ಶಿವಮೊಗ್ಗ: ಸಿಎಂ ತವರು ಕ್ಷೇತ್ರ ಶಿಕಾರಿಪುರದಲ್ಲಿ ಕೊರೊನಾ ಹಾವಳಿ ಹೆಚ್ಚಾಗಿದೆ. ಕೊರೊನಾ ವಿರುದ್ಧ ಹೋರಾಡುವ ಪುರಸಭೆಯ ವಾರಿಯರ್ಸ್ ಸೇರಿದಂತೆ ಹಲವು ಮಂದಿ ಅಧಿಕಾರಿಗಳಿಗೆ ಕೊರೊನಾ ಸೋಂಕು ತಗುಲಿದೆ. ಈ ಹಿನ್ನೆಲೆಯಲ್ಲಿ 14 ದಿನಗಳ ಕಾಲ ಪುರಸಭೆಯನ್ನ ಸೀಲ್ ಡೌನ್ ಮಾಡಲಾಗಿದೆ.
ಈ ಕುರಿತು ಶಿಕಾರಿಪುರ ಪುರಸಭೆಯ ಸಿಬ್ಬಂದಿ ಗೇಟ್ಗೆ ಬೀಗ ಹಾಕಿ ಕಚೇರಿಗೆ ಸಾರ್ವಜನಿಕರು ಬರುವುದು ಬೇಡ ಎಂದು ಬೋರ್ಡ್ ಹಾಕಿದ್ದಾರೆ.
ಸಾರ್ವಜನಿಕ ಕಚೇರಿಯನ್ನು ಹೀಗೆ 14 ದಿನ ಬಂದ್ ಮಾಡಿದರೆ ಜನರಿಗೆ ಕಷ್ಟವಾಗುತ್ತದೆ. ಆದರೂ ಸಹ ಬಂದ್ ಮಾಡಿದ್ದಾರೆ ಎಂದು ಅಧಿಕಾರಿಗಳ ವಿರುದ್ಧ ಜನರು ಆಕ್ರೋಶ ಹೊರಹಾಕಿದ್ದಾರೆ.