ETV Bharat / state

ಸ್ವಕ್ಷೇತ್ರ ಶಿಕಾರಿಪುರದಲ್ಲಿ ತಾಲೂಕುಮಟ್ಟದ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಸಿಎಂ ಬಿಎಸ್​ವೈ - ಶಿಕಾರಿಪುರದಲ್ಲಿ ಸಿಎಂ ಯಡಿಯೂರಪ್ಪ ತಾಲೂಕು ಮಟ್ಟದ ಪರಿಶೀಲನಾ ಸಭೆ

ಸದ್ಯ ತಾಲೂಕಿನಲ್ಲಿ ಕೋವಿಡ್ ಲಸಿಕೆ ಎರಡನೇ ಡೋಸ್ 6 ಸಾವಿರ ಜನರಿಗೆ ನೀಡಲಾಗಿದೆ. ಲಸಿಕೆ ನೀಡುವಾಗ ಹೆಚ್ಚಿನ ಜನ ಆಗಮಿಸುತ್ತಾರೆ. ಲಸಿಕೆ ಪಡೆಯಲು ಹೆಚ್ಚಿನ ಜನ ಆಗಮಿಸುತ್ತಿರುವುದರಿಂದ ವ್ಯಾಕ್ಸಿನ್​ ಡೋಸ್​ಗಳು ಹೆಚ್ಚು ಬೇಕಾಗುತ್ತವೆ. ಇನ್ನೆರಡು ದಿನಗಳಲ್ಲಿ ಲಸಿಕೆ ಬರಲಿದ್ದು, ಜಿಲ್ಲೆಗೆ ಹೆಚ್ಚಿನ ಲಸಿಕೆ ಕಳಿಸುವುದಾಗಿ ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದರು.

cm yeddyurappa
ಸಿಎಂ ಯಡಿಯೂರಪ್ಪ
author img

By

Published : Jun 11, 2021, 5:54 PM IST

ಶಿವಮೊಗ್ಗ: ಸಿಎಂ ಬಿ.ಎಸ್.ಯಡಿಯೂರಪ್ಪ ತವರು ಕ್ಷೇತ್ರ ಶಿಕಾರಿಪುರದಲ್ಲಿ ಇಂದು ತಾಲೂಕುಮಟ್ಟದ ಪ್ರಗತಿ ಪರಿಶೀಲನಾ ಸಭೆ ನಡೆಸಿದ್ದಾರೆ.

ಶಿಕಾರಿಪುರದ ತಾಲೂಕು ಆಡಳಿತ ಭವನದಲ್ಲಿ ತಾಲೂಕುಮಟ್ಟದ ಅಧಿಕಾರಿಗಳ ಜತೆ ಸಭೆ ನಡೆಸಿದ್ದಾರೆ. ಮೊದಲಿಗೆ ಕೋವಿಡ್​​ನಿಂದ ಸಂಭವಿಸಿದ ಸಾವಿನ ಅಂಕಿ-ಅಂಶಗಳ ಬಗ್ಗೆ ಮಾಹಿತಿ ಪಡೆದರು. ನಂತರ ತಾಲೂಕು ಆಸ್ಪತ್ರೆಯ ಸ್ಥಿತಿಗತಿಗಳ ಬಗ್ಗೆ ಮಾಹಿತಿ ಪಡೆದುಕೊಂಡರು.

ಕೊರೊನಾ ಸ್ಥಿತಿಗತಿ ಬಗ್ಗೆ ಮಾಹಿತಿ

ತಾಲೂಕಿನಲ್ಲಿ ಕೊರೊನಾದಿಂದಾಗಿ ಸದ್ಯ 50 ಜನರು ಮೃತಪಟ್ಟಿದ್ದಾರೆ. ಶಿಕಾರಿಪುರದ ಜೊತೆಗೆ ಶಿರಾಳಕೊಪ್ಪದ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಕೋವಿಡ್ ಮೇಲ್ದರ್ಜೆಗೆ ಏರಿಸಲಾಗಿದೆ. ಎರಡು ಟ್ರಯಾಜ್ ಸೆಂಟರ್ ಮಾಡಲಾಗಿದೆ ಎಂದು ತಾಲೂಕು ವೈದ್ಯಾಧಿಕಾರಿ ಡಾ. ಶ್ರೀನಿವಾಸ್ ಮಾಹಿತಿ ನೀಡಿದರು.
ನಂತರ ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ಸದ್ಯ ತಾಲೂಕಿನಲ್ಲಿ ಕೋವಿಡ್ ಲಸಿಕೆ ಎರಡನೇ ಡೋಸ್ 6 ಸಾವಿರ ಜನರಿಗೆ ನೀಡಲಾಗಿದೆ. ಲಸಿಕೆ ನೀಡುವಾಗ ಹೆಚ್ಚಿನ ಜನ ಆಗಮಿಸುತ್ತಾರೆ. ಲಸಿಕೆ ಪಡೆಯಲು ಹೆಚ್ಚಿನ ಜನ ಆಗಮಿಸುತ್ತಿರುವುದರಿಂದ ವ್ಯಾಕ್ಸಿನ್​ ಡೋಸ್​ಗಳು ಹೆಚ್ಚು ಬೇಕಾಗುತ್ತವೆ. ಇನ್ನೆರಡು ದಿನಗಳಲ್ಲಿ ಲಸಿಕೆ ಬರಲಿದ್ದು, ಜಿಲ್ಲೆಗೆ ಹೆಚ್ಚಿನ ಲಸಿಕೆ ಕಳಿಸುವುದಾಗಿ ತಿಳಿಸಿದರು.

ಕಂದಾಯ ಇಲಾಖೆ ಬಗ್ಗೆಯೂ ಮಾಹಿತಿ

ಬಿತ್ತನೆ ಬೀಜ, ಗೊಬ್ಬರ ದಾಸ್ತಾನು, ಮಳೆಯಿಂದ ಹಾನಿಯಾಗಿರುವ ಕುರಿತು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಸಿಎಂ ಬಿ.ಎಸ್.ಯಡಿಯೂರಪ್ಪಗೆ ಮಾಹಿತಿ ನೀಡಿದರು. ಈ ವೇಳೆ ಸಿಇಒ ಶ್ರೀಮತಿ ವೈಶಾಲಿ, ಎಂಎಡಿಬಿ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ, ಎಸ್ಪಿ ಲಕ್ಷ್ಮೀ ಪ್ರಸಾದ್, ಡಿಹೆಚ್ಒ ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.