ETV Bharat / state

ಶಿವಮೊಗ್ಗದಲ್ಲಿ ದ್ವಿ‌ಶತಕ ದಾಟಿದ ಸೋಂಕಿತರ ಸಂಖ್ಯೆ: 50 ಜನರು ಗುಣಮುಖ - ಶಿವಮೊಗ್ಗ ಕೊರೊನಾ ನ್ಯೂಸ್​

ಶಿವಮೊಗ್ಗ ಜಿಲ್ಲೆಯಲ್ಲಿ ಇಂದು ಹೊಸದಾಗಿ 223 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು, ಇಬ್ಬರು ಬಲಿಯಾಗಿದ್ದಾರೆ. ಇಂದು ಒಂದೇ ದಿನ 50 ಜನ ಗುಣಮುಖರಾಗಿ ಡಿಸ್ಚಾರ್ಜ್​​ ಆಗಿದ್ದಾರೆ.

corona updates from shimogha
ಸೋಂಕಿತರ ಸಂಖ್ಯೆ
author img

By

Published : Aug 18, 2020, 9:14 PM IST

ಶಿವಮೊಗ್ಗ: ಜಿಲ್ಲೆಯಲ್ಲಿಂದು 223 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ಇದರಿಂದ ಒಟ್ಟು ಸೋಂಕಿತರ ಸಂಖ್ಯೆ 4766 ಕ್ಕೆ ಏರಿಕೆಯಾಗಿದೆ.

ಇಂದು ಒಂದೇ ದಿನ 50 ಜನ ಗುಣಮುಖರಾಗಿದ್ದು, ಇದುವರೆಗೂ 2878 ಜನ ಗುಣಮುಖರಾಗಿದ್ದಾರೆ. ಇಂದು ಇಬ್ಬರು ಕೊರೊನಾಗೆ ಇಬ್ಬರು ಬಲಿಯಾಗಿದ್ದಾರೆ. ಜಿಲ್ಲೆಯಲ್ಲಿ ಇದುವರೆಗೂ 79 ಜನ ಸಾವನ್ನಪ್ಪಿದ್ದಾರೆ. ಆಸ್ಪತ್ರೆ, ಕೋವಿಡ್ ಕೇರ್ ಸೆಂಟರ್ ನಲ್ಲಿ ಒಟ್ಟು‌1809 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮೆಗ್ಗಾನ್ ಕೋವಿಡ್ ಆಸ್ಪತ್ರೆಯಲ್ಲಿ 232 ಜನ, ಕೋವಿಡ್ ಕೇರ್ ಸೆಂಟರ್ ನಲ್ಲಿ 895 ಜನ ಸೋಂಕಿತರಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ 248 ಜನ ಸೋಂಕಿತರಿದ್ದಾರೆ. ಮನೆಯಲ್ಲಿ 322 ಜನ ಐಸೋಲೇಷನ್ ಆಗಿದ್ದಾರೆ. ಆಯುರ್ವೇದಿಕ್​ ಕಾಲೇಜಿನಲ್ಲಿ 112 ಸೋಂಕಿತರು ಇದ್ದಾರೆ.

ಜಿಲ್ಲೆಯಲ್ಲಿ ಕಂಟೈನ್ಮೆಂಟ್ ಝೋನ್​ ಸಂಖ್ಯೆ 1885 ಕ್ಕೆ ಏರಿಕೆಯಾಗಿದೆ. ಇದರಲ್ಲಿ 654 ಝೋನ್​ ವಿಸ್ತರಣೆಯಾಗಿದೆ.

ತಾಲೂಕುವಾರು ಸೋಂಕಿತರ ಸಂಖ್ಯೆ ಇಂತಿದೆ.

ಶಿವಮೊಗ್ಗ- 55

ಭದ್ರಾವತಿ-66

ಶಿಕಾರಿಪುರ-70

ತೀರ್ಥಹಳ್ಳಿ-09

ಹೊಸನಗರ-06

ಸೊರಬ-11

ಸೋಂಕಿತರ ಪೈಕಿ 6 ಜನ ಬೇರೆ ಜಿಲ್ಲೆಯಿಂದ ಬಂದವರಾಗಿದ್ದಾರೆ.

ಇನ್ನು ಜಿಲ್ಲೆಯಲ್ಲಿ ಇಂದು 1551 ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.