ETV Bharat / state

ನಾಳೆ ಶಿವಮೊಗ್ಗ ಜಿಲ್ಲೆಯಲ್ಲಿ ಬಂಜಾರ ಸಮಾಜದ ಜೊತೆ ಡಿಕೆಶಿ ಸಭೆ - ನಾಳೆ ಶಿವಮೊಗ್ಗ ಜಿಲ್ಲೆಯಲ್ಲಿ ಬಂಜಾರ ಸಮಾಜದ ಜೊತೆ ಡಿ.ಕೆ ಶಿವಕುಮಾರ್ ಸಭೆ

ಜಿಲ್ಲೆಯ ಶಿಕಾರಿಪುರ ತಾಲೂಕಿನ ಬೆಂಡೆಕಟ್ಟೆ, ಮರಡಿ ತಾಂಡ ಹಾಗೂ ಶಿವಮೊಗ್ಗ ಗ್ರಾಮಾಂತರ ತಾಲೂಕಿನ ಕುಂಚೇನಹಳ್ಳಿ ತಾಂಡಗಳಿಗೆ ಡಿ.ಕೆ ಶಿವಕುಮಾರ್ ಭೇಟಿ ನೀಡಿ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ನಾಳೆ ಶಿವಮೊಗ್ಗ ಜಿಲ್ಲೆಯಲ್ಲಿ ಬಂಜಾರ ಸಮಾಜದ ಜೊತೆ ಡಿಕೆಶಿ ಸಭೆ

author img

By

Published : Jul 14, 2021, 10:45 PM IST

ಶಿವಮೊಗ್ಗ: ಬಂಜಾರ ಸಮುದಾಯದ ಧ್ವನಿಯಾಗಿ ನಿಮ್ಮೊಂದಿಗೆ ಇರುತ್ತೇನೆ ಎಂದು ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.

ಗುರುವಾರ ಜಿಲ್ಲೆಯ ಶಿಕಾರಿಪುರ ತಾಲೂಕಿನ ಬೆಂಡೆಕಟ್ಟೆ, ಮರಡಿ ತಾಂಡ ಹಾಗೂ ಶಿವಮೊಗ್ಗ ಗ್ರಾಮಾಂತರ ತಾಲೂಕಿನ ಕುಂಚೇನಹಳ್ಳಿ ತಾಂಡಗಳಿಗೆ ಭೇಟಿ ನೀಡಲಿರುವ ಅವರು ಬಂಜಾರ ಸಮುದಾಯದವರೊಂದಿಗೆ ಸಂವಾದ ನಡೆಸುತ್ತಾರೆ.

ಕೆಪಿಸಿಸಿ ಅಧ್ಯಕ್ಷ ಡಿಕೆಶಿ

ಈ ಸಂಬಂಧ ಇಂದು ಮಾತನಾಡಿರುವ ಅವರು, ನನ್ನ ಕ್ಷೇತ್ರದಲ್ಲಿ ಬಂಜಾರ ಜನಾಂಗದ ಜೊತೆ ಚಿಕ್ಕ ವಯಸ್ಸಿನಿಂದಲೂ ಬಾಲ್ಯ ಜೀವನವನ್ನು ಕಳೆದಿರುವೆ. ಈಗ ರಾಜ್ಯದ ಉದ್ದಗಲಕ್ಕೂ ಬಂಜಾರ ಸಮುದಾಯದ ಸಮಸ್ಯೆ ತಿಳಿದುಕೊಳ್ಳಲು ನಿಮ್ಮನ್ನು ಭೇಟಿ ಮಾಡಲು ಬರುತ್ತಿದ್ದೇನೆ.

ಬಂಜಾರ ಜನಾಂಗದ ವಲಸೆ ಸಮಸ್ಯೆ, ನಿರುದ್ಯೋಗ, ಕೊರೊನಾ ಸಂದರ್ಭದಲ್ಲಿ ನಿಮಗಾಗಿರುವ ಸಮಸ್ಯೆಗಳ ಬಗ್ಗೆ ತಿಳಿದುಕೊಳ್ಳಲು ಬರುತ್ತಿದ್ದೇನೆ. ಹಾಗಾಗಿ ಸಮಸ್ಯೆಗಳನ್ನು ನನ್ನೊಂದಿಗೆ ಮನಬಿಚ್ಚಿ ಹಂಚಿಕೊಳ್ಳಿ. ನಾನು ನಿಮ್ಮ ಧ್ವನಿಯಾಗಿರುತ್ತೇನೆ. ಇದು ರಾಜಕೀಯ ಸಭೆಯಲ್ಲ, ಬಾಂಧವ್ಯದ ಸಭೆ, ಹಾಗಾಗಿ ಎಲ್ಲರೂ ಬಂದು ಸಹಕಾರ ನೀಡಿ ಎಂದು ವಿಡಿಯೋ ಮೂಲಕ ಮನವಿ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ಕಟೀಲು ಶ್ರೀದೇವಿಗೆ ಅಶ್ಲೀಲ ಪದಗಳಿಂದ ನಿಂದನೆ: ಕಣ್ಣೀರಿಟ್ಟು ಕ್ಷಮೆ ಕೋರಿದ ಆರೋಪಿ

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.