ಶಿವಮೊಗ್ಗ: ಸ್ವಯಂ ಘೋಷಿತ ಆಸ್ತಿ ತೆರಿಗೆ ರಿಯಾಯಿತಿ ಅವಧಿಯನ್ನು ವಿಸ್ತರಿಸುವಂತೆ ಆಗ್ರಹಿಸಿ ಶಿವಮೊಗ್ಗ ನಾಗರಿಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿತು.
ಮಹಾನಗರಪಾಲಿಕೆಯಲ್ಲಿ ಸ್ವಯಂಘೋಷಿತ ಆಸ್ತಿ ತೆರಿಗೆ ಕಟ್ಟಲು ಶೇಕಡಾ 5 ರಷ್ಟು ರಿಯಾಯಿತಿ ಘೋಷಿಸಲಾಗಿದೆ. ಈ ರಿಯಾಯಿತಿ ಈ ತಿಂಗಳು ಮಾತ್ರ ಇದ್ದು, ಇದನ್ನು ಕಟ್ಟಲು ಸದ್ಯ ಕಷ್ಟಸಾಧ್ಯವಾದ್ದರಿಂದ ರಿಯಾಯಿತಿಯನ್ನುಇನ್ನೂ ಮೂರು ತಿಂಗಳು ಮುಂದುವರೆಸಬೇಕು. ಅಲ್ಲದೇ ಪ್ರಸಕ್ತ ಸಾಲಿನ ಆಸ್ತಿ ತೆರಿಗೆಗೆ ಮಾರ್ಚ್ 31- 2021ರವರೆಗೆ ಯಾವುದೇ ರೀತಿಯ ಬಡ್ಡಿ ವಿಧಿಸಬಾರದು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.