ETV Bharat / state

ಶಿವಮೊಗ್ಗ: ಪತ್ನಿ ಅಗಲಿಕೆಯಿಂದ ಮನನೊಂದು ಹೆಡ್​ಕಾನ್​ಸ್ಟೇಬಲ್ ಆತ್ಮಹತ್ಯೆ - etv bharat kannada

ಪತ್ನಿಯ ಅಗಲಿಕೆಯಿಂದ ತೀವ್ರವಾಗಿ ಮನನೊಂದಿದ್ದ ಹೆಡ್​ಕಾನ್​ಸ್ಟೇಬಲ್​ವೊಬ್ಬರು ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ.

crime-head-constable-committed-suicide-in-shivamogga
ಶಿವಮೊಗ್ಗ: ಪತ್ನಿ ಅಗಲಿಕೆಯಿಂದ ಮನನೊಂದು ಹೆಡ್​ಕಾನ್​ಸ್ಟೇಬಲ್ ಆತ್ಮಹತ್ಯೆ
author img

By ETV Bharat Karnataka Team

Published : Oct 2, 2023, 4:59 PM IST

Updated : Oct 2, 2023, 5:17 PM IST

ಶಿವಮೊಗ್ಗ: ಇಲ್ಲಿನ ಪಶ್ಚಿಮ ಸಂಚಾರಿ ಪೊಲೀಸ್ ಠಾಣೆಯ ಹೆಡ್​ ಕಾನ್​ಸ್ಟೇಬಲ್ ಆತ್ಮಹತ್ಯೆಗೆ ಶರಣಾಗಿರುವ ಘಟನೆ ವಿನೋಬನಗರದಲ್ಲಿ ನಡೆದಿದೆ. ಜಯಪ್ಪ ಆತ್ಮಹತ್ಯೆಗೆ ಶರಣಾದ ಹೆಡ್​ ಕಾನ್​ಸ್ಟೇಬಲ್​.

ಜಯಪ್ಪ ಅವರು ಮೂಲತಃ ಹಾವೇರಿ ಜಿಲ್ಲೆಯ ಸಾತನೂರು ಗ್ರಾಮದವರಾಗಿದ್ದಾರೆ. ಐದು ದಿನಗಳ ಹಿಂದಷ್ಟೇ ಜಯಪ್ಪ ಅವರ ಪತ್ನಿ ಅನಾರೋಗ್ಯದಿಂದ ಮೃತಪಟ್ಟಿದ್ದರು. ಪತ್ನಿಯ ಅಗಲಿಕೆಯಿಂದ ತೀವ್ರವಾಗಿ ಮನನೊಂದಿದ್ದ ಜಯಪ್ಪ ಇಂದು ಬೆಳಗ್ಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಇವರಿಗೆ ವಯಸ್ಸಾದ ತಾಯಿ ಮತ್ತು ಇಬ್ಬರು ಮಕ್ಕಳಿದ್ದಾರೆ. ವಿನೋಬ ನಗರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಾಗಿದೆ.

ಇದನ್ನೂ ಓದಿ: ತುಮಕೂರು: ಸಾಲಬಾಧೆ ತಾಳಲಾರದೆ ಒಂದೇ ಕುಟುಂಬದ ಮೂವರು ಆತ್ಮಹತ್ಯೆ

ಈ ಹಿಂದಿನ ಘಟನೆ: ಇತ್ತೀಚಿಗೆ, ಪೊಲೀಸ್ ಕಾನ್ಸ್​ಟೇಬಲ್​ವೊಬ್ಬರು ಆತ್ಮಹತ್ಯೆಗೆ ಶರಣಾದ ಘಟನೆ ಬೀದರ್​ನ ಬಸವಕಲ್ಯಾಣ ಪಟ್ಟಣದ ಲಾಡ್ಜ್ ನಲ್ಲಿ ನಡೆದಿತ್ತು. ಉಮೇಶ್ ನಾಯ್ಕ (25) ಆತ್ಮಹತ್ಯೆ ಮಾಡಿಕೊಂಡ ಪೊಲೀಸ್ ಪೇದೆ. ಮೂಲತಃ ವಿಜಯನಗರ ಜಿಲ್ಲೆಯವರಾಗಿದ್ದ ಉಮೇಶ್ 2021ರಲ್ಲಿ ಪೊಲೀಸ್ ಕಾನ್​ಸ್ಟೇಬಲ್​ ಆಯ್ಕೆಯಾಗಿದ್ದರು. ಅವರು ಹಲವು ತಿಂಗಳಿನಿಂದ ಬಸವಕಲ್ಯಾಣ ನಗರ ಪೊಲೀಸ್​ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಉಮೇಶ್ ಆತ್ಮಹತ್ಯೆಗೆ ಪ್ರೇಮ ವೈಫಲ್ಯ ಕಾರಣವಿರಬಹುದು ಎಂಬ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದರು. ಬಸವಕಲ್ಯಾಣ ನಗರ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿತ್ತು.

Last Updated : Oct 2, 2023, 5:17 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.