ಶಿವಮೊಗ್ಗ: ದಸರಾ ಹಬ್ಬದ ನಿಮಿತ್ತ ನಗರದಲ್ಲಿ ಚಲನಚಿತ್ರೋತ್ಸವ ಕಾರ್ಯಕ್ರಮ ಆಯೋಜನೆ ಮಾಡಲಾಗಿದ್ದು, ನಿರ್ದೇಶಕ, ನಟ ವಿ.ಮನೋಹರ್ ನಾಳೆ ಚಾಲನೆ ನೀಡಲಿದ್ದಾರೆ. ಅ. 8ರಂದು ಬೆಳಗ್ಗೆ 9.30ಕ್ಕೆ ಹೆಚ್ಪಿಸಿ ಚಿತ್ರಮಂದಿರದಲ್ಲಿ ಚಲನಚಿತ್ರೋತ್ಸವ ಕಾರ್ಯಕ್ರಮಕ್ಕೆ ಚಾಲನೆ ಸಿಗಲಿದೆ. ಸಂಗೀತ ನಿರ್ದೇಶಕ, ಬಿಗ್ ಬಾಸ್ ಖ್ಯಾತಿ ವಾಸುಕಿ ವೈಭವ್, ನಟ ಸುಂದರ್, ನಟಿ ವೀಣಾ ಸುಂದರ್ ಮೊದಲಾದ ನಟ - ನಟಿಯರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಸಿನಿಮಾ ಪ್ರದರ್ಶನ:
ಚಿತ್ರೋತ್ಸವ ಸಮಾರಂಭದಲ್ಲಿ ಏಳು ದಿನಗಳ ಕಾಲ ಸಿನಿಮಾಗಳು ಪ್ರದರ್ಶನಗೊಳ್ಳಲಿವೆ. ಮೊದಲ ದಿನ ರಾಮ ರಾಮರೇ ಚಿತ್ರ, ಅ. 9ರಂದು ಯುವರತ್ನ, ಅ.10ರಂದು ಪ್ರೀಮಿಯರ್ ಪದ್ಮಿನಿ, ಅ.11ರಂದು ಹೆಬ್ಬೆಟ್ ರಾಮಕ್ಕ, ಅ.12ರಂದು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಅ.13ರಂದು ಮಲ್ಲಿಕಾರ್ಜುನ ಚಿತ್ರಮಂದಿರದಲ್ಲಿ ರಾಜಕುಮಾರ ಹಾಗೂ ಅ.14ರಂದು ವೀರಭದ್ರೇಶ್ವರ ಚಿತ್ರಮಂದಿರದಲ್ಲಿ ಕೃಷ್ಣ ಟಾಕೀಸ್ ಚಲನಚಿತ್ರಗಳು ಪ್ರದರ್ಶನಗೊಳ್ಳಲಿವೆ.
ಇದನ್ನೂ ಓದಿ: ಬಿಜೆಪಿಯವರು ಚೌಕಿದಾರರಲ್ಲ, ಲೂಟರ್ಸ್: ಸಿದ್ದರಾಮಯ್ಯ ವಾಗ್ದಾಳಿ