ETV Bharat / state

ಆಶ್ರಯ ಮನೆಗಳಿಗೆ ಮೂಲಭೂತ ಸೌಕರ್ಯ ಒದಗಿಸಿ ಹಕ್ಕುಪತ್ರ ನೀಡಿ: ಕೆ.ಬಿ.ಪ್ರಸನ್ನ ಕುಮಾರ್ - Etv Bharat Kannada

ಆಶ್ರಯ ಯೋಜನೆಯಡಿ ನಿರ್ಮಾಣವಾಗಿರುವ ಮನೆಗಳಿಗೆ ಮೂಲಭೂತ ಸೌಕರ್ಯಗಳನ್ನು ಮೊದಲು ನೀಡಿ. ನಂತರ ಹಕ್ಕುಪತ್ರ ವಿತರಿಸಿ ಎಂದು ಮಾಜಿ ಶಾಸಕ ಕೆ.ಬಿ.ಪ್ರಸನ್ನ ಹೇಳಿದರು.

ಕೆ.ಬಿ.ಪ್ರಸನ್ನ ಕುಮಾರ್
ಕೆ.ಬಿ.ಪ್ರಸನ್ನ ಕುಮಾರ್
author img

By

Published : Feb 7, 2023, 10:23 PM IST

ಶಿವಮೊಗ್ಗ: ನಗರದ ಹೊರವಲಯದಲ್ಲಿ ನಿರ್ಮಾಣವಾಗಿರುವ ಆಶ್ರಯ ಮನೆಗಳಿಗೆ ಮೂಲಭೂತ ಸೌಕರ್ಯ ಒದಗಿಸಿ ಹಕ್ಕುಪತ್ರ ನೀಡಬೇಕೆಂದು ಕೆಪಿಸಿಸಿ ವಕ್ತಾರ ಹಾಗೂ ಮಾಜಿ ಶಾಸಕ ಕೆ.ಬಿ.ಪ್ರಸನ್ನ ಕುಮಾರ್ ಆಗ್ರಹಿಸಿದ್ದಾರೆ. ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ನಗರ ಹೊರವಲಯದ ಗೋಪಿಶೆಟ್ಟಿ‌ಕೊಪ್ಪ ಹಾಗೂ ಗೋವಿಂದಪುರದಲ್ಲಿ ಪೂರ್ಣಗೊಂಡಿರುವ 288 ಮನೆಗಳ ಹಕ್ಕು ಪತ್ರವನ್ನು ನಾಳೆ ಸಿಎಂ ಬಸವರಾಜ ಬೊಮ್ಮಯಿ ನೀಡಲಿದ್ದಾರೆ. ಆದರೆ, ಈ ಮನೆಗಳಿಗೆ ವಿದ್ಯುತ್, ಕುಡಿಯುವ ನೀರು, ಯುಜಿಡಿ ಸೇರಿದಂತೆ ಯಾವುದೇ ಮೂಲಭೂತ ಸೌಕರ್ಯ ಒದಗಿಸಿಲ್ಲ. ಇದರಿಂದ ಎಲ್ಲಾ ರೀತಿಯ ಮೂಲಭೂತ ಸೌಕರ್ಯ ಒದಗಿಸಿದ ಮೇಲೆ ಹಕ್ಕು ಪತ್ರ ನೀಡಿ ಎಂದು ಆಗ್ರಹಿಸಿದರು.

ಪೂರ್ಣಗೊಳ್ಳದ ಮನೆಗಳಿಗ ಹಕ್ಕುಪತ್ರ ನೀಡುವುದಕ್ಕೆ ಕೆ.ಎಸ್.ಈಶ್ವರಪ್ಪ ತರಾತುರಿ ಮಾಡುತ್ತಿರುವುದನ್ನು ನೋಡಿದರೆ ಮುಂದೆ ಅವರಿಗೆ ಟಿಕೆಟ್ ಸಿಗುವುದಿಲ್ಲ ಎಂಬಂತೆ ಭಾಸವಾಗುತ್ತಿದೆ. ಗೋವಿಂದ ಶೆಟ್ಟಿ ಕೊಪ್ಪದಲ್ಲಿ ಆಶ್ರಯ ಮನೆಗಳನ್ನು ನಿರ್ಮಾಣ ಮಾಡಲಾಗಿದೆ. ಆದರೆ ಈಗ ತರಾತುರಿಯಲ್ಲಿ ಮನೆಗಳ ಹಕ್ಕುಪತ್ರ ನೀಡಲು ಮುಂದಾಗಿದ್ದಾರೆ. ಇಲ್ಲಿಗೆ ವಿದ್ಯುತ್ ಒದಗಿಸಲು 9 ಕೋಟಿ ರೂ. ಮೆಸ್ಕಾಂಗೆ ಕಟ್ಟಬೇಕು, 4.50 ಕೋಟಿ ರೂ ಕಟ್ಟಿದರೆ ಟೆಂಡರ್ ಕರೆಯುತ್ತಾರೆ. ಈಗ 20 ಲಕ್ಷ ರೂ‌ ಕಟ್ಟಿ ತಾತ್ಕಾಲಿಕ ವಿದ್ಯುತ್ ಪಡೆದಿದ್ದಾರೆ. ಮುಂದೆ ಶಾಶ್ವತ ಸಂಪರ್ಕ ಪಡೆಯದೆ ಹೋದ್ರೆ 28 ದಿನಕ್ಕೆ 7 ಲಕ್ಷ ರೂ. ನೀಡಬೇಕಾಗುತ್ತದೆ ಎಂದರು.

ಅಲ್ಲದೇ ಅಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ, ಬೋರ್​ವೆಲ್ ಕೊರೆಯಿಸಿದ್ದಾರೆ. ಇದು ನಗರದ ವ್ಯಾಪ್ತಿಯಲ್ಲಿ ಇಲ್ಲ ಎಂದು ನೀರು ಸೌಲಭ್ಯವನ್ನೂ ಒದಗಿಸಿಲ್ಲವಂತೆ. ಇದು ಗ್ರಾಮೀಣ ಭಾಗಕ್ಕೆ ಬರುವುದರಿಂದ ಐದು ಬೋರ್​ವೆಲ್ ಕೊರೆಯಿಸಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದು ಸಾಕಾಗುವುದಿಲ್ಲ. ಈಶ್ವರಪ್ಪ ನವರಿಗೆ 40% ಕಮಿಷನ್ ಸಿಗದ‌ ಕಾರಣ ಟೆಂಡರ್ ಕರೆದಿಲ್ಲವೇನೋ. ಕೆ.ಎಸ್.ಈಶ್ವರಪ್ಪನವರ ಎಡವಟ್ಟು ಕೆಲಸದಿಂದ ಕಾಮಗಾರಿ ವಿಳಂಬವಾಗುತ್ತಿದೆ. ಕೆ.ಎಸ್.ಈಶ್ವರಪ್ಪ ಹಿರಿಯ ಶಾಸಕರಾಗಿದ್ದು, ಜನರಿಗೆ ಮೋಸ ಮಾಡುತ್ತಿದ್ದಾರೆ ಎಂದು ಅವರು ದೂರಿದರು.

ಇದನ್ನೂ ಓದಿ: ಹೇಳಿಕೆ ವಾಪಸ್​ ಪಡೆಯದಿದ್ದಲ್ಲಿ ಉಗ್ರ ಹೋರಾಟ: ಹೆಚ್​ಡಿಕೆಗೆ ಶಿವಾನಂದ ಮುತ್ತಣ್ಣವರ ವಾರ್ನಿಂಗ್​​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.