಯಾಗುತ್ತದೆ ಎಂದು ಕಡಿದು ಹಾಕಿರುವುದು ಎಷ್ಟು ಸರಿ. ಅರಣ್ಯ ಇಲಾಖೆಗೆ ಮರ ಕಡಿದ ವಿಚಾರ ಸಾರ್ವಜನಿಕರು ತಿಳಿಸಿದ್ದರು ಸಹ ವೈದ್ಯರಿಗೆ ನೋಟಿಸ್ ಜಾರಿ ಮಾಡಲು ಇಲಾಖೆ ಸತಾಯಿಸಿ ನಂತ್ರ ಒತ್ತಡ ಹಾಕಿದ ಮೇಲೆ ಡಾ. ಮಂಜುನಾಥ್ ರವರಿಗೆ ಶಿವಮೊಗ್ಗ ಶಂಕರ ವಲಯದ ವಲಯಾಧಿಕಾರಿಗಳ ಕಚೇರಿಯಿಂದ ನೋಟಿಸ್ ಜಾರಿ ಮಾಡಿದೆ. ಅದು ಅರಣ್ಯ ಇಲಾಖೆ ಮರ ಕಡಿದ ಕುರಿತು ಕಾರಣ ಕೇಳಿ ನೋಟಿಸ್ ಜಾರಿ ಮಾಡಿರುವುದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ.Conclusion: ಅರಣ್ಯದಲ್ಲಿ ಒಣಗಿದ ಮನೆಯ ಉಪಯೋಗಕ್ಕೆ ತಂದ ಮರಗಳಿಗೆ ಕೇಸ್ ಹಾಕುವ ಅರಣ್ಯ ಇಲಾಖೆ ಈಗ ನೀಡಿರುವ ನೋಟಿಸ್ ನೆಪ ಮಾತ್ರಕ್ಕೆ ಮಾತ್ರ ಎಂದೆನ್ನಿಸುತ್ತದೆ. ಅರಣ್ಯ ಇಲಾಖೆ ಯಾರ ಮುಲಾಜಿಗೂ ಬಗ್ಗದೆ ಮರ ಕಡಿದವರಿಗೆ ಸೂಕ್ತ ಕಾನೂನು ಕ್ರಮ ತೆಗೆದು ಕೊಳ್ಳಬೇಕಿದೆ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.