ಶಿವಮೊಗ್ಗ: ಜಿಲ್ಲಾ ಸತ್ರ ಮತ್ತು ಪ್ರಧಾನ ನ್ಯಾಯಾಲಯದ ನೌಕರನೊಬ್ಬ ಉಪ್ಪಾರ ಹಾಸ್ಟೆಲ್ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.
ದಾವಣಗೆರೆ ಜಿಲ್ಲೆಯ ಮಲೆಬೆನ್ನೂರು ಗ್ರಾಮದ 25 ವರ್ಷದ ಸಂದೀಪ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಈತ ಕಳೆದ ಎರಡು ವರ್ಷಗಳಿಂದ ಶಿವಮೊಗ್ಗ ಜಿಲ್ಲಾ ನ್ಯಾಯಾಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದ. ಅಲ್ಲದೆ ತನ್ನ ಸ್ನೇಹಿತ ಬಾಳಪ್ಪನ ರೂಂನಲ್ಲಿ ವಾಸವಾಗಿದ್ದ. ಇಂದು ಕೋರ್ಟ್ಗೆ ರಜೆ ಹಾಕಿದ್ದ ಸಂದೀಪನಿಗೆ ಬಾಳಪ್ಪ ಫೋನ್ ಮಾಡಿದಾಗ ಫೋನ್ ತೆಗೆಯದ ಕಾರಣ, ಬಾಳಪ್ಪ ತನ್ನ ಸ್ನೇಹಿತರಿಗೆ ಹಾಸ್ಟೆಲ್ಗೆ ಹೋಗಿ ನೋಡಿ ಬರಲು ಹೇಳಿದ್ದಾರೆ.
ಬಾಳಪ್ಪನ ಸ್ನೇಹಿತರು ಹಾಸ್ಟೆಲ್ ರೂಂಗೆ ಹೋಗಿ ನೋಡಿದಾಗ ಸಂದೀಪ ನೇಣು ಹಾಕಿಕೊಂಡಿದ್ದು ತಿಳಿದು ಬಂದಿದೆ. ಸಂದೀಪ ವೈಯಕ್ತಿಕ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಕೋಟೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.