ETV Bharat / state

ಕೇಂದ್ರ, ರಾಜ್ಯ ಸರ್ಕಾರಗಳ ಅಭಿವೃದ್ಧಿ ಕಾರ್ಯಗಳೇ ಉಪ ಚುನಾವಣೆಗೆ ಸಹಕಾರಿ: ಬಿಎಸ್​ವೈ - BSY latest news

ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಬೆಲೆ ಏರಿಕೆಯ ವಿಚಾರವನ್ನು ದೊಡ್ಡದಾಗಿ ಮಾಡಿ ಮತ ಸೆಳೆಯಲು ಮುಂದಾಗಿದೆ. ಆದರೆ ಇದು ಫಲಿಸದು ಎಂದು ಮಾಜಿ ಸಿಎಂ ಯಡಿಯೂರಪ್ಪ ಹೇಳಿದ್ದಾರೆ.

Development plans of Central and State Governments can support by-elections: BSY
ಬಿಎಸ್​ವೈ
author img

By

Published : Oct 19, 2021, 9:18 AM IST

Updated : Oct 19, 2021, 9:44 AM IST

ಶಿವಮೊಗ್ಗ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅಭಿವೃದ್ಧಿ ಕಾರ್ಯಗಳು ಉಪ ಚುನಾವಣೆಯ ಗೆಲುವಿಗೆ ಕಾರಣವಾಗಲಿದೆ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.

ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಉಪ ಚುನಾವಣೆಯಲ್ಲಿ ಬಿಜೆಪಿ ನೂರಕ್ಕೆ ನೂರು ಗೆಲುವು ಸಾಧಿಸಲಿದೆ. ಅಭಿವೃದ್ದಿ ಕಾರ್ಯಗಳೇ ನಮಗೆ ದೊಡ್ಡ ಶಕ್ತಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

'ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅಭಿವೃದ್ಧಿ ಕಾರ್ಯಗಳು ಉಪ ಚುನಾವಣೆಯ ಗೆಲುವಿಗೆ ಕಾರಣವಾಗಲಿದೆ'

'ಕಾಂಗ್ರೆಸ್ ತಂತ್ರ ಫಲಿಸದು'

ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಬೆಲೆ ಏರಿಕೆಯ ವಿಚಾರವನ್ನು ದೊಡ್ಡದಾಗಿ ಮಾಡಲು ಹೊರಟಿದೆ. ಆದರೆ, ಇದು ಫಲಿಸದು. ಬೆಲೆ ಏರಿಕೆ ಎಲ್ಲಾ ಕಾಲದಲ್ಲೂ ಆಗುತ್ತದೆ. ಬೆಲೆ ಏರಿಕೆ ಯಾವ ಕಾರಣಕ್ಕೆ ಆಗುತ್ತದೆ ಎಂದು ಎಲ್ಲರಿಗೂ ತಿಳಿದಿದೆ. ಇದು ಉಪ ಚುನಾವಣೆಯ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಹೇಳಿದರು.

ಇಂದು ನ್ಯಾಮತಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗಿಯಾಗಿ ಅಲ್ಲಿಂದ ಆಲಮಟ್ಟಿಗೆ ತೆರಳಿ, ಅಲ್ಲಿ ಉಳಿದುಕೊಂಡು, ನಾಳೆ ಸಿಂದಗಿಯಲ್ಲಿ ನಾಲ್ಕು ದಿನ ಪ್ರಚಾರ ನಡೆಸುತ್ತೇನೆ ಎಂದು ಇದೇ ವೇಳೆ ತಿಳಿಸಿದರು.

Last Updated : Oct 19, 2021, 9:44 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.