ETV Bharat / state

ಇಂದಿನಿಂದ 3 ದಿನ ಸಿಎಂ ಬಿಎಸ್​ವೈ ಶಿವಮೊಗ್ಗ ಜಿಲ್ಲಾ ಪ್ರವಾಸ - CM BSY

ಇಂದಿನಿಂದ 3 ದಿನಗಳ ಕಾಲ ಸಿಎಂ ಬಿಎಸ್​ವೈ ಶಿವಮೊಗ್ಗ ಜಿಲ್ಲಾ ಪ್ರವಾಸ ಮಾಡಲಿದ್ದಾರೆ. ಇಂದು ಜಿಲ್ಲೆಗೆ ಆಗಮಿಸಲಿರುವ ಸಿಎಂ ಫೆ.17ರವರೆಗೆ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.

Shivamogga
ಮುಖ್ಯಮಂತ್ರಿ ಬಿ. ಎಸ್​. ಯಡಿಯೂರಪ್ಪ
author img

By

Published : Feb 14, 2021, 1:10 PM IST

ಶಿವಮೊಗ್ಗ: ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಅವರು ಇಂದಿನಿಂದ ಮೂರು ದಿನ ಶಿವಮೊಗ್ಗ ಜಿಲ್ಲಾ ಪ್ರವಾಸ ಮಾಡಲಿದ್ದಾರೆ.

ಇಂದು ಜಿಲ್ಲೆಗೆ ಆಗಮಿಸಲಿರುವ ಸಿಎಂ ಫೆ.17ರವರೆಗೆ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಇಂದು ಸಂಜೆ 4:30ಕ್ಕೆ ಸೂರಗೊಂಡನಕೊಪ್ಪದಿಂದ ಹೆಲಿಕಾಪ್ಟರ್ ಮೂಲಕ ಹೊರಟು 4:50ಕ್ಕೆ ಶಿಕಾರಿಪುರಕ್ಕೆ ಆಗಮಿಸುವರು. 5 ಗಂಟೆಗೆ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಕೆಡಿಪಿ ಸಭೆ ನಡೆಸಿ ವಾಸ್ತವ್ಯ ಮಾಡುವರು.

ಫೆ. 15ರಂದು ಬೆಳಗ್ಗೆ 11ಗಂಟೆಗೆ ಶಿಕಾರಿಪುರದಿಂದ ಹೊರಟು ಶಿವಮೊಗ್ಗದಲ್ಲಿ ವಿಜಯಪುರ ವಿಮಾನ ನಿಲ್ದಾಣ ಕಾಮಗಾರಿಯ ಕಾರ್ಯಾರಂಭಕ್ಕೆ ಆನ್‌ಲೈನ್ ಮೂಲಕ ಚಾಲನೆ ನೀಡುವರು. ಮಧ್ಯಾಹ್ನ 12:30ಕ್ಕೆ ರೈಲ್ವೆ ನಿಲ್ದಾಣದಲ್ಲಿ ವಿವಿಧ ಮೇಲ್ಸೇತುವೆ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ, ಸ್ಥಳೀಯ ಕಾರ್ಯಕ್ರಮಗಳಲ್ಲಿ ಭಾಗವಹಿಸುವರು.

ಫೆ.16 ರಂದು ಸ್ಥಳೀಯ ಕಾರ್ಯಕ್ರಮಗಳಲ್ಲಿ ಭಾಗವಹಿಸುವರು. ಫೆ. 17ರಂದು ಬೆಳಗ್ಗೆ 10:45ಕ್ಕೆ ಮಾಚೇನಹಳ್ಳಿಯಲ್ಲಿ ಕೈಗಾರಿಕೆಗಳ ಸಂಘದ ರಜತ ಮಹೋತ್ಸವ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ, 11:30ಕ್ಕೆ ಬಿಜೆಪಿ ಕಾರ್ಯಕಾರಿಣಿ ಸಭೆ, ಮಧ್ಯಾಹ್ನ 12 ಗಂಟೆಗೆ ಈಡಿಗರ ಸಮುದಾಯ ಭವನ ಉದ್ಘಾಟನೆ, 1 ಗಂಟೆಗೆ ಸುವರ್ಣ ಸಾಂಸ್ಕೃತಿಕ ಭವನದಲ್ಲಿ ಕೃಷಿ ವಿಶ್ವವಿದ್ಯಾಲಯ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯ ಶಿವಮೊಗ್ಗ ಹಾಗೂ ವ್ಯಾಲ್ಯೂ ಪ್ರೊಡಕ್ಟ್ ಲಿಮಿಟೆಡ್ ರಾಮೇನಕೊಪ್ಪ ಇವರ ಸಹಯೋಗದಲ್ಲಿ ಸಹ್ಯಾದ್ರಿ ನೋನಿ ಚಹಾದ ತಂತ್ರಜ್ಞಾನ ವರ್ಗಾವಣೆ ಕಾರ್ಯಕ್ರಮದಲ್ಲಿ ಭಾಗವಹಿಸುವರು.

ಓದಿ: ಇದೊಂದು ಐತಿಹಾಸಿಕ ಬಜೆಟ್: ಕೇಂದ್ರ ಬಜೆಟ್ ಸ್ವಾಗತಿಸಿದ ರಾಜ್ಯ ಸರ್ಕಾರ

ಮಧ್ಯಾಹ್ನ 2:20ಕ್ಕೆ ಹೊಳಲೂರಿನಲ್ಲಿ ಶಿವಮೊಗ್ಗ ಮತ್ತು ಭದ್ರಾವತಿ ತಾಲೂಕುಗಳಿಗೆ ಸಂಪರ್ಕ ಕಲ್ಪಿಸುವ ಸನ್ಯಾಸಿ ಕೋಡುಮಗ್ಗೆ ಮತ್ತು ಹೊಳಲೂರು ಬಳಿ ತುಂಗಭದ್ರಾ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಾಣ ಕಾಮಗಾರಿ ಉದ್ಘಾಟಿಸುವರು. ಮಧ್ಯಾಹ್ನ 3 ಗಂಟೆಗೆ ಆನವೇರಿಯಲ್ಲಿ ಮಾರಮ್ಮ ದೇವಸ್ಥಾನ ಉದ್ಘಾಟನೆ, 3:15ಕ್ಕೆ ಗುಡುಮಗಟ್ಟದಲ್ಲಿ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ 4ಗಂಟೆಗೆ ಗುಡುಮಗಟ್ಟ ಹೆಲಿಪ್ಯಾಡ್ ಮೂಲಕ ಬೆಂಗಳೂರಿಗೆ ವಾಪಸ್ಸಾಗಲಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.