ಶಿವಮೊಗ್ಗ: ಗೃಹ ಮಂಡಳಿಯ ಅಧ್ಯಕ್ಷ, ತೀರ್ಥಹಳ್ಳಿ ಕ್ಷೇತ್ರದ ಶಾಸಕ ಆರಗ ಜ್ಞಾನೇಂದ್ರ ಅವರಿಗೆ ಕೊರೊನಾ ಸೋಂಕು ತಗುಲಿದೆ.
ಮೊನ್ನೆ ಆರಗ ಜ್ಞಾನೇಂದ್ರ ಅವರ ಕಾರು ಚಾಲಕ ಆನಂದ್ ಅವರಲ್ಲಿ ಸೋಂಕು ಕಂಡು ಬಂದಿತ್ತು. ಇದರಿಂದ ಎರಡು ದಿನಗಳ ಹಿಂದೆ ಪರೀಕ್ಷೆ ನಡೆಸಿದಾಗ ಆರಗ ಜ್ಞಾನೇಂದ್ರ ಹಾಗೂ ತಾ.ಪಂ ಸದಸ್ಯ ಕುಕ್ಕೆ ಪ್ರಶಾಂತ ರವರ ವರದಿ ನೆಗೆಟಿವ್ ಬಂದಿತ್ತು. ಇಂದು ನಡೆಸಿದ ಪರೀಕ್ಷೆಯಲ್ಲಿ ಆರಗ ಜ್ಞಾನೇಂದ್ರರವರಿಗೆ ಪಾಸಿಟಿವ್ ಬಂದಿದೆ.
ಪಾಸಿಟಿವ್ ಬಂದಿದ್ದರೂ ಯಾವುದೇ ಲಕ್ಷಣ ಇಲ್ಲದ ಕಾರಣ ವೈದ್ಯರ ಸಲಹೆ ಮೇರೆಗೆ ಮನೆಯಲ್ಲಿಯೇ ಐಸೋಲೇಷನ್ ಆಗಿದ್ದೇನೆ. ಇದರಿಂದ ಯಾರು ಸಹ ನಮ್ಮ ಬಳಿ ಬರಬಾರದು, ಅಲ್ಲದೇ ನನ್ನ ಜೊತೆ ಇದ್ದವರು ಪರೀಕ್ಷೆ ಮಾಡಿಸಿ ಎಂದು ವಿನಂತಿ ಮಾಡಿಕೊಂಡಿದ್ದಾರೆ.
ಮಾಜಿ ಶಾಸಕರಿಗೂ ಕೊರೊನಾ ಪಾಸಿಟಿವ್: ಶಿವಮೊಗ್ಗ ವಿಧಾನಸಭೆ ಕ್ಷೇತ್ರದ ಮಾಜಿ ಶಾಸಕ ಕೆ.ಬಿ. ಪ್ರಸನ್ನ ಕುಮಾರ್ ಅವರಿಗೂ ಕೊರೊನಾ ಸೋಂಕು ತಗುಲಿದೆ. ರೋಗ ಲಕ್ಷಣಗಳಿಲ್ಲದ ಕಾರಣ ಮನೆಯಲ್ಲಿಯೇ ಐಸೋಲೇಷನ್ ಆಗಿದ್ದೇನೆ ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ.