ETV Bharat / state

ತೀರ್ಥಹಳ್ಳಿಯ ಕಾಡಿನೊಳಗೆ ಸಂಪೂರ್ಣ ಸುಟ್ಟ ಕಾರಲ್ಲಿ ಮೃತದೇಹ ಪತ್ತೆ.. - ಮೃತದೇಹ ಪತ್ತೆ

ಕೆಎ 15 ಎಂ 3934 ನಂಬರ್​​ನ ಸ್ವಿಫ್ಟ್ ಕಾರು ಸುಟ್ಟು ಭಸ್ಮವಾಗಿದೆ. ಕಾರಿನೊಳಗೆ ಚಾಲಕನ ಸೀಟ್​​ನಲ್ಲಿ ಮೃತದೇಹವೂ ಸಹ ಪತ್ತೆಯಾಗಿದೆ..

dead-body-found-in-burnt-car-at-forest-area-in-thirthahalli
ಕಾಡಿನೊಳಗೆ ಸಂಪೂರ್ಣ ಸುಟ್ಟ ಕಾರಲ್ಲಿ ಮೃತದೇಹ ಪತ್ತೆ
author img

By

Published : Sep 28, 2021, 5:22 PM IST

ಶಿವಮೊಗ್ಗ : ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಆರಗ ಸಮೀಪದ ಹುಣಸೇಕೊಪ್ಪ ಅರಣ್ಯ ಪ್ರದೇಶದಲ್ಲಿ ಸುಟ್ಟು ಕರಕಲಾದ ಕಾರೊಂದು ಪತ್ತೆಯಾಗಿದೆ. ಅದರೊಳಗೆ ವ್ಯಕ್ತಿಯೋರ್ವನ ಮೃತದೇಹವೂ ಪತ್ತೆಯಾಗಿದೆ.

ಕೆಎ 15 ಎಂ 3934 ನಂಬರ್​​ನ ಸ್ವಿಫ್ಟ್ ಕಾರು ಸುಟ್ಟು ಭಸ್ಮವಾಗಿದೆ. ಕಾರಿನೊಳಗೆ ಚಾಲಕನ ಸೀಟ್​​ನಲ್ಲಿ ಮೃತದೇಹವೂ ಸಹ ಪತ್ತೆಯಾಗಿದೆ.

ಆದರೆ, ಘಟನೆ ಯಾವಾಗ ನಡೆದಿದೆ ಎಂಬ ಬಗ್ಗೆ ನಿಖರ ಮಾಹಿತಿ ಲಭ್ಯವಾಗಿಲ್ಲ. ಕಳೆದೊಂದು ವಾರದಿಂದಲೂ ಈ ಭಾಗದಲ್ಲಿ ಮಳೆಯಾಗುತ್ತಿದೆ. ಈ ಸಮಯದಲ್ಲಿ ಕಾರಿಗೆ ಬೆಂಕಿ ಬಿದ್ದಿರುವ ಸಾಧ್ಯತೆ ಕಡಿಮೆ.

ಕೊಲೆಯಾಗಿರುವ ಅನುಮಾನ ಸಹ ವ್ಯಕ್ತವಾಗ್ತಿದೆ. ಸ್ಥಳಕ್ಕೆ ತೀರ್ಥಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು, ತನಿಖೆ ಆರಂಭಿಸಿದ್ದಾರೆ.

ಇದನ್ನೂ ಓದಿ: ಸಿಂದಗಿ ವಿಧಾನಸಭಾ ಉಪಚುನಾವಣೆ ಘೋಷಣೆ : ಅಭ್ಯರ್ಥಿಗಳ ಆಯ್ಕೆಗೆ ಭರ್ಜರಿ ಕಸರತ್ತು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.