ETV Bharat / state

ಮೊಬೈಲ್​​ನಲ್ಲಿ ಮಾತನಾಡುತ್ತ ಬಸ್ ಚಾಲನೆ : ಚಾಲಕನಿಗೆ 5 ಸಾವಿರ ರೂಪಾಯಿ ದಂಡ

author img

By

Published : Jul 8, 2023, 11:49 AM IST

ಮೊಬೈಲ್​ನಲ್ಲಿ ಮಾತನಾಡುತ್ತ ಬಸ್​ ಚಲಾಯಿಸಿದ ಚಾಲಕನಿಗೆ ಶಿವಮೊಗ್ಗ ಸಂಚಾರಿ ಪೊಲೀಸರು 5 ಸಾವಿರ ರೂಪಾಯಿ ದಂಡ ವಿಧಿಸಿದ್ದಾರೆ.

bus-driver-fined-for-driving-while-talking-on-mobile-in-shivamogga
ಮೊಬೈಲ್​​ನಲ್ಲಿ ಮಾತನಾಡುತ್ತಾ ಬಸ್ ಚಾಲನೆ : ಚಾಲಕನಿಗೆ 5 ಸಾವಿರ ದಂಡ

ಶಿವಮೊಗ್ಗ: ಖಾಸಗಿ ಬಸ್​ ಚಾಲಕನೋರ್ವ ಮೊಬೈಲ್​ನಲ್ಲಿ ಮಾತನಾಡುತ್ತ ಬಸ್​ ಚಲಾಯಿಸಿದ್ದಕ್ಕೆ ಶಿವಮೊಗ್ಗ ಸಂಚಾರಿ ಪೊಲೀಸರು ಐದು ಸಾವಿರ ರೂಪಾಯಿ ದಂಡ ವಿಧಿಸಿದ್ದಾರೆ. ಶಿವಮೊಗ್ಗ ಸಕ್ರೆಬೈಲ್​ ನಿವಾಸಿ ಮನ್ಸೂರ್​ ಅಲಿ ಎಂಬವರಿಗೆ ದಂಡ ವಿಧಿಸಲಾಗಿದೆ.

ಮನ್ಸೂರ್​ ಅವರು ಶಿವಮೊಗ್ಗದಿಂದ ಸಾಗರಕ್ಕೆ ಸಂಚರಿಸುವ ಖಾಸಗಿ ಬಸ್​ನಲ್ಲಿ ಚಾಲಕನಾಗಿದ್ದಾರೆ. ಇವರು ಬಸ್​ ಚಲಾಯಿಸುವಾಗ ಮೊಬೈಲ್​ನಲ್ಲಿ ಮಾತನಾಡುತ್ತಿರುವುದನ್ನು ಕಂಡ ಪ್ರಯಾಣಿಕರೋರ್ವರು ಮೊಬೈಲ್​ನಲ್ಲಿ ಸೆರೆ ಹಿಡಿದು ಶಿವಮೊಗ್ಗ ಸಂಚಾರಿ ಪೊಲೀಸರಿಗೆ ರವಾನಿಸಿದ್ದರು. ಈ ಬಗ್ಗೆ ಎಚ್ಚೆತ್ತ ಸಂಚಾರಿ ಪೊಲೀಸರು ಚಾಲಕನಿಗೆ 5 ಸಾವಿರ ರೂ. ದಂಡ ಹಾಕಿದ್ದಾರೆ.

5000 ರೂ ದಂಡ ಪಾವತಿಸಿದ ಮಹಿಳೆ : ಕೊಪ್ಪಳ ಘಟಕದ KA-35, F-252 ಬಸ್​ನ ಗಾಜಿಗೆ ಹಾನಿಯಾದ ಕಾರಣ, ಕೊಪ್ಪಳದ ಮುನಿರಾಬಾದ್ ಪೊಲೀಸ್ ಠಾಣೆಗೆ ನಿರ್ವಾಹಕರು ಪ್ರಯಾಣಿಕರ ಸಮೇತ ಬಸ್​ನ್ನು ತಂದಿದ್ದರು. ಆದರೆ ಈ ವೇಳೆ ಡಿಪೋ ಮ್ಯಾನೇಜರ್ 5000 ರೂ ದಂಡ ಪಾವತಿ ಮಾಡುವಂತೆ ಮಹಿಳೆಯಲ್ಲಿ ಕೇಳಿದ್ದಾರೆ. ಇಲ್ಲವಾದರೆ ಎಫ್​ಐಆರ್ ದಾಖಲಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಬಳಿಕ ತನ್ನ ತಪ್ಪಿನ ಅರಿವಾಗಿ ಪೊಲೀಸರಿಗೆ ಮನವಿ ಮಾಡಿ, ಕೊನೆಗೆ 5000 ದಂಡ ಪಾವತಿಸಿ ಅದೇ ಬಸ್​ನ​ಲ್ಲಿ ತೆರಳಿದ್ದರು.

ಚಾಲಕ ಮತ್ತು ಮಹಿಳೆ ವಿರುದ್ಧ ಪ್ರಕರಣ ದಾಖಲು : ಮಂಗಳೂರಿನಲ್ಲಿ ಬಸ್​ ಅಪಘಾತದಿಂದ ಮಹಿಳೆಯೊಬ್ಬರು ಕೂದಲೆಳೆ ಅಂತರದಲ್ಲಿ ಪಾರಾದ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಇತ್ತೀಚೆಗೆ ವೈರಲ್ ಆಗಿತ್ತು. ಈ ಸಂಬಂಧ ಬಸ್ ಚಾಲಕ ಮತ್ತು ಪಾದಚಾರಿ ಮಹಿಳೆಯ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದರು.

ಪಾದಚಾರಿ ಮಹಿಳೆಯೊಬ್ಬರು ತೌಡುಗೋಳಿ ಸಮೀಪದ ನರಿಂಗಾನದಲ್ಲಿ, ರಸ್ತೆಯಲ್ಲಿ ಬರುತ್ತಿದ್ದ ವಾಹನಗಳನ್ನು ಗಮನಿಸದೇ ತನ್ನ ಪಾಡಿಗೆ ರಸ್ತೆ ದಾಟುತ್ತಿದ್ದರು. ಈ ವೇಳೆ ಎದುರಿನಿಂದ ವೇಗವಾಗಿ ಖಾಸಗಿ ಬಸ್ ಬಂದಿದೆ. ಈ ವೇಳೆ ಮಹಿಳೆ ರಸ್ತೆ ದಾಟುವುದನ್ನು ಗಮನಿಸಿದ ಚಾಲಕ ಕೂಡಲೇ ಎಡಕ್ಕೆ ಬಸ್‌ ತಿರುಗಿಸುವ ಮೂಲಕ ಮಹಿಳೆಗೆ ಡಿಕ್ಕಿ ಆಗುವುದನ್ನು ತಪ್ಪಿಸಿದ್ದನು. ಬಳಿಕ ಅಲ್ಲಿದ್ದವರು ಮಹಿಳೆಯ ಆರೋಗ್ಯ ವಿಚಾರಿಸಿ ಕಳುಹಿಸಿದ್ದರು. ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ಈ ಸಂಬಂಧ ಮಂಗಳೂರು ‌ನಗರ ಪೊಲೀಸರು ಬಸ್ ಚಾಲಕನ ವಿರುದ್ಧ ಸಂಚಾರ ದಕ್ಷಿಣ ಪೊಲೀಸ್ ಠಾಣಾ ಸಿಆರ್ ಸಂಖ್ಯೆ 148/23ಕಲಂ 279,336 ಐಪಿಸಿ ಜೊತೆಗೆ ರೂಲ್ 211(2) ಆರ್/ಡಬ್ಲ್ಯೂ 177 ಐಎಂವಿ ಕಾಯ್ದೆಯಂತೆ ಪ್ರಕರಣ ದಾಖಲಿಸಿತ್ತು. ಅದೇ ರೀತಿ ಪಾದಚಾರಿ ‌ಮಹಿಳೆಯ ನಿರ್ಲಕ್ಷ್ಯದ ನಡಿಗೆಗಾಗಿ ಆಕೆಯ ಮೇಲೂ ಸೆಕ್ಷನ್ 13 ಟ್ರಾಫಿಕ್ ಕಂಟ್ರೋಲ್ ರೂಲ್ಸ್ ಮತ್ತು ಸೆಕ್ಷನ್ 92ಜಿ ಕೆಪಿ ಆಕ್ಟ್ ಪ್ರಕರಣ ದಾಖಲಿಸಿ‌ ದಂಡ ವಿಧಿಸಲಾಗಿತ್ತು.

ಇದನ್ನೂ ಓದಿ : Watch Video - ದ್ವಿಚಕ್ರ ವಾಹನ ಮುಖಾಮುಖಿ ಡಿಕ್ಕಿ: ಮೂವರಿಗೆ ಗಂಭೀರ ಗಾಯ.. ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.