ETV Bharat / state

ಸಂಸದ ಬಿ.ವೈ ರಾಘವೇಂದ್ರ ವಿರುದ್ಧ ಕಾಂಗ್ರೆಸ್ ಮುಖಂಡ ಗಂಭೀರ ಆರೋಪ

ಸಂಸದ ಬಿ.ವೈ ರಾಘವೇಂದ್ರ ಅವರು ಭೂ ಮಾಫಿಯಾದ ಒತ್ತಡಕ್ಕೆ ಮಣಿದು ರೈಲ್ವೆ ಟರ್ಮಿನಲ್​ನ್ನು ತಾಳಗುಪ್ಪದಿಂದ ಕೋಟೆ ಗಂಗೂರಿಗೆ ವರ್ಗಾಯಿಸಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ತೀ.ನಾ ಶ್ರೀನಿವಾಸ್ ಗಂಭೀರವಾಗಿ ಆರೋಪಿಸಿದರು.

shivmogga
ಸುದ್ದಿಗೋಷ್ಠಿ
author img

By

Published : Dec 1, 2020, 7:35 PM IST

ಶಿವಮೊಗ್ಗ: ತಾಳಗುಪ್ಪದಲ್ಲಿ ರೈಲ್ವೆ ಕೋಚಿಂಗ್ ಟರ್ಮಿನಲ್ ಸ್ಥಾಪಿಸಲು ಸೂಕ್ತ ಸ್ಥಳವೆಂದು ರೈಲ್ವೆ ಇಲಾಖೆಯೇ ಪ್ರಕಟಣೆ ಹೊರಡಿಸಿದ್ದರು ಸಹ ಸಂಸದ ಬಿ.ವೈ ರಾಘವೇಂದ್ರ ಅವರು ಭೂ ಮಾಫಿಯಾದ ಒತ್ತಡಕ್ಕೆ ಮಣಿದು ರೈಲ್ವೆ ಟರ್ಮಿನಲ್​ನ್ನು ತಾಳಗುಪ್ಪದಿಂದ ಕೋಟೆ ಗಂಗೂರಿಗೆ ವರ್ಗಾಯಿಸಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ತೀ.ನಾ ಶ್ರೀನಿವಾಸ್ ಗಂಭೀರವಾಗಿ ಆರೋಪಿಸಿದರು.

ಕಾಂಗ್ರೆಸ್ ಮುಖಂಡ ತೀ.ನಾ ಶ್ರೀನಿವಾಸ್

ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಸಂಸದರ ನೆರವಿಗೆ ನಿಂತ ರಿಯಲ್ ಎಸ್ಟೇಟ್ ಮಾಫಿಯಾಗಳಿಗೆ ಅನುಕೂಲ ಮಾಡಲು ಸಂಸದರು ತಾಳಗುಪ್ಪದಲ್ಲಿ ಆಗಬೇಕಿದ್ದ ರೈಲ್ವೆ ಕೋಚಿಂಗ್ ಟರ್ಮಿನಲ್​ನ್ನು ಕೋಟೆ ಗಂಗೂರಿಗೆ ವರ್ಗಾಯಿಸಿದ್ದಾರೆ ಎಂದು ಆರೋಪಿಸಿದರು. ರೈಲ್ವೆ ಕೋಚಿಂಗ್ ಟರ್ಮಿನಲ್ ವರ್ಗಾವಣೆ ಆದರೂ ಸಹ ಸಾಗರ ಹಾಗೂ ಸೊರಬ ಶಾಸಕರಾದ ಹರತಾಳು ಹಾಲಪ್ಪ ಹಾಗೂ ಕುಮಾರ್ ಬಂಗಾರಪ್ಪ ವಿರೋಧಿಸುತ್ತಿಲ್ಲ. ಇವರು ಸಂಸದರನ್ನು ಹಾಗೂ ಮುಖ್ಯಮಂತ್ರಿಗಳನ್ನು ನೋಡಿದರೆ ಹೆದರುತ್ತಾರೆ ಎಂದು ಟೀಕಿಸಿದರು.

ತುಂಗಾ ನದಿಯಲ್ಲಿ ಮಿಂದು ಶಾರದೆ ದರ್ಶನ ಪಡೆದ ಸಂಸದೆ ಶೋಭಾ ಕರಂದ್ಲಾಜೆ

ಶಿವಮೊಗ್ಗ ಜಿಲ್ಲೆಯ ಅಭಿವೃದ್ಧಿ ಬಗ್ಗೆ ಸಂಸದ ಬಿ.ವೈ ರಾಘವೇಂದ್ರ ಹಾಗೂ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಬೇಜಬ್ದಾರಿತನದಿಂದ ವರ್ತಿಸುತ್ತಿದ್ದಾರೆ. ಜಿಲ್ಲೆಯ ಅಭಿವೃದ್ಧಿ ಬಗ್ಗೆ ಹಾಗೂ ಜಿಲ್ಲೆಯ ಜನರ ಸಮಸ್ಯೆ ಬಗ್ಗೆ ಅಗತ್ಯ ಕ್ರಮಕೈಗೊಳ್ಳದೇ ಜಿಲ್ಲೆಗೆ ಮೋಸ ಮಾಡಿದ್ದಾರೆ ಎಂದರು. ಹಾಗೆಯೇ ಜಿಲ್ಲಾ ಪಂಚಾಯತ್​ನಲ್ಲೂ ಸಹ ಹಿಂಬದಿಯಿಂದ ಜೆಡಿಎಸ್ ಅಧ್ಯಕ್ಷರಿಗೆ ಬೆಂಬಲಿಸುತ್ತಿದ್ದಾರೆ. ಇದು ಮುಖ್ಯಮಂತ್ರಿಗಳಿಗೆ ಶೋಭೆ ತರುವ ಕೆಲಸವಲ್ಲ ಎಂದು ತಿಳಿಸಿದರು.

ಮಂಕಿಪಾರ್ಕ್ ನಿರ್ಮಾಣಕ್ಕೆ ಬಿಜೆಪಿ ಶಾಸಕರಲ್ಲೇ ಒಮ್ಮತ ಇಲ್ಲ, ಸಾಗರ ,ತೀರ್ಥಹಳ್ಳಿ ಕ್ಷೇತ್ರದ ಶಾಸಕರು ನಮ್ಮ ಕ್ಷೇತ್ರಕ್ಕೆ ಬೇಡ ಅಂತ ಹೇಳುತ್ತಿದ್ದಾರೆ. ಹಾಗಾದರೆ ಮಂಗಗಳ ಹಾವಳಿ ತಪ್ಪಿಸುವವರು ಯಾರು?. ಸಂಸದರು ಹರತಾಳು ಹಾಲಪ್ಪ ಹಾಗೂ ಆರಗ ಜ್ಞಾನೇಂದ್ರ ಅವರನ್ನು ಕರೆಸಿ ಮಾತುಕತೆ ಮೂಲಕ ಬಗೆಹರಿಸಲು ಯಾಕೆ ಮುಂದಾಗುತ್ತಿಲ್ಲ ಎಂದು ಪ್ರಶ್ನಿಸಿದರು. ಎಂಪಿಎಂ ಅರಣ್ಯ ಭೂಮಿಯನ್ನು ಖಾಸಗಿಯವರಿಗೆ ನೀಡಿ ಲೂಟಿ ಮಾಡುವ ಹುನ್ನಾರವನ್ನು ಸಂಸದರು ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.