ETV Bharat / state

ಶಿವಮೊಗ್ಗದ ಇಬ್ಬರು ಸಚಿವರಿಗೆ ಸಿಕ್ತು ಪ್ರಭಾವಿ ಖಾತೆ : ಜಿಲ್ಲೆಯ ಜನರಿಂದ ಅಭಿವೃದ್ಧಿ ನಿರೀಕ್ಷೆ - ಕೆ.ಎಸ್ ಈಶ್ವರಪ್ಪ

ಜಿಲ್ಲೆಯ ಇಬ್ಬರೂ ಸಚಿವರಿಗೆ ಪ್ರಭಾವಿ ಖಾತೆಗಳು ಸಿಕ್ಕಿರುವುದು ಕಾರ್ಯಕರ್ತರಲ್ಲಿ ಸಂತಸ ಉಂಟು ಮಾಡಿದ್ದು, ಮುಂದಿನ ದಿನಗಳಲ್ಲಿ ಈ ಸಚಿವರು ಜಿಲ್ಲೆಯನ್ನು ಸಮಗ್ರ ಅಭಿವೃದ್ಧಿ ಮಾಡುತ್ತಾರೆ ಎಂಬ ನಿರೀಕ್ಷೆ ಜನರದ್ದಾಗಿದೆ.

ಶಿವಮೊಗ್ಗ ಜಿಲ್ಲೆಯ ಇಬ್ಬರು ಸಚಿವರಿಗೆ ಸಿಕ್ತು ಪ್ರಭಾವಿ ಖಾತೆ

author img

By

Published : Aug 8, 2021, 8:27 AM IST

ಶಿವಮೊಗ್ಗ : ಸಿಎಂ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ನೂತನ ಸಚಿವ ಸಂಪುಟದಲ್ಲಿ ಜಿಲ್ಲೆಯ ಇಬ್ಬರು ಶಾಸಕರಿಗೆ ಪ್ರಭಾವಿ ಖಾತೆಗಳು ಒಲಿದಿವೆ. ನಾಲ್ಕು ಬಾರಿ ಶಾಸಕರಾಗಿ ವಿವಿಧ ನಿಗಮ ಮಂಡಳಿಗಳಲ್ಲಿ ಕಾರ್ಯನಿರ್ವಹಿಸಿದ ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಅವರಿಗೆ ಮೊದಲ ಬಾರಿಗೆ ರಾಜ್ಯದ ಪ್ರಭಾವಿ ಖಾತೆಯಾದ ಗೃಹ ಖಾತೆ ಸಿಕ್ಕಿದೆ.

ಶಿವಮೊಗ್ಗ ಜಿಲ್ಲೆಯ ಇಬ್ಬರು ಸಚಿವರಿಗೆ ಸಿಕ್ತು ಪ್ರಭಾವಿ ಖಾತೆ

ಇದರ ಜೊತೆಗೆ ನಾಲ್ಕು ಬಾರಿ ವಿವಿಧ ಇಲಾಖೆಯ ಸಚಿವರಾಗಿ ಕಾರ್ಯ ನಿರ್ವಹಿಸಿದ್ದ ಕೆ.ಎಸ್ ಈಶ್ವರಪ್ಪಗೆ, ಯಡಿಯೂರಪ್ಪ ಅವರ ನೇತೃತ್ವದ ಸಚಿವ ಸಂಪುಟದಲ್ಲಿ ನೀಡಿದ ಗ್ರಾಮೀಣಾಭಿವೃದ್ಧಿ ಖಾತೆಯನ್ನೇ ಮುಂದುವರೆಸಲಾಗಿದೆ. ಜಿಲ್ಲೆಯ ಇಬ್ಬರೂ ಸಚಿವರಿಗೆ ಪ್ರಭಾವಿ ಖಾತೆಗಳು ಸಿಕ್ಕಿರುವುದು ಕಾರ್ಯಕರ್ತರಲ್ಲಿ ಸಂತಸ ಉಂಟು ಮಾಡಿದ್ದು, ಮುಂದಿನ ದಿನಗಳಲ್ಲಿ ಜಿಲ್ಲೆಯ ಇಬ್ಬರು ಸಚಿವರು ಸಮಗ್ರ ಅಭಿವೃದ್ಧಿ ಮಾಡಲಿ ಎನ್ನುವುದು ಜನರ ಅಭಿಪ್ರಾಯವಾಗಿದೆ.

ಈಶ್ವರಪ್ಪ ಇಲ್ಲಿವರೆಗೂ ಸಚಿವರಾಗಿ ನಿರ್ವಹಿಸಿದ ಖಾತೆಗಳು : ಬಿ.ಎಸ್ ಯಡಿಯೂರಪ್ಪ 2012 ರಲ್ಲಿ ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ಉಪ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದರು. ನಂತರ ಇಂಧನ ಸಚಿವರಾಗಿ, ಜಲ ಸಂಪನ್ಮೂಲ ಸಚಿವರಾಗಿ, ಕಂದಾಯ ಸಚಿವರಾಗಿ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ.

ಆರಗ ಜ್ಞಾನೇಂದ್ರ ಕಾರ್ಯನಿರ್ಹಿಸಿದ ವಿವಿಧ ನಿಗಮಗಳು : ಹೌಸಿಂಗ್ ಬೋರ್ಡ್ ಅಧ್ಯಕ್ಷರಾಗಿ, ಎಂಪಿಎಂ ಕಾರ್ಖಾನೆ ಆಡಳಿತ ಮಂಡಳಿ ಅಧ್ಯಕ್ಷರಾಗಿ, ಅಡಿಕೆ ಕಾರ್ಯಪಡೆಯ ಅಧ್ಯಕ್ಷರಾಗಿ ಕೆಲಸ ನಿರ್ಹಿಸಿದ ಅನುಭವ ಆರಗ ಜ್ಞಾನೇಂದ್ರ ಅವರಿಗಿದೆ. ಹೀಗಾಗಿ ಪ್ರಭಾವಿ ಖಾತೆ ನೀಡಲಾಗಿದೆ ಎನ್ನಲಾಗ್ತಿದೆ.

ಇದನ್ನೂ ಓದಿ : ಎಲ್ಲರೂ ನಮ್ಮವರೇ, ಖಾತೆ ಅಸಮಾಧಾನ ಎಲ್ಲವೂ ಸರಿಹೋಗಲಿದೆ: ಸಿಎಂ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.