ಶಿವಮೊಗ್ಗ: ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮಣಿವಣ್ಣನ್ ತುಂಗಾ ನಗರದ ಕಂಟೇನ್ಮೆಂಟ್ ಝೋನ್ಗೆ ಭೇಟಿ ನೀಡಿ ಪರಿಶೀಲಿಸಿದರು.
ಶಿವಮೊಗ್ಗದಲ್ಲಿ ಇಂದು 6 ಪಾಸಿಟಿವ್ ಪ್ರಕರಣ ಕಂಡು ಬಂದ ಹಿನ್ನೆಲೆ ತುಂಗಾ ನಗರದ ಕಂಟೇನ್ಮೆಂಟ್ ಏರಿಯಾಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಇಲ್ಲಿನ ಸೀಲ್ ಡೌನ್ ಹಾಗೂ ಸುತ್ತಮುತ್ತಲ ಏರಿಯಾದ ಪರಿಸ್ಥಿತಿ ವೀಕ್ಷಣೆ ಮಾಡಿದರು.
ಈ ವೇಳೆ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಸ್ಥಳದ ಕುರಿತು ವಿವರಿಸಿದರು. ಆರೋಗ್ಯ ಇಲಾಖೆ, ಮಹಾನಗರ ಪಾಲಿಕೆ ಅಧಿಕಾರಿಗಳಿಂದ ಮಾಹಿತಿ ಪಡೆದು, ಸೂಕ್ತ ರೀತಿಯಲ್ಲಿ ಅವಲೋಕಿಸಿ ಮುನ್ನಡೆಯುವಂತೆ ಸೂಚಿಸಿದರು.