ಶಿವಮೊಗ್ಗ: ಜಿಲ್ಲೆಯ ಸಾಗರ ತಾಲೂಕನ್ನು ಕೇಂದ್ರ ಸರ್ಕಾರ ಬ್ರಾಂಡ್ ಬ್ಯಾಂಡ್ ಸೇವೆ ಒದಗಿಸುವ ನೀಡುವ ಪ್ರಾಯೋಗಿಕ ಕಾರ್ಯಕ್ಕೆ ಆಯ್ಕೆ ಮಾಡಿಕೊಂಡಿದೆ. ದೇಶದ ನಾಲ್ಕು ತಾಲೂಕುಗಳಲ್ಲಿ ಸಾಗರ ತಾಲೂಕು ಒಂದಾಗಿರುವುದು ಇಲ್ಲಿನ ಜನತೆಗೆ ಹಾಗೂ ನೋ ನೆಟ್ ವರ್ಕ್ ನೋ ವೋಟಿಂಗ್ ಅಭಿಯಾನದ ಸದಸ್ಯರಿಗೂ ಹರ್ಷ ತಂದಿದೆ.
ಸಾಗರ ತಾಲೂಕಿನ ಶೇ 60 ರಷ್ಟು ಭಾಗ ಗುಡ್ಡಗಾಡು ಪ್ರದೇಶಗಳಿಂದ ಕೂಡಿದೆ. ಇದರಿಂದ ಈ ಭಾಗದಲ್ಲಿ ಪೋನ್ ನೆಟ್ ವರ್ಕ್ ಸರಿಯಾಗಿ ಲಭ್ಯವಾಗುತ್ತಿರಲಿಲ್ಲ. ಫೋನ್ ನೆಟ್ವರ್ಕ್ಗಾಗಿ ಜನ ಗುಡ್ಡಗಳನ್ನು ಹತ್ತಿ ಮಾತನಾಡಬೇಕಿತ್ತು. ಈ ಕುರಿತು ಜನ ಸುಮಾರು 20 ಕಿ.ಮೀ ದೂರದ ಪಾದಯಾತ್ರೆ ನಡೆಸಿ, ನಮಗೆ ನೆಟ್ ವರ್ಕ್ ನೀಡದೆ ಹೋದರೆ, ನಿಮಗೆ ವೋಟ್ ಇಲ್ಲ ಎಂಬ 'ನೋ ನೆಟ್ ವರ್ಕ್ ನೋ ವೋಟಿಂಗ್' ಎಂಬ ಅಭಿಯಾನ ನಡೆಸಿದ್ದರು.
ಇದಕ್ಕೆ ಮಣಿದ ಸಾಗರ ಶಾಸಕ ಹಾಲಪ್ಪ ಹರತಾಳು, ಸಂಸದರು ಕೇಂದ್ರದ ದೂರ ಸಂಪರ್ಕ ಇಲಾಖೆಯ ಸಚಿವ ಅಶ್ವಿನ್ ಹಾಗೂ ಹಿಂದಿನ ಮಂತ್ರಿಗಳನ್ನು ಭೇಟಿ ಮಾಡಿ ಮನವಿ ಮಾಡಿದ್ದರು. ಇದರ ಫಲವಾಗಿ ಈಗ ದೇಶದ ಗ್ರಾಮೀಣ ಭಾಗದಲ್ಲಿ ದೂರ ಸಂಪರ್ಕ ನೀಡುವ ಪ್ರಾಯೋಗಿಕವಾದ ಯೋಜನೆಯಲ್ಲಿ ಸಾಗರವನ್ನು ಆಯ್ಕೆ ಮಾಡಿಕೊಂಡಿದೆ.
ಕೇಂದ್ರ ಸರ್ಕಾರ ಸಾಗರ ತಾಲೂಕನ್ನು ಆಯ್ಕೆ ಮಾಡಿಕೊಂಡಿದಕ್ಕೆ ಸಂಸದ ರಾಘವೇಂದ್ರ ಹಾಗೂ ಶಾಸಕ ಹಾಲಪ್ಪ ಹರತಾಳು ಅವರು ತಮ್ಮ ಹರ್ಷ ವ್ಯಕ್ತಪಡಿಸಿದ್ದಾರೆ. ಈ ಕುರಿತು ಮಾತನಾಡಿದ ಸಂಸದ ಬಿ.ವೈ.ರಾಘವೇಂದ್ರ ರವರು ನನ್ನ ಅವಧಿಯಲ್ಲಿ 250 ಮೊಬೈಲ್ ಟವರ್ ಗಳನ್ನು ಹಾಕಲಾಗಿದೆ. ಇನ್ನು ಬ್ರಾಡ್ ಬ್ಯಾಂಡ್ನ 36 ಟವರ್ಗಳನ್ನು ಹಾಕಲಾಗಿದೆ. ಕೋವಿಡ್ ನಂತರ ಅನೇಕರು ವರ್ಕ್ ಫ್ರಂ ಹೋಮ್ ಮಾಡುವವರಗೆ ಇದು ಅನುಕೂಲಕರವಾಗಲಿದೆ. ಮೊದಲು ಎಲ್ಲರಿಗೂ ಬ್ರಾಂಡ್ ಬ್ಯಾಡ್ ಸರ್ವಿಸ್ ಉಚಿತವಾಗಿರಲಿದೆ. ಇದು 200 mbps ನಲ್ಲಿ ಸೇವೆ ಒದಗಿಲಿದ್ದು, ಉಚಿತವಾಗಿರುತ್ತದೆ ಎಂದರು.
ಶಾಸಕ ಹರತಾಳು ಹಾಲಪ್ಪ ಮಾತನಾಡಿ, ಗ್ರಾಮ ಪಂಚಾಯತ್ನಲ್ಲಿ ಅರ್ಜಿ ಸಲ್ಲಿಸಿ ಸೇವೆಯನ್ನು ಎಲ್ಲರೂ ಪಡೆಯಬಹುದು. ಇದರ ಸರ್ವಿಸ್ ಉಚಿತವಾಗಿರುತ್ತದೆ. ಜನರ ಹೋರಾಟಕ್ಕೆ ಕೇಂದ್ರದಿಂದ ಸಕಾರಾತ್ಮಕ ಪ್ರತಿಕ್ರಿಯೆ ದೊರೆತಿರುವುದು ಸಂತಸ ತಂದಿದೆ ಎಂದಿದ್ದಾರೆ.
ಇದನ್ನೂ ಓದಿ : ದೇಶದಲ್ಲಿ 5G ಸೇವೆ ಯುಗಾರಂಭ.. ಹೈಸ್ಪೀಡ್ ಇಂಟರ್ನೆಟ್ಗೆ ಚಾಲನೆ ನೀಡಿದ ಪ್ರಧಾನಿ ಮೋದಿ