ETV Bharat / state

ಚಳಿಗಾಲದ ಅಧಿವೇಶನದಲ್ಲಿ ಮಲೆನಾಡಿನ ಸಮಸ್ಯೆ ಬಗ್ಗೆ ಚರ್ಚಿಸಿ: ತೀ.ನಾ. ಶ್ರೀನಿವಾಸ್ ಆಗ್ರಹ

ಚಳಿಗಾಲದ ಅಧಿವೇಶನದಲ್ಲಿ ಮಲೆನಾಡಿನ ಜ್ವಲಂತ ಸಮಸ್ಯೆಗಳ ಕುರಿತ ಚರ್ಚಿಸಿ ಸೂಕ್ತ ಪರಿಹಾರ ಒದಗಿಸಬೇಕೆಂದು ಮಲೆನಾಡು ಪ್ರಾಂತ್ಯ ರೈತ ಹೋರಾಟ ಸಮಿತಿಯ ಸಂಚಾಲಕ ತೀ.ನಾ.ಶ್ರೀನಿವಾಸ್ ಆಗ್ರಹಿಸಿದ್ದಾರೆ.

discuss and solve the shivamogga problem in the winter session
ಚಳಿಗಾಲದ ಅಧಿವೇಶನದಲ್ಲಿ ಮಲೆನಾಡಿನ ಸಮಸ್ಯೆ ಬಗ್ಗೆ ಚರ್ಚಿಸಿ ಪರಿಹರಿಸಿ: ತೀ.ನಾ.ಶ್ರೀನಿವಾಸ್ ಆಗ್ರಹ
author img

By

Published : Dec 10, 2022, 4:22 PM IST

ಚಳಿಗಾಲದ ಅಧಿವೇಶನದಲ್ಲಿ ಮಲೆನಾಡಿನ ಸಮಸ್ಯೆ ಬಗ್ಗೆ ಚರ್ಚಿಸಿ: ತೀ.ನಾ.ಶ್ರೀನಿವಾಸ್ ಆಗ್ರಹ

ಶಿವಮೊಗ್ಗ: ಶಿವಮೊಗ್ಗ ಪ್ರೆಸ್ ಟ್ರಸ್ಟ್​ನಲ್ಲಿ ನಡೆದ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ತೀ ನಾ ಶ್ರೀನಿವಾಸ್​, ಮಲೆನಾಡಿನ ಜ್ವಲಂತ ಸಮಸ್ಯೆಗಳಾದ ಶರಾವತಿ, ಭದ್ರಾ, ವರಾಹಿ ಮುಳುಗಡೆ ಸಂತ್ರಸ್ತರ ಸಮಸ್ಯೆಗಳ ಚರ್ಚಿಸಿ, ಸೂಕ್ತ ನಿರ್ಧಾರ ತೆಗೆದುಕೊಂಡು ಕಾನೂನಿನ ಸಹಾಯದಿಂದ‌ ಸಮಸ್ಯೆ ಪರಿಹರಿಸಬೇಕೆಂದು ಒತ್ತಾಯಿಸಿದರು.

ಗೋಣಿಚೀಲದಲ್ಲಿ ಹಣ ತುಂಬಿಸುತ್ತಿದ್ದಾರೆ: ಕಳೆದ 50 ವರ್ಷಗಳ ಹಿಂದೆ ನೀಡಿದ್ದ ಹಕ್ಕುಪತ್ರವನ್ನು ಕಡೆಗಣಿಸಿ, ಅರಣ್ಯ ಇಲಾಖೆಯವರು ಪಹಣಿಯಲ್ಲಿ ಅರಣ್ಯ ಭೂಮಿ ಎಂದು ಬದಲಾಯಿಸುತ್ತಿದ್ದಾರೆ. ಮಲೆನಾಡಿನ ಸಮಸ್ಯೆಯ ಬಗ್ಗೆ ಜಿಲ್ಲೆಯ ಜನಪ್ರತಿನಿಧಿಗಳು ಸದನದಲ್ಲಿ ಬಾಯಿ ಇಲ್ಲದ ಹಾಗೇ ವರ್ತಿಸುತ್ತಿದ್ದಾರೆ. ಇವರೆಲ್ಲಾ ಚುನಾವಣೆ ಬಂತು ಎಂದು ಹಣವನ್ನು ಗೋಣಿಚೀಲದಲ್ಲಿ ತುಂಬಿಡುವ ಕೆಲಸ ಮಾಡ್ತಾ ಇದ್ದಾರೆ ಎಂದು ಆರೋಪಿಸಿದರು.

ಈಗಾಗಲೇ ಮಲೆನಾಡಿನ ಅಡಿಕೆ ಬೆಳೆಗಾರರು ಎಲೆಚುಕ್ಕಿ ರೋಗ ಹಾಗೂ ಅಡಿಕೆ ದರ ಕುಸಿತದಿಂದ ಕಂಗಲಾಗಿದ್ದಾರೆ. ಹಿಂದೆ ಯಡಿಯೂರಪ್ಪನವರು ತಮ್ಮನ್ನು ಗೆಲ್ಲಿಸಿ ಕಳುಹಿಸಿದ್ದರೆ, ಅರಣ್ಯ ಭೂಮಿ ಸಮಸ್ಯೆ ಪರಿಹರಿಸುವುದಾಗಿ ಹೇಳಿದ್ದರು. ಆದರೆ ಇದುವರೆಗೂ ಅದು ಆಗಿಲ್ಲ. ಈಗ ಶಿಕಾರಿಪುರದಲ್ಲಿ ಮಗನನ್ನು ಗೆಲ್ಲಿಸಿ ಎಂದು ಓಡಾಡುತ್ತಿದ್ದಾರೆ. ಜನರಿಗೆ ಹಕ್ಕುಪತ್ರ ನೀಡಿ ನಂತರ ಮತ ಕೇಳಲು ಬನ್ನಿ ಎಂದು ಹೇಳಿದರು.

ಇನ್ನೂ ಮಲೆನಾಡಿನ ಸಮಸ್ಯೆ ಬಗ್ಗೆ ಸದನದಲ್ಲಿ ಚರ್ಚೆ ನಡೆಸದೆ ಹೋದರೆ ಜನಪ್ರತಿನಿಧಿಗಳ ಶವಯಾತ್ರೆ ನಡೆಸುವ ಎಚ್ಚರಿಕೆಯನ್ನು ನೀಡಿದರು.

ಇದನ್ನೂ ಓದಿ: ದಶಕಗಳ ಹೋರಾಟಕ್ಕೆ ಸಿಕ್ಕ ಪ್ರತಿಫಲ: ಶರಾವತಿ ಮುಳುಗಡೆ ನಿರಾಶ್ರಿತರ ಬದುಕಿನಲ್ಲಿ ಬಂತು ಪವರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.