ಶಿವಮೊಗ್ಗ: ನಗರದಲ್ಲಿ ಕೊರೊನಾ ಸೋಂಕು ಹಬ್ಬುತ್ತಿದ್ದರೂ ಸಹ ಜನ ಮಾತ್ರ ಕ್ಯಾರೇ ಎನ್ನುತ್ತಿಲ್ಲ. ಕರ್ಫ್ಯೂ ಇದ್ರೂ ಸಹ ಜನರ ದಿನ ನಿತ್ಯ ಓಡಾಟ ಮಾತ್ರ ಕಡಿಮೆ ಆಗುತ್ತಿಲ್ಲ. ಹೀಗಾಗಿ ಪೊಲೀಸರು 'ದಂಡ' ದಶಗುಣಂ ಮಂತ್ರ ಪಾಲಿಸುತ್ತಿದ್ದಾರೆ.
ಲಾಕ್ಡೌನ್ ನಿಯಮ ಉಲ್ಲಂಘನೆ ಮಾಡಿದ ಅಂಗಡಿಯ ಮಾಲೀಕರ ವಿರುದ್ಧ THE KARNATAKA EPIDEMIC DISEASES ACT 2020 ಕಾಯ್ದೆಯ ಅಡಿಯಲ್ಲಿ, ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ 01, ಭದ್ರಾವತಿ ಓಲ್ಡ್ ಟೌನ್ ಪೊಲೀಸ್ ಠಾಣೆಯಲ್ಲಿ 01, ಪ್ರಕರಣ ಸೇರಿ ಒಟ್ಟು 02 ಪ್ರಕರಣಗಳನ್ನು ದಾಖಲಿಸಲಾಗಿದೆ.
ಸರ್ಕಾರದ ನಿಯಮ ಉಲ್ಲಂಘನೆ ಮಾಡಿ ಅನಗತ್ಯವಾಗಿ ಓಡಾಡುತ್ತಿದ್ದ ವಾಹನ ಸವಾರರ ಮೇಲೆಯೂ ಖಾಕಿ ಪಡೆ ದಂಡ ಪ್ರಯೋಗಿಸಿದೆ. ಒಟ್ಟು 318 ವಾಹನಗಳನ್ನು (297 ದ್ವಿ ಚಕ್ರ ವಾಹನಗಳನ್ನು, ಮತ್ತು 07 ಆಟೋಗಳನ್ನು ಹಾಗೂ 14 ಕಾರುಗಳನ್ನು ) ವಶಪಡಿಸಿಕೊಳ್ಳಲಾಗಿದೆ.
IMV ಕಾಯ್ದೆ ಅಡಿಯಲ್ಲಿ ಒಟ್ಟು 189 ಪ್ರಕರಣಗಳನ್ನು ದಾಖಲಿಸಿ ರೂ 86,600 ದಂಡವನ್ನು ವಸೂಲಿ ಮಾಡಲಾಗಿದೆ ಎಂದು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.