ETV Bharat / state

ಗೋಪೂಜೆಯಲ್ಲಿ ಬಂಗಾರದ ಸರ ನುಂಗಿದ್ದ ಹಸು: ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆದ ಪಶುವೈದ್ಯರು - Veterinarians

Cow swallowed gold chain: ಹಸು ಪ್ರಸಾದದ ಜೊತೆ ನುಂಗಿದ್ದ ಚಿನ್ನದ ಸರವನ್ನು ಕೋಣಂದೂರಿನ ಹಿರಿಯ ಪಶು ವೈದ್ಯಾಧಿಕಾರಿ ಡಾ. ಆನಂದ್​ ಜಿ ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆದಿದ್ದಾರೆ.

Cow swallowed gold chain during Gopuja in Shimoga
ಗೋಪೂಜೆಯಲ್ಲಿ ಬಂಗಾರದ ಸರ ನುಂಗಿದ್ದ ಹಸು
author img

By ETV Bharat Karnataka Team

Published : Nov 28, 2023, 1:23 PM IST

ಶಿವಮೊಗ್ಗ: ಗೋಪೂಜೆ ಸಲ್ಲಿಸುವ ಸಮಯದಲ್ಲಿ ಹಸುವೊಂದು‌ ಪೂಜೆಗಿಟ್ಟಿದ್ದ ಬಂಗಾರದ ಸರವನ್ನು ನುಂಗಿದ್ದ ಘಟನೆ ಹೊಸನಗರ ತಾಲೂಕು ಮತ್ತಿಮನೆಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಇದೀಗ ಪಶುವೈದ್ಯರು ಹಸುವಿಗೆ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡುವ ಮೂಲಕ ಆ ಚಿನ್ನದ ಸರವನ್ನು ಹೊರತೆಗೆದಿದ್ದಾರೆ. ಮತ್ತಿಮನೆ ಸತ್ಯವತಿ ಶ್ಯಾಮ ಉಡುಪ ಅವರ ಮನೆಯಲ್ಲಿ ಈ ಘಟನೆ ನಡೆದಿದೆ.

ಗೋಪೂಜೆಯ ನಂತರ ಇಟ್ಟಿದ್ದ ಸರ ನಾಪತ್ತೆಯಾದಾಗ ಕುಟುಂಬದವರು ದಿಗಿಲುಗೊಂಡಿದ್ದರು. ನಂತರ ಪರಿಶೀಲಿಸಿದಾಗ ಪ್ರಸಾದದ ಜೊತೆ ಬಂಗಾರದ ಸರವನ್ನು ಹಸು ನುಂಗಿದೆ ಎಂದು ಮನೆಯವರು ಖಚಿತ ಪಡಿಸಿಕೊಂಡಿದ್ದಾರೆ. ಬಂಗಾರ ಹೋದರೆ ಹೋಗಲಿ ಎಂದು ಸತ್ಯವತಿ ಶ್ಯಾಮ ಉಡುಪ ಸುಮ್ಮನಾಗಿದ್ದರು. ಆದರೆ ಹಲವರ ಬಳಿ ಈ ವಿಚಾರ ಹೇಳಿದಾಗ ಇದು ಹಸುವಿನ ಪ್ರಾಣಕ್ಕೂ ಕುತ್ತು ತರಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದು ಅವರ ಆತಂಕಕ್ಕೆ ಕಾರಣವಾಗಿತ್ತು.

ಅಲ್ಲದೇ ಬಂಗಾರ ನುಂಗಿದ ದಿನದಿಂದ ಹಸು ಮೇವು ತಿನ್ನುವುದನ್ನು ಕಡಿಮೆ ಮಾಡಿತ್ತು. ಹಸುವಿನ ಆರೋಗ್ಯದ ಸ್ಥಿತಿಯ ಬಗ್ಗೆ ಕೋಣಂದೂರಿನ ಹಿರಿಯ ಪಶು ವೈದ್ಯಾಧಿಕಾರಿ ಡಾ. ಆನಂದ್​ ಜಿ ಅವರಿಗೆ ಮಾಹಿತಿ ನೀಡಿದ್ದರು. ವೈದ್ಯರು ಭಾನುವಾರ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡುವ ಮೂಲಕ‌ ಬಂಗಾರದ ಸರವನ್ನು ಹೊರತೆಗೆದಿದ್ದಾರೆ. ಹಸು ಆರೋಗ್ಯವಾಗಿದ್ದು, ಮನೆಯವರು ನಿಟ್ಟುಸಿರು ಬಿಟ್ಟಿದ್ದಾರೆ.

ಡಾ. ಆನಂದ್ ಈ ಬಗ್ಗೆ ಮಾಹಿತಿ ನೀಡಿ, ಹಸು‌ ಮೆಲುಕು‌ ಹಾಕಿ ಮೇವು ಜಗಿಯುವಾಗ ಸರ ತುಂಡಾಗಿ ಚೂಪಾಗಿದ್ದು, ರೆಟಿಕ್ಯುಲಮ್ ಭಾಗದಲ್ಲಿ ಸಿಲುಕಿತ್ತು. ಚೂಪಾಗಿದ್ದರಿಂದ ಗಾಯವಾಗಿ ಅನಾರೋಗ್ಯಕ್ಕೆ ಒಳಗಾಗುವ ಸಾಧ್ಯತೆ ಇತ್ತು. ಯಶಸ್ವಿ ಚಿಕಿತ್ಸೆ ಮೂಲಕ ಸರವನ್ನು ಹೊರತೆಗೆಯಲಾಗಿದೆ ಎಂದು ತಿಳಿಸಿದ್ದಾರೆ. ಕಾರ್ಯಾಚರಣೆ ವೇಳೆ ಮೈತ್ರಿ ಕಾರ್ಯಕರ್ತ ಗಣಪತಿ ಜಿ, ಪಶು ಇಲಾಖೆ ಸಿಬ್ಬಂದಿ ಹಾಜರಿದ್ದರು.

ಇದನ್ನೂ ಓದಿ: ಐಟಿ ಉದ್ಯೋಗಿಯ ಗೋಪ್ರೇಮ; ಅಪಘಾತದಲ್ಲಿ ಕಾಲು ಮುರಿದ ಹಸುವನ್ನು ದತ್ತು ಪಡೆದು ಆರೈಕೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.