ETV Bharat / state

65 ಅಡಿ ಎತ್ತರದ ಅಕ್ಕಮಹಾದೇವಿ ಪುತ್ಥಳಿ ಉದ್ಘಾಟಿಸಿದ ಸಿಎಂ ಬೊಮ್ಮಾಯಿ

author img

By

Published : Mar 17, 2023, 2:33 PM IST

ಉಡುತಡಿ ಗ್ರಾಮದಲ್ಲಿ ನಿರ್ಮಿಸಲಾಗಿರುವ ಅಕ್ಕಮಹಾದೇವಿಯ 65 ಅಡಿ ಎತ್ತರದ ಪುತ್ಥಳಿಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಿದರು.

CM Basavaraj Bommai
ಅಕ್ಕಮಹಾದೇವಿ ಪುತ್ಥಳಿ ಉದ್ಘಾಟಿಸಿದ ಸಿಎಂ ಬೊಮ್ಮಯಿ

ಶಿವಮೊಗ್ಗ: ಕನ್ನಡದ ವಚನಗಾರ್ತಿ, ಶಿವಶರಣೆ ಅಕ್ಕಮಹಾದೇವಿ ಅವರ 65 ಅಡಿ ಎತ್ತರದ ಪುತ್ಥಳಿಯನ್ನು ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಅನಾವರಣಗೊಳಿಸಿದರು. ಅಕ್ಕಮಹಾದೇವಿ ಅವರ ಜನ್ಮ ಸ್ಥಳ ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ಉಡುತಡಿಯಲ್ಲಿ ಅಕ್ಕಮಹಾದೇವಿ ಥೀಮ್‌ಪಾರ್ಕ್ ಅನ್ನು ಗುಜರಾತ್​ನ ಅಕ್ಷರ ಧಾಮದ ಮಾದರಿಯಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಇದರ ಮೊದಲ ಭಾಗವಾಗಿ ಇಂದು ಸಿಎಂ ಬೊಮ್ಮಾಯಿ ದೀಪ ಬೆಳಗಿಸುವ ಮೂಲಕ ಪುತ್ಥಳಿ ಅನಾವರಣಗೊಳಿಸಿದರು.

ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ, ಸಚಿವರಾದ ಗೋವಿಂದ ಕಾರಜೋಳ, ಬಸವರಾಜ ಬೈರತಿ, ಸಂಸದ ಬಿ.ವೈ ರಾಘವೇಂದ್ರ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ, ಉಗ್ರಾಣ ನಿಗಮದ ಅಧ್ಯಕ್ಷ ಹೆಚ್.ಟಿ.ಬಳಿಗಾರ್, ಎಂಎಡಿಬಿ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ ಸೇರಿದಂತೆ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ, ಎಸ್​ಪಿ ಮಿಥುನ್ ಕುಮಾರ್, ಜಿಲ್ಲಾ ಪಂಚಾಯತ್ ಸಿಇಒ ಪ್ರಕಾಶ್ ಭಾಗಿಯಾಗಿದ್ದರು.

  • ಶಿವಶರಣೆ ಅಕ್ಕಮಹಾದೇವಿ ಪುತ್ಥಳಿ ಅನಾವರಣ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಲೋಕಾರ್ಪಣೆ ಸಮಾರಂಭ.

    ಸ್ಥಳ : ಉಡುತಡಿ-ಉಡುಗಣಿ, ಶಿಕಾರಿಪುರ ತಾಲೂಕು. https://t.co/qKaMdrbMay

    — Basavaraj S Bommai (@BSBommai) March 17, 2023 " class="align-text-top noRightClick twitterSection" data=" ">

ಪೂರ್ಣವಾಗದ ಥೀಮ್ ಪಾರ್ಕ್: ಅಕ್ಷರ ಧಾಮದ ಮಾದರಿಯಲ್ಲಿ ಅಕ್ಕಮಹಾದೇವಿ ಜನ್ಮ ಸ್ಥಳವನ್ನು ಅಭಿವೃದ್ದಿ ಮಾಡಲಾಗುತ್ತಿದೆ. ಥೀಮ್ ಪಾರ್ಕ್ ಕಾಮಗಾರಿ ಇನ್ನೂ ನಡೆಯುತ್ತಿದೆ. ಆದರೆ ಅಕ್ಕಮಹಾದೇವಿ ರವರ 65 ಅಡಿ ಎತ್ತರದ ಪುತ್ಥಳಿಯನ್ನು ಮಾತ್ರ ಇಂದು ಉದ್ಘಾಟನೆ ಮಾಡಲಾಗಿದೆ. ಕಾಮಗಾರಿ ಮುಗಿಯಲು ಇನ್ಜೂ ಒಂದು ವರ್ಷ ಬೇಕಾಗಬಹುದು ಎಂದು ಅಂದಾಜಿಸಲಾಗಿದೆ.

ಕಂಪೇಗೌಡರ ಕಂಚಿನ ಪ್ರತಿಮೆ ಅನಾವರಣ: ಚಿಕ್ಕಬಳ್ಳಾಪುರ ನಗರದ ಬಿಬಿ ರಸ್ತೆಯಲ್ಲಿ ನಿರ್ಮಾಣಗೊಂಡಿರುವ 14 ಅಡಿ ಎತ್ತರದ ನಾಡಪ್ರಭು ಕಂಪೇಗೌಡರ ಕಂಚಿನ ಪ್ರತಿಮೆಯನ್ನು ರಾಜ್ಯದ ಸಚಿವರು ಹಾಗೂ ವಕ್ಕಲಿಗ ಸಮುದಾಯದ ಸ್ವಾಮೀಜಿಗಳು ಇತ್ತೀಚೆಗೆ ಅನಾವರಣಗೊಳಿಸಿದರು. ಕೆಂಪೇಗೌಡ ಪುತ್ಥಳಿ‌ ಅನಾವರಣ ಕಾರ್ಯಕ್ರಮದ ನಿಮಿತ್ತ ಚಿಕ್ಕಬಳ್ಳಾಪುರ ‌ನಗರದಲ್ಲಿ ಹಬ್ಬದ ವಾತಾವರಣ‌ ನಿರ್ಮಾಣವಾಗಿತ್ತು. ಸಾಂಸ್ಕೃತಿಕ ಕಲಾತಂಡಗಳೊಂದಿಗೆ ಮೆರವಣಿಗೆ ನಡೆದಿದ್ದು ದಾರಿಯುದ್ದಕ್ಕೂ ಸಮುದಾಯದ ಮುಖಂಡರು ಕೆಂಪೇಗೌಡರಿಗೆ ಜಯಕಾರ ಕೂಗಿ ಕುಣಿದು ಕುಪ್ಪಳಿಸಿದ್ದಾರೆ.

ನಗರದ ಬಿಬಿ ರಸ್ತೆಯಲ್ಲಿರುವ ವಕ್ಕಲಿಗರ ಕಲ್ಯಾಣಮಂಟಪದ ಪಕ್ಕದಲ್ಲಿಯೇ ನಿರ್ಮಾಣಗೊಂಡಿರುವ ಕೆಂಪೇಗೌಡರ ಪ್ರತಿಮೆಯನ್ನು ಆರೋಗ್ಯ ಸಚಿವ ಸುಧಾಕರ್ ನೇತೃತ್ವದಲ್ಲಿ ಅನಾವರಣ ಮಾಡಲಾಯಿತು. ಶ್ರೀ ನಿರ್ಮಾಲನಂದ ಸ್ವಾಮೀಜಿಗಳು ಹಾಗೂ ಸಹಕಾರ ಸಚಿವ ಸೋಮಶೇಖರ್ ಕಾರ್ಯಕ್ರಮಕ್ಕೆ ಹಾಜರಾಗಿ ಬೃಹತ್ ಕೆಂಪೇಗೌಡರ ಪುತ್ಥಳಿ ಅನಾವರಣಗೊಳಿಸಿದರು. ಇನ್ನು ಕೆಂಪೇಗೌಡರ ಕಂಚಿನ ಪ್ರತಿಮೆಯು 14 ಅಡಿ ಎತ್ತರ 16 ಅಡಿ ಉದ್ದ 4 ಅಡಿ ಅಗಲವಿದ್ದು ಸುಮಾರು 2,742 ಕೆಜಿ ತೂಕದ ಕಂಚಿ ಪ್ರತಿಮೆ ಇದಾಗಿದೆ.

ಇದನ್ನೂ ಓದಿ: ಹದಿನಾಲ್ಕು ಅಡಿ ಎತ್ತರದ ನಾಡಪ್ರಭು ಕಂಪೇಗೌಡರ ಕಂಚಿನ ಪ್ರತಿಮೆ ಅನಾವರಣ

108 ಅಡಿ ಎತ್ತರದ ಮೂರ್ತಿ: ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಆವರಣದಲ್ಲಿ ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಕಂಚಿನ ಪ್ರತಿಮೆಯನ್ನು ಪ್ರಧಾನಿ ಮೋದಿ ಅವರು ಉದ್ಘಾಟನೆ ಮಾಡಿದ್ದರು. ಈ ಮೂರ್ತಿಯನ್ನು ಶಿಲ್ಪಿ ರಾಮ್​ ಸುತಾರ್​ ಅವರು ನಿರ್ಮಿಸಿದ್ದಾರೆ. ವಲ್ಲಭಭಾಯಿ ಪಟೇಲ್ ಅವರ ಐಕ್ಯತಾ ಮೂರ್ತಿ ಮತ್ತು ಅಂಬೇಡ್ಕರ್ ಅವರ ಅತಿ ಎತ್ತರದ ಮೂರ್ತಿಯನ್ನೂ ಇವರೆ ನಿರ್ಮಾಣ ಮಾಡಿದ್ದಾರೆ. ಬೆಂಗಳೂರು ನಿರ್ಮಾತೃ ಆದ ಕೆಂಪೇಗೌಡರ ಅತೀ ಎತ್ತರದ ಮೂರ್ತಿಯೂ ಇದಾಗಿದೆ.

ಇದನ್ನೂ ಓದಿ: ನಾಡಪ್ರಭು ಕೆಂಪೇಗೌಡರ ಬೃಹತ್ ಕಂಚಿನ ಪ್ರಗತಿ ಪ್ರತಿಮೆ ಲೋಕಾರ್ಪಣೆ ಮಾಡಿದ ಪ್ರಧಾನಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.