ETV Bharat / state

ಅಡಿಕೆ ತಟ್ಟೆಗಳ ಉತ್ಪಾದನೆ ಕುಸಿತ.. ಪರಿಸರ ಸ್ನೇಹಿ ಕರಕುಶಲತೆ ಮಂದ!! - ವಿದೇಶ ರಫ್ತು ಕುಸಿತ

ಸ್ವ-ಸಹಾಯ ಸಂಘಗಳು ಬ್ಯಾಂಕ್​​ಗಳಿಂದ ಸಾಲ ಪಡೆದು ಅಡಿಕೆ ತಟ್ಟೆ, ಹಪ್ಪಳ, ಚಟ್ನಿಪುಡಿ, ಕರಕುಶಲ ವಸ್ತುಗಳಾದ ವ್ಯಾನಿಟಿ ಬ್ಯಾಗ್, ಗೃಹ ಅಲಂಕಾರ ವಸ್ತು ತಯಾರಿಕೆ ಹೀಗೆ ಹಲವು ಬಗೆಯ ವಸ್ತುಗಳನ್ನು ತಯಾರಿಸಲಾಗುತ್ತದೆ..

plate
ಅಡಿಕೆ ತಟ್ಟೆ
author img

By

Published : Oct 6, 2020, 7:55 PM IST

ಶಿವಮೊಗ್ಗ: ಕೋವಿಡ್​​ನಿಂದ ಮಾನವನ ಜೀವನ ಹಾಗೂ ಆರ್ಥಿಕತೆ ಪಾತಾಳಕ್ಕೆ ತಲುಪಿದೆ. ಸ್ವ-ಸಹಾಯ ಸಂಘಟನೆಗಳಂತೂ ತತ್ತರಿಸಿವೆ. ಹೀಗಾಗಿ, ಸ್ವಾವಲಂಬಿ ಜೀವನ ನಡೆಸಲು ಸರ್ಕಾರ ಮಹಿಳೆಯರ ಗುಂಪುಗಳಿಗ ಸಾಲ ನೀಡಲು ಪ್ರಾರಂಭಿಸಿದೆ. ಅದರಲ್ಲಿ ಶೇ.98ರಷ್ಟು ಸ್ವ-ಸಹಾಯ ಗುಂಪುಗಳು ವೈಯಕ್ತಿಕವಾಗಿ ಸಾಲ ಪಡೆದುಕೊಂಡ್ರೆ, ಉಳಿದ ಶೇ.2ರಷ್ಟು ಗೃಹೋಪಯೋಗಿ ವಸ್ತುಗಳ ತಯಾರಿಕೆಗೆ ತೊಡಗಿಸಿಕೊಳ್ಳುತ್ತವೆ.

ಕರಕುಶಲ ವಸ್ತುಗಳ ತಯಾರಿಕೆ : ಮಹಿಳೆಯರು ಸೇರಿ ರಚಿಸಿದ ಗುಂಪುಗಳು ಗೃಹೋಪಯೋಗಿ ವಸ್ತು ತಯಾರಿಸುತ್ತೇವೆ ಎಂದು ಬ್ಯಾಂಕ್​ನಿಂದ ಸಾಲ ಪಡೆಯುತ್ತಿವೆ. ದೊರೆಯುವ ಸಾಲದಿಂದ ಅಡಿಕೆ ತಟ್ಟೆ, ಹಪ್ಪಳ, ಚಟ್ನಿಪುಡಿ, ಕರಕುಶಲ ವಸ್ತುಗಳಾದ ವ್ಯಾನಿಟಿ ಬ್ಯಾಗ್, ಗೃಹ ಅಲಂಕಾರ ವಸ್ತು ತಯಾರಿಕೆ ಹೀಗೆ ವಿವಿಧ ಬಗೆಯ ವಸ್ತುಗಳನ್ನು ತಯಾರಿಸಲಾಗುತ್ತದೆ.

plate
ಪ್ಯಾಕ್​ ಮಾಡಿರುವ ಅಡಿಕೆ ತಟ್ಟೆಗಳು

ಲಾಕ್​​ಡೌನ್​​ನ ಮೂರು ತಿಂಗಳು ಸಾಲ ಕಟ್ಟುವುದು ಬೇಡವೆಂದು ಹೇಳಿದ್ದ ಸರ್ಕಾರ ಈಗ ಬಡ್ಡಿ ಪಾವತಿಸುವಂತೆ ಸೂಚಿಸುತ್ತಿದೆ. ಸ್ವ-ಸಹಾಯ ಗುಂಪಿನ‌ ಮಹಿಳೆಯರು ಸಣ್ಣ ಮಟ್ಟಿನ ಕೈಗಾರಿಕೆಯನ್ನು ಪ್ರಾರಂಭಿಸಿದ ಉತ್ಪನ್ನಗಳು ಬೇರೆ ರಾಜ್ಯ ಮತ್ತು ವಿದೇಶಕ್ಕೂ ರಫ್ತು ಮಾಡಲಾಗುತ್ತಿತ್ತು. ಈಗ ತಯಾರಿಕೆ ವಸ್ತುಗಳಿಗೆ ಬೇಡಿಕೆ ಕುಸಿತಗೊಂಡಿದೆ. ಹೀಗಾಗಿ, ತಯಾರಿಸಿದ ವಸ್ತುಗಳು ಮಹಿಳೆಯರ ಬಳಿಯೇ ಉಳಿಯುವಂತಾಗಿದೆ. ಆದರೆ, ಬ್ಯಾಂಕ್ ಲೋನ್, ಬಡ್ಡಿ ಮಾತ್ರ ಬೆಳೆಯುತ್ತಲೇ ಇದೆ. ಇದು ಸ್ವ-ಸಹಾಯ ಸಂಘದವರಿಗೆ ಚಿಂತೆಗೀಡು ಮಾಡಿದೆ.

ಅಡಿಕೆ ತಟ್ಟೆಗಳ ಉತ್ಪಾದನೆ ಕುಸಿತ

ಅಡಿಕೆ ತಟ್ಟೆಗೆ ಎಂದಿಗೂ ಬೇಡಿಕೆ ಇದ್ದೇ ಇರುತ್ತದೆ. ಅದು ಮಣ್ಣಲ್ಲಿ‌‌ ಕರಗುವುದರಿಂದ ವಿದೇಶಗಳಲ್ಲೂ ಹೆಚ್ಚು ಅವಲಂಬಿಸುತ್ತಾರೆ. ಸದ್ಯ ಯಾವುದೇ ಸಭೆ ಸಮಾರಂಭ ಸರಿಯಾಗಿ ಜರುಗುತ್ತಿಲ್ಲ. ಹೀಗಾಗಿ, ವಿದೇಶಿ ರಫ್ತು ಸಹ ಕುಸಿದಿದೆ. ಜಿಲ್ಲೆಯಲ್ಲಿ 28,672 ಸ್ವ-ಸಹಾಯ ಗುಂಪುಗಳಿವೆ. ಅವುಗಳಿಗೆ 601 ಕೋಟಿ ರೂ. ಸಾಲ ನೀಡಲಾಗಿದೆ.

ಸಾಲ ಪಡೆದವರು ಅದನ್ನು ತೀರಿಸಲು ಮತ್ತೆ ಸಾಲ ಮಾಡುವ ಪರಿಸ್ಥಿತಿಗೆ ಬಂದಿದ್ದಾರೆ. ಹೀಗಾಗಿ, ಸರ್ಕಾರ ನಮ್ಮ ನೆರವಿಗೆ ಬರಬೇಕಿದೆ ಎಂದು ಸ್ವ-ಸಹಾಯ ಸಂಘಟನೆಗಳು ಮನವಿ ಮಾಡಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.