ಶಿವಮೊಗ್ಗ: ಜಿಲ್ಲೆಯಲ್ಲಿ ಒಂದೇ ದಿನ 31 ಜನರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 253ಕ್ಕೆ ತಲುಪಿದೆ.
ಇದುವರೆಗೂ ಜಿಲ್ಲೆಯಲ್ಲಿ 117 ಸೋಂಕಿತರು ಬಿಡುಗಡೆಯಾಗಿದ್ದು, ಆಸ್ಪತ್ರೆಯಲ್ಲಿ 132 ಜನ ಚಿಕಿತ್ಸೆ ಪಡೆಯುತ್ತಿದ್ದು, ಇದುವರೆಗೂ 4 ಜನ ಸಾವನ್ನಪ್ಪಿದ್ದಾರೆ.
ನಗರದಲ್ಲಿ 14, ಶಿಕಾರಿಪುರ- 5, ಭದ್ರಾವತಿ- 2, ಸಾಗರ- 2, ಹೊಸನಗರ- 2 ಹಾಗೂ ಸೊರಬದಲ್ಲಿ -11 ಪ್ರಕರಣಗಳು ದಾಖಲಾಗಿವೆ. ಜಿಲ್ಲೆಯ ರವಿವರ್ಮ ಬೀದಿಯ ಒಂದೇ ಕುಟುಂಬದ 7 ಜನಕ್ಕೆ ಸೋಂಕು ಹರಡಿದೆ. ಇದು P-16,647 ರೋಗಿಯಿಂದ ಹರಡಿದೆ. ಇನ್ನು ಸೊರಬದ P-14,387ಯಿಂದ ಒಟ್ಟು 12 ಜನರಿಗೆ ಸೋಂಕು ಹರಡಿದೆ. ಇದರಲ್ಲಿ 5 ಜನರಿಗೆ ಸಂಪರ್ಕವಿಲ್ಲದೆಯೇ ಸೋಂಕು ಹರಡಿದ್ದು, ಬೆಂಗಳೂರಿನಿಂದ ಇಬ್ಬರಿಗೆ ಕೊರೊನಾ ತಾಗಿದೆ.
ಉಳಿದ ಮೂವರಿಗೆ ದ್ವಿತೀಯ ಸಂಪರ್ಕದಿಂದ ಸೋಂಕು ಬಂದಿದೆ. ಕೊರೊನಾ ಸಮುದಾಯಕ್ಕೆ ಹರಡಿರಬಹುದು ಎಂಬ ಅನುಮಾನ ಎಲ್ಲರನ್ನು ಕಾಡುತ್ತಿದೆ. ಜಿಲ್ಲೆಯಲ್ಲಿ ಕೊರೊನಾ ಹರಡದಂತೆ ಜಿಲ್ಲಾಡಳಿತ ಎಷ್ಟೇ ಮುನ್ನೆಚ್ಚರಿಕೆ ಕ್ರಮಗಳು ತೆಗೆದುಕೊಂಡರು ಪ್ರಯೋಜನ ಆಗುತ್ತಿಲ್ಲ.