ETV Bharat / state

ಶಿವಮೊಗ್ಗದಲ್ಲಿ ಹೋರಿ ಬೆದರಿಸುವ ಸ್ಪರ್ಧೆ : ನಾಲ್ವರಿಗೆ ಗಂಭೀರ ಗಾಯ - ಶಿವಮೊಗ್ಗದಲ್ಲಿ ಹೋರಿ ಬೆದರಿಸುವ ಸ್ಪರ್ಧೆ ಗಾಯಾಳುಗಳು

ಹೋರಿ ಬೆದರಿಸುವ ವೇಳೆ ಹೋರಿ ತಿವಿದು ನಾಲ್ವರಿಗೆ ಗಾಯವಾಗಿರುವ ಘಟನೆ ಶಿವಮೊಗ್ಗ ಜಿಲ್ಲೆಯಲ್ಲಿ ಸಂಭವಿಸಿದೆ.

ಶಿವಮೊಗ್ಗದಲ್ಲಿ ಹೋರಿ ಬೆದರಿಸುವ ಸ್ಪರ್ಧೆ
author img

By

Published : Oct 30, 2019, 3:47 AM IST

ಶಿವಮೊಗ್ಗ : ಹೋರಿ ಬೆದರಿಸುವ ವೇಳೆ ಹೋರಿ ತಿವಿದು ನಾಲ್ವರಿಗೆ ಗಾಯವಾಗಿರುವ ಘಟನೆ ಜಿಲ್ಲೆಯಲ್ಲಿ ಸಂಭವಿಸಿದೆ.

ಶಿಕಾರಿಪುರ ತಾಲೂಕಿನ ಕಲ್ಮನೆ ಗ್ರಾಮದಲ್ಲಿ ರಾಕೇಶ್ ಎಂಬಾತನಿಗೆ ಹೋರಿ ತಿವಿದಿದೆ. ಇದರಿಂದ ರಾಕೇಶ್ ಎಡ ಕಾಲು ಮುರಿದಿದೆ. ರಾಕೇಶ್ ಶಿವಮೊಗ್ಗ ತಾಲೂಕು ಹಾರನಹಳ್ಳಿ ಗ್ರಾಮದ ನಿವಾಸಿಯಾಗಿದ್ದು, ತನ್ನ ಸ್ನೇಹಿತರ ಜೊತೆ ಹೋರಿ ಬೆದರಿಸುವ ಸ್ಪರ್ಧೆ ನೋಡಲು ಹೋಗಿದ್ದ ವೇಳೆ ಅವಘಡ ಜರುಗಿದೆ.

ಇದೇ ತಾಲೂಕಿನ ಶಿವಾಜಿ‌ ಕಣಿಯ ಗ್ರಾಮದ ನಿವಾಸಿ ಹನುಮಂತ ಎಂಬಾತ ತನ್ನ ಸ್ನೇಹಿತನ ಜೊತೆ ಕಪ್ಪನಹಳ್ಳಿ ಗ್ರಾಮದಲ್ಲಿ ಹೋರಿ ಬೆದರಿಸುವ‌‌ ಸ್ಪರ್ಧೆ ನೋಡಲು ಹೋಗಿದ್ದ ವೇಳೆ ಹೋರಿ ತಿವಿದು ಗಾಯಗೊಂಡಿದ್ದಾನೆ. ಸದ್ಯ ಇಬ್ಬರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ‌‌ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ನಾಲ್ವರಿಗೆ ಗಂಭೀರ ಗಾಯ

ಶಿಕಾರಿಪುರ ಪಟ್ಟಣದ ದೊಡ್ಡಕೇರಿಯಲ್ಲಿ ಹೋರಿ ಬೆದರಿಸುವ ವೇಳೆ ಸಂದೀಪ್ ಎಂಬ ಯುವಕನ ಹೊಟ್ಟೆ ಹಾಗೂ ಬೆನ್ನಿಗೆ ಗುದ್ದಿದೆ. ಅಲ್ಲದೆ, ಸೋನು ಎಂಬ ಯುವಕನಿಗೂ ಸಹ ಹೋರಿ ಗುದ್ದಿದ ಪರಿಣಾಮ ಬಿದ್ದು ತಲೆಗೆ, ಬೆನ್ನಿಗೆ ತೀವ್ರ ಗಾಯವಾಗಿದೆ. ಇವರನ್ನು ಶಿಕಾರಿಪುರದ ತಾಲೂಕು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ್​ಗೆ ರವಾನಿಸಲಾಗಿದೆ.

ಉಡುಗಣಿ ಗ್ರಾಮದಲ್ಲಿ ಜೀಯಾ ಎಂಬ ಯುವಕ ಹೋರಿ ಹಿಡಿಯಲು ಹೋದಾಗ ತಲೆಗೆ ಪೆಟ್ಟು ಬಿದ್ದಿದೆ. ಹೋರಿ ಬೆದರಿಸುವ ಸ್ಪರ್ಧೆಗೆ ಜಿಲ್ಲೆಯಲ್ಲಿ ಅವಕಾಶವಿಲ್ಲ. ಆದರೂ‌ ಸಹ ರಾಜಕೀಯ ಪ್ರಭಾವದಿಂದ ಹೋರಿ ಬೆದರಿಸುವ ಸ್ಪರ್ಧೆ ನಡೆಸಲಾಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

Intro:ಹೋರಿ ಬೆದರಿಸುವ ವೇಳೆ ಹೋರಿ ತಿವಿದು ಮೂವರಿಗೆ ಗಾಯವಾಗಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಶಿಕಾರಿಪುರ ತಾಲೂಕಿನ ಕಲ್ಮನೆ ಗ್ರಾಮದಲ್ಲಿ ರಾಕೇಶ್ ಎಂಬಾತನಿಗೆ ಹೋರಿ ತಿವಿದಿದೆ. ಇದರಿಂದ ರಾಕೇಶ್ ರವರ ಎಡ ಕಾಲು ಮುರಿತವಾಗಿದೆ. ರಾಕೇಶ್ ಶಿವಮೊಗ್ಗ ತಾಲೂಕು ಹಾರನಹಳ್ಳಿ ಗ್ರಾಮದ ನಿವಾಸಿಯಾಗಿದ್ದು, ರಾಕೇಶ್ ತನ್ನ ಸ್ನೇಹಿತರ ಜೊತೆ ಹೋರಿ ಬೆಸರಿಸುವ ಸ್ಪರ್ಧೆ ನೋಡಲು ಹೋಗಿದ್ದ ವೇಳೆ ಅವಘಡ ನಡೆದಿದೆ. ಇನ್ನೂ ಶಿಕಾರಿಪುರ ತಾಲೂಕು ಶಿವಾಜಿ‌ ಕಣಿಯ ಗ್ರಾಮದ ನಿವಾಸಿ ಹನುಮಂತ ಎಂಬಾತ ತನ್ನ ಸ್ನೇಹಿತನ ಜೊತೆ ಶಿಕಾರಿಪುರ ಬಳಿಯ ಕಪ್ಪನಹಳ್ಳಿ ಗ್ರಾಮದಲ್ಲಿ ಹೋರಿ ಬೆದರಿಸುವ‌‌ ಸ್ಪರ್ಧೆ ನೋಡಲು ಹೋಗಿದ್ದ ವೇಳೆ ರಸ್ತೆ ಬಳಿ ನಿಂತಾಗ ಹೋರಿ ತಿವಿದಿದೆ.

Body:ಹನುಮಂತನಿಗೆ ಹೋರಿ ತಿವಿದ‌ ಪರಿಣಾಮ ಮುಖಕ್ಕೆ ಕೈಗೆ ಗಾಯಗಳಾಗಿವೆ. ಸದ್ಯ ಇಬ್ಬರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ‌‌ ದಾಖಲು ಮಾಡಿ‌ ಚಿಕಿತ್ಸೆ ನೀಡಲಾಗುತ್ತಿದೆ. ಅಲ್ಲದೆ ಶಿಕಾರಿಪುರ ಪಟ್ಟಣದ ದೊಡ್ಡಕೇರಿಯಲ್ಲಿ ಹೋರಿ ಬೆದರಿಸುವ ವೇಳೆ ಸಂದೀಪ್ ಎಂಬ ಯುವಕನ ಹೊಟ್ಟೆ ಹಾಗೂ ಬೆನ್ನಿಗೆ ಗುದ್ದಿದೆ. ಅಲ್ಲದೆ, ಸೋನು ಎಂಬ ಯುವಕನಿಗೂ ಸಹ ಹೋರಿ ಗುದ್ದಿದ ಪರಿಣಾಮ ಬಿದ್ದು ತಲೆಗೆ, ಬೆನ್ನಿಗೆ ತೀವ್ರ ತರವಾದ ಗಾಯವಾಗಿದೆ. ಇವರಿಗೆ ಶಿಕಾರಿಪುರದ ತಾಲೂಕು ಆಸ್ಪತ್ರೆಗೆ ದಾಖಲು ಮಾಡಿ‌ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗೆ ಮಣಿಪಾಲಗೆ ಕಳುಹಿಸಲಾಗಿದೆ.

Conclusion:ಶಿಕಾರಿಪುರ ತಾಲೂಕು ಉಡುಗಣಿ ಗ್ರಾಮದಲ್ಲಿ ಅದೇ ಗ್ರಾಮದ ಜೀಯಾ ಎಂಬ ಯುವಕ ಹೋರಿ ಹಿಡಿಯಲು ಹೋದಾಗ ತಲೆಗೆ ಪೆಟ್ಟು ಬಿದ್ದಿದೆ. ಹೋರಿ ಬೆದರಿಸುವ ಸ್ಪರ್ಧೆಗೆ ಜಿಲ್ಲೆಯಲ್ಲಿ ಅವಕಾಶವಿಲ್ಲ. ಆದರೂ‌ ಸಹ ರಾಜಕೀಯ ಪ್ರಭಾವದಿಂದ ಹೋರಿ ಬೆದರಿಸುವ ಸ್ಪರ್ಧೆ ನಡೆಸಲಾಗುತ್ತಿದೆ.

ಬೈಟ್: ರಾಕೇಶ್. ಗಾಯಾಳು.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.