ETV Bharat / state

ದಯವಿಟ್ಟು ವೈಯಕ್ತಿಕ ಟೀಕೆ ಮಾಡಬೇಡಿ: ಸಿದ್ದರಾಮಯ್ಯಗೆ ಈಶ್ವರಪ್ಪ ಮನವಿ

ಅಭಿವೃದ್ಧಿಗೆ ಸಂಬಂಧಿಸಿದ ಯಾವುದೇ ಟೀಕೆ ಮಾಡುವುದು ತಪ್ಪಲ್ಲ. ಆದರೆ, ಬಿಎಸ್​ವೈ ಹಾಗೂ ಮೋದಿ ಅವರನ್ನು ವೈಯಕ್ತಿವಾಗಿ ಟೀಕೆ ಮಾಡುವುದು ಸಿದ್ದರಾಮಯ್ಯ ಅವರ ಸ್ಥಾನಕ್ಕೆ ಗೌರವ ತರುವುದಿಲ್ಲ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.

ಸಚಿವ ಕೆ.ಎಸ್.ಈಶ್ವರಪ್ಪ
author img

By

Published : Sep 1, 2019, 1:30 PM IST

ಶಿವಮೊಗ್ಗ: ಸಿಎಂ ಬಿಎಸ್​​ವೈ ಅವರನ್ನು ವೈಯಕ್ತಿವಾಗಿ ಟೀಕಿಸಬೇಡಿ. ವಿರೋಧ ಪಕ್ಷದಲ್ಲಿದ್ದು ಅಂತಹ ಪದ ಬಳಕೆ ಮಾಡಬೇಡಿ ಎಂದು ವಿನಂತಿಸಿಕೊಳ್ಳುತ್ತೇನೆ ಎಂದು ಗ್ರಾಮೀಣಭಿವೃದ್ಧಿ, ಪಂಚಾಯತ್​ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಅವರು ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದಾರೆ.

ಸಚಿವ ಕೆ.ಎಸ್.ಈಶ್ವರಪ್ಪ

ಇಲ್ಲಿನ ಮಲ್ಲೇಶ್ವರ ನಗರದ ಯೋಗಾ ಕೇಂದ್ರದ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು. ಅಭಿವೃದ್ಧಿ ಲೋಪದೋಷದ ಬಗ್ಗೆ ಎಷ್ಟಾದರೂ ಟೀಕಿಸಿ, ಬಿಎಸ್​ವೈ ಹಸಿರು ಶಾಲು ಹಾಕಿಕೊಂಡಿದ್ದಕ್ಕೆ, ಮೋದಿ ಅವರು ಫೋಟೋ ತೆಗೆಸಿಕೊಳ್ಳಲು ವಿದೇಶಕ್ಕೆ ಹೋಗುತ್ತಾರೆ ಎಂಬ ವೈಯಕ್ತಿಕ ಟೀಕೆ ಸರಿಯಲ್ಲ ಎಂದು ಹೇಳಿದರು.

ನಮ್ಮ ಸರ್ಕಾರ ನೀರು ನುಗ್ಗಿದ ಮನೆಗಳಿಗೆ ತಕ್ಷಣ ವಸ್ತುಗಳನ್ನು ಖರಿದೀಸಲು ₹ 10 ಸಾವಿರ, ಮನೆ ದುರಸ್ತಿಗೆ ₹ 50 ಸಾವಿರ, ಭಾಗಶಃ ಬಿದ್ದ ಮನೆಗಳಿಗೆ 1 ಲಕ್ಷ, ಸಂಪೂರ್ಣ ಬಿದ್ದ ಮನೆಗಳಿಗೆ ₹ 5 ಲಕ್ಷ ಬಿಡುಗಡೆ ಮಾಡಿದೆ ಎಂದರು.

Intro:ಪ್ರದಾನ ಮಂತ್ರಿ ನರೇಂದ್ರ ಮೋದಿ ಹಾಗೂ ಸಿಎಂ ಯಡಿಯೂರಪ್ಪನವರ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ನವರು ಬಳಸುತ್ತಿರುವ ಪದ ಬಳಕೆ ಸರಿಯಾಗಿಲ್ಲ. ಅವರು ದಯವಿಟ್ಟು ಇವರಿಬ್ಬರನ್ನು ಟೀಕೆ ಮಾಡುವುದನ್ನು ಬಿಡಬೇಕು ಎಂದು ಗ್ರಾಮೀಣಾಭಿವೃದ್ದಿ ಖಾತೆ ಸಚಿವ ಕೆ.ಎಸ್.ಈಶ್ವರಪ್ಪ ಸಿದ್ದರಾಮಯ್ಯನವರ ವಿರುದ್ದ ಶಿವಮೊಗ್ಗದಲ್ಲಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಮಲ್ಲೇಶ್ವರ ನಗರದಲ್ಲಿ ಯೋಗಾ ಕೇಂದ್ರದ ಗುದ್ದಲಿ ಪೊಜೆ ನೇತವೇರಿಸಿ ಮಾತನಾಡಿದ ಅವರು, ಸಿದ್ದರಾಮಯ್ಯನವರು ಮಾಜಿ ಸಿಎಂ ಎಂದು ಸುಮ್ಮನಿದ್ದೆನೆ. ಇಲ್ಲವಾಗಿದ್ದರೆ ಅವರ ವಿರುದ್ದವು ಕೆಟ್ಟ ಪದ ಬಳಕೆ ಮಾಡುತ್ತಿದ್ದೆ, ನನಗೂ ಕೆಟ್ಟ ಪದ ಬಳಕೆ ಮಾಡುವುದಕ್ಕೆ ಬರುತ್ತದೆ ಎಂದು ಸಿದ್ದರಾಮಯ್ಯ ನವರ ವಿರುದ್ದ ಹರಿಹಾಯ್ದಿದ್ದಾರೆ.

Body:ನೀವು ವಿರೋಧ ಪಕ್ಷವಾಗಿ ಅಭಿವೃದ್ದಿಯ ಬಗ್ಗೆ ಎಷ್ಟು ಬೇಕಾದರೂ ಟೀಕೆ ಮಾಡಿ ಆದ್ರೆ, ವೈಯಕ್ತಿಕವಾಗಿ ಟೀಕೆ ಮಾಡುವುದು ಸರಿಯಲ್ಲ. ಹಿಂದೆ ನರೇಂದ್ರ ಮೋದಿರವರನ್ನು ಕೋಮುವಾದಿ, ಕೊಲೆಗಡುಕ, ಸುಳ್ಳಿನ ಸರದಾರ ಎಂಬ ಹಗುರ ಪದಗಳನ್ನು ಬಳಸಿದ್ದಿರಿ, ಯಡಿಯೂರಪ್ಪ ಹಸಿರು ಶಾಲು ಹಾಕಿ ಕೊಳ್ಳುತ್ತಾರೆ ಅವರಿಗೆ ನಾಚಿಕೆ ಆಗೊದಿಲ್ಲವಾ ಎಂದು ಟೀಕೆ ಮಾಡಿದ್ದೀರಿ. ರೈತ ನಾಯಕನಾಗಿರುವ ಯಡಿಯೂರಪ್ಪ ರೈತರ ಪರವಾಗಿ ಹಲವಾರು ಯೋಜನೆಗಳನ್ನು ನೀಡಿದ್ದಾರೆ. ಸಿದ್ದರಾಮಯ್ಯನವರ ಭಾಷೆ ಸರಿಯಾಗಿಲ್ಲ.ನರೇಂದ್ರ ಮೋದಿಯನ್ನು ಇಡಿ ಪ್ರಪಂಚವೇ ಮೆಚ್ಚಿದ ವ್ಯಕ್ತಿಯಾಗಿದ್ದಾರೆ. ಅವರ ಬಗ್ಗೆ ಹಗುರವಾದ ಮಾತು ಸರಿಯಲ್ಲ. ರಾಜ್ಯದಲ್ಲಿ ನೆರೆ ಬಂದು ಸಾಕಷ್ಟು ಅನಾಹುತ ಸೃಷ್ಟಿ ಮಾಡಿದೆ. ಹಿಂದೆ ಯಾವುದೇ ಸರ್ಕಾರ ಮಾಡದ ರೀತಿಯಲ್ಲಿ ನಮ್ಮ ಸರ್ಕಾರ ಪರಿಹಾರ ನೀಡುತ್ತಿದೆ. ಈಗಾಗಲೇ ನಮ್ಮ ಕೋರಿಕೆಯ ಮೇರೆಗೆ ಮೋದಿರವರು ನೆರೆ ವೀಕ್ಷಣಾ ತಂಡವನ್ನು ಕಳುಹಿದ್ದಾರೆ. ಹಿಂದೆಂದೂ ನೀಡಿದ ರೀತಿಯಲ್ಲಿ ಮೋದಿರವರು ರಾಜ್ಯಕ್ಕೆ ಪರಿಹಾರ ನೀಡುವ ವಿಶ್ವಾಸ ವ್ಯಕ್ತಪಡಿಸಿದರು.

Conclusion:ನಮ್ಮ ಸರ್ಕಾರ ನೀರು ನುಗ್ಗಿದ ಮನೆಗೆ ತಕ್ಷಣ ವಸ್ತುಗಳನ್ನು ಖರಿದೀಸಲು 10 ಸಾವಿರ, ಮನೆ ರಿಪೇರಿಗೆ 50 ಸಾವಿರ, ಭಾಗಶಃ ಬಿದ್ದ ಮನೆಗಳಿಗೆ 1 ಲಕ್ಷ, ಸಂಪೂರ್ಣ ಬಿದ್ದ ಮನೆಗಳಿಗೆ 5 ಲಕ್ಷ ರೂ ಬಿಡುಗಡೆ ಮಾಡಿದೆ ಎಂದರು.

ಬೈಟ್: ಕೆ.ಎಸ್.ಈಶ್ವರಪ್ಪ.‌ಸಚಿವರು.

ಕಿರಣ್ ಕುಮಾರ್. ಶಿವಮೊಗ್ಗ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.