ETV Bharat / state

ಭಾರತ್​ ಐಕ್ಯತಾ ಯಾತ್ರೆಗೆ ತೆರಳಿದ್ದ ರಮೇಶ್ ಸಾವು: ಕುಟುಂಬಕ್ಕೆ ₹10 ಲಕ್ಷ ನೀಡಿದ ಡಿಕೆಶಿ - ರಮೇಶ್ ಸಾವು

ಭಾರತ್​ ಐಕ್ಯತಾ ಯಾತ್ರೆಗೆ ತೆರಳಿದ್ದ ರಮೇಶ್​ ಎಂಬುವರು ಅಪಘಾತದಲ್ಲಿ ಮೃತಪಟ್ಟಿದ್ದರು. ಶುಕ್ರವಾರ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರ ಮನೆಗೆ ತೆರಳಿ, 10 ಲಕ್ಷ ರೂಪಾಯಿಯ ಚೆಕ್​ ನೀಡಿದ್ದಾರೆ.

ರಮೇಶ್ ಕುಟುಂಬಕ್ಕೆ 10 ಲಕ್ಷ ನೀಡಿದ ಡಿಕೆಶಿ
ರಮೇಶ್ ಕುಟುಂಬಕ್ಕೆ 10 ಲಕ್ಷ ನೀಡಿದ ಡಿಕೆಶಿ
author img

By

Published : Oct 28, 2022, 9:46 PM IST

ಶಿವಮೊಗ್ಗ: ರಾಹುಲ್ ಗಾಂಧಿ ಅವರ ಭಾರತ್​ ಐಕ್ಯತಾ ಯಾತ್ರೆಗೆ ತೆರಳಿದ್ದ ಕಾಂಗ್ರೆಸ್​ ಕಾರ್ಯಕರ್ತನೊಬ್ಬ ಮೃತಪಟ್ಟಿದ್ದ. ಈ ಹಿನ್ನೆಲೆಯಲ್ಲಿ ಪಕ್ಷದ ಕಾರ್ಯಕರ್ತನ ಮನೆಗೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ತೆರಳಿ, 10 ಲಕ್ಷ ರೂಪಾಯಿಯ ಚೆಕ್ ವಿತರಿಸಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್

ಸಾಗರ ತಾಲೂಕಿನ ಹುತ್ತಾದಿಂಬ ಗ್ರಾಮದ ಬೂತ್ ಅಧ್ಯಕ್ಷರಾಗಿದ್ದ ರಮೇಶ್ ಎಂಬುವರು ಚಿತ್ರದುರ್ಗ ಜಿಲ್ಲೆ ಹಿರಿಯೂರು ಬಳಿ ಐಕ್ಯತಾ ಯಾತ್ರೆ ಹೋಗುತ್ತಿದ್ದಾಗ, ಅಪಘಾತದಲ್ಲಿ ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಡಿ ಕೆ ಶಿವಕುಮಾರ್ ಪಕ್ಷದ ವತಿಯಿಂದ ಪರಿಹಾರ ನೀಡುವುದಾಗಿ ಘೋಷಿಸಿದ್ದರು. ಅದರಂತೆ ಶುಕ್ರವಾರ ಹುತ್ತಾದಿಂಬ ಗ್ರಾಮಕ್ಕೆ ತೆರಳಿ ರಮೇಶ್ ಪತ್ನಿ ಜಯಮ್ಮನವರಿಗೆ 10 ಲಕ್ಷ ರೂ. ಚೆಕ್ ನೀಡಿದ್ದಾರೆ.

ಹುತ್ತಾದಿಂಬದಲ್ಲಿ ನಡೆದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ರಮೇಶ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ರಾಹುಲ್ ಗಾಂಧಿ ಅವರು ಐದು ಅಂಶಗಳನ್ನು ಹಿಡಿದು ದೇಶದಲ್ಲಿ ಪಾದಯಾತ್ರೆಯನ್ನು ನಡೆಸುತ್ತಿದ್ದಾರೆ. ಈ ಯಾತ್ರೆಯಲ್ಲಿ‌ ಭಾಗಿಯಾಗಲು ಬಂದಿದ್ದ ರಮೇಶ್ ಅವರು ಮೃತಪಟ್ಟಿದ್ದಾರೆ. ರಮೇಶ್ ರವರು ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ್ದಾರೆ ಎಂದರು.

ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಮಾತನಾಡಿ, ರಮೇಶ್ ಅವರು ನಮ್ಮ ಪಕ್ಷದ ನಿಷ್ಟಾವಂತ ಕಾರ್ಯಕರ್ತರಾಗಿದ್ದಾರೆ. ಅವರು ನಮ್ಮ ಎಲ್ಲಾ ಚುನಾವಣೆಯಲ್ಲಿ ಕೆಲಸ ಮಾಡಿದ್ದರು. ಇಂತಹ ಕಾರ್ಯಕರ್ತನನ್ನು ಕಳೆದುಕೊಂಡಿದ್ದು, ನಮ್ಮ ದುರಾದೃಷ್ಟ ಅಂತ ಭಾವುಕರಾಗಿ ಕಣ್ಣೀರು ಹಾಕಿದರು.

ಇದನ್ನೂ ಓದಿ:ಐಕ್ಯತಾ ಯಾತ್ರೆಗೆ ತೆರಳುತ್ತಿದ್ದ ಕಾಂಗ್ರೆಸ್​​ ಕಾರ್ಯಕರ್ತರ ಬಸ್​ ಪಲ್ಟಿ...

ETV Bharat Logo

Copyright © 2024 Ushodaya Enterprises Pvt. Ltd., All Rights Reserved.