ಶಿವಮೊಗ್ಗ: ರೈತರ ಪರವಾಗಿರುವ ಮಸೂದೆಯಲ್ಲಿ ತಪ್ಪು ಹುಡುಕುವುದು ಮೊಸರಲ್ಲಿ ಕಲ್ಲು ಹುಡುಕಿದಂತೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದ್ದಾರೆ. ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಸುಪ್ರೀಂಕೋರ್ಟ್ಗೆ ರೈತ ಪರವಾದ ಕಾನೂನಿನ ಕುರಿತು ತಿಳಿಸಲಾಗುವುದು. ಈ ಮಸೂದೆಯಲ್ಲಿ ರೈತ ವಿರೋಧಿಯಾಗಿ ಯಾವ ಅಂಶಗಳೂ ಇಲ್ಲ ಎಂದರು.
ಹೋರಾಟ ನಿರತ ರೈತರು ರೈತಪರವಾದ ಮಸೂದೆಯನ್ನು ವಾಪಸ್ ಪಡೆಯಬೇಕು ಎಂಬ ಬೇಡಿಕೆ ಇಟ್ಟಿದ್ದಾರೆ. ಈಗಾಗಲೇ ಹಲವು ಸುತ್ತಿನ ಮಾತುಕತೆ ನಡೆಸಲಾಗಿದೆ. ಕಾನೂನಿನಲ್ಲಿ ಸುಧಾರಣೆ ಬೇಕಾದರೆ ಅದನ್ನು ತರಲು ಸಿದ್ಧವಿದ್ದೇವೆ ಎಂದರು.
ಸಂಪುಟ ವಿಸ್ತರಣೆಯಾದಾಗ ದೊಡ್ಡ ಪಕ್ಷದಲ್ಲಿ ಅಸಮಾಧಾನ ಸಹಜ
ಈ ವೇಳೆ ಇಂದು ಪ್ರಮಾಣವಚನ ಸ್ವೀಕರಿಸಿದ ನೂತನ ಸಚಿವರಿಗೆ ಸಿ.ಟಿ. ರವಿ ಅಭಿನಂದನೆ ಸಲ್ಲಿಸಿದರು. ಸಚಿವ ಸ್ಥಾನ ನೀಡುವುದು ಸಿಎಂ ಪರಮಾಧಿಕಾರವಾಗಿದೆ. ನಮ್ಮ ಪಕ್ಷದಲ್ಲಿ ಬಹಳ ಜನ ಅನುಭವಿಗಳು, ಯೋಗ್ಯತೆ ಇರುವವರು, ಹಿರಿಯರು, ಉತ್ಸಾಹಿಗಳು ಇದ್ದಾರೆ. ಈಗ ಯೋಗ ಇರುವವರಿಗೆ ಸಚಿವ ಸ್ಥಾನ ಸಿಕ್ಕಿದೆ ಎಂದರು.
ಸಚಿವ ಈಶ್ವರಪ್ಪ, ಸಂಸದ ರಾಘವೇಂದ್ರ, ರಾಜ್ಯಸಭೆ ಸದಸ್ಯ ಈರಣ್ಣ ಕಡಾಡಿ ಹಾಜರಿದ್ದರು.
ಇದನ್ನೂ ಓದಿ: ಅವಕಾಶ ಕೈ ತಪ್ಪಿದ್ದಕ್ಕೆ ಅಸಮಾಧಾನ: ಹೈಕಮಾಂಡ್ಗೆ ದೂರು ನೀಡಲು ಮುಂದಾದ ಬೆಲ್ಲದ್!