ಶಿವಮೊಗ್ಗ: ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾದ ಕಾರಣ ಮತ್ತೆ ಮೂರು ಕಂಟೇನ್ಮೆಂಟ್ ಝೋನ್ಗಳನ್ನು ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಶಿವಮೊಗ್ಗದ ಕುಂಬಾರ ಗುಂಡಿ, ಕಲ್ಲುಗಂಗೂರಿನ ಆಶ್ರಮ ಪ್ರದೇಶ ಹಾಗೂ ಭದ್ರಾವತಿಯ ಚನ್ನಗಿರಿ ರಸ್ತೆ ಸೇರಿ ಒಟ್ಟು ಮೂರು ಕಂಟೇನ್ಮೆಂಟ್ ಝೋನ್ಗಳನ್ನು ಮಾಡಲಾಗಿದೆ. ಈ ಮೂರು ಪ್ರದೇಶಗಳಿಗೆ ಡಿಸಿ ಶಿವಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮೊದಲು ಕುಂಬಾರ ಗುಂಡಿ ಪ್ರದೇಶಕ್ಕೆ ಭೇಟಿ ನೀಡಿ ವೀಕ್ಷಣೆ ಮಾಡಿದರು. ನಂತರ ಕಲ್ಲುಗಂಗೂರು ಪ್ರದೇಶಕ್ಕೆ ಹಾಗೂ ಭದ್ರಾವತಿಯ ಪ್ರದೇಶಗಳಿಗೆ ಭೇಟಿ ನೀಡಿ ಝೋನ್ ನಿರ್ಮಾಣದ ಬಗ್ಗೆ ಮಾಹಿತಿ ಪಡೆದುಕೊಂಡರು. ಕಂಟೇನ್ಮೆಂಟ್ ಝೋನ್ನಲ್ಲಿ ಸ್ಥಳೀಯ ನಿವಾಸಿಗಳಿಗೆ ಮನೆಯಿಂದ ಹೊರ ಬರದಂತೆ ಸೂಚನೆ ನೀಡಲಾಗಿದೆ. ಎಲ್ಲ ನಿರ್ಬಂಧಿತ ವಲಯಗಳಲ್ಲಿ ಅಗತ್ಯವಾಗಿ ಬೇಕಾದ ವಸ್ತುಗಳನ್ನು ಸರಬರಾಜು ಮಾಡಲಾಗುತ್ತಿದೆ ಎಂದರು.
ಎಲ್ಲ ಕಡೆ ಸ್ಯಾನಿಟೈಸರ್ ಮಾಡಲಾಗಿದೆ. ಮೂರು ಪ್ರದೇಶಗಳ 29 ಜನ ಪ್ರಥಮ ಸಂಪರ್ಕಿತರನ್ನು ಹುಡುಕಿ, ಅವರಿಗೆ ಕ್ವಾರಂಟೈನ್ ಮಾಡಲಾಗಿದೆ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಹಳ್ಳಿಬೈಲು ಹಾಗೂ ಶಿಕಾರಿಪುರದ ತರಲಘಟ್ಟದಲ್ಲಿ ನಾಳೆಯಿಂದ ಕಂಟೇನ್ಮೆಂಟ್ ಝೋನ್ ತೆರೆಯುವ ನಿರ್ಧಾರವಿದೆ ಎಂದರು.