ETV Bharat / state

ಹಾಳಾಗುತ್ತಿವೆ ಪೈನಾಪಲ್​ ಹಣ್ಣುಗಳು.. ತೋಟಗಳಿಗೆ ಜಿಲ್ಲಾಧಿಕಾರಿ ಭೇಟಿ ನೀಡಿ ಪರಿಶೀಲನೆ - DC Shivakumar

ದೇಶವೇ ಲಾಕ್​ಡೌನ್‌ ಆಗಿದ್ರಿಂದ ಉತ್ತರಭಾರತದಿಂದ ಬರಬೇಕಿದ್ದ ಖರೀದಿದಾರರು ಬಾರದ ಕಾರಣ ಹಣ್ಣುಗಳು ತೋಟದಲ್ಲೇ ನಾಶವಾಗುತ್ತಿವೆ. ಇದರಿಂದ ಡಿಸಿ ಅವರೇ ಖುದ್ದು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ.

DC Shivakumar visite farmers land
ಡಿಸಿ ಭೇಟಿ ಪರಿಶೀಲನೆ
author img

By

Published : Apr 5, 2020, 4:22 PM IST

ಶಿವಮೊಗ್ಗ : ಕೋವಿಡ್-19 ಹಾವಳಿಯಿಂದ ಭಾರತದ ವಿವಿಧ ರಾಜ್ಯಗಳಿಗೆ ರಫ್ತಾಗದೆ ಉಳಿದು ಹಾಳಾಗುತ್ತಿರುವ ಪೈನಾಪಲ್ ತೋಟಗಳಿಗೆ ಜಿಲ್ಲಾಧಿಕಾರಿ ಕೆ ಬಿ ಶಿವಕುಮಾರ್ ಭೇಟಿ‌ ನೀಡಿ ಪರಿಶೀಲನೆ ನಡೆಸಿದ್ದಾರೆ.

ಸೊರಬ ಹಾಗೂ ಸಾಗರ ತಾಲೂಕಿನಲ್ಲಿ ನೂರಾರು ಎಕರೆಯಲ್ಲಿ ಸಾವಿರಾರು ಟನ್ ಪೈನಾಪಲ್ ಬೆಳೆಯಲಾಗಿದೆ. ಈ ಬೆಳೆಗಳು ನಿಗದಿತ ಅವಧಿಯಲ್ಲಿ ಕಟಾವು ಆಗಿ‌ ಮಾರುಕಟ್ಟೆ ಸೇರಬೇಕಿತ್ತು. ಆದರೆ, ದೇಶವೇ ಲಾಕ್​ಡೌನ್‌ ಆಗಿದೆ. ಇದರಿಂದ ಉತ್ತರಭಾರತದಿಂದ ಖರೀದಿಗೆ ಬರಬೇಕಿದ್ದ ಖರೀದಿದಾರರು ಬಾರದ ಕಾರಣ ಹಣ್ಣುಗಳು ತೋಟದಲ್ಲೇ ನಾಶವಾಗುತ್ತಿವೆ. ಇದರಿಂದ ಡಿಸಿ ಅವರೇ ಖುದ್ದು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ.

ಈ ವೇಳೆ ರೈತರ ಜೊತೆ ಚರ್ಚಿಸಿ ಸಮಸ್ಯೆ ಅರಿತುಕೊಂಡರು. ಅಲ್ಲದೆ ಕಕ್ಕರಿಸಿ ಗ್ರಾಮದ ಪೈನಾಪಲ್ ಕೈಗಾರಿಕೆಗೂ ಕೂಡ ಭೇಟಿ ನೀಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.