ETV Bharat / state

ಸಿಎಎ ಕಾಯ್ದೆ ಒಪ್ಪದೆ ಹೋದ್ರೆ ಮುಸ್ಲಿಂ ಸಮಾಜಕ್ಕೇ ನಷ್ಟ: ಭಾನುಪ್ರಕಾಶ್ - ಶಿವಮೊಗ್ಗದಲ್ಲಿ ಬಿಜೆಪಿಯಿಂದ ಸಹಿ ಸಂಗ್ರಹ ಕಾರ್ಯಕ್ರಮ

ಇಂದು ಜಿಲ್ಲಾ ಬಿಜೆಪಿ ವತಿಯಿಂದ ನಗರದ ಖಾಸಗಿ ಬಸ್ ನಿಲ್ದಾಣದಲ್ಲಿ ಸಿಎಎ ಕಾಯ್ದೆ ಪರವಾಗಿ ಸಹಿ ಸಂಗ್ರಹ ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

bhanu prakhash
ರಾಜ್ಯ ಬಿಜೆಪಿ ಉಪಾಧ್ಯಕ್ಷ ಭಾನುಪ್ರಕಾಶ್
author img

By

Published : Jan 10, 2020, 7:23 PM IST

ಶಿವಮೊಗ್ಗ: ರಾಷ್ಟ್ರೀಯ ಪೌರತ್ವದಿಂದ ಮುಸ್ಲಿಂ ಸಮಾಜದವರಿಗೆ ಯಾವುದೇ ನಷ್ಟವಿಲ್ಲ. ಮುಸ್ಲಿಂ ಸಮಾಜವನ್ನು ಕಾಂಗ್ರೆಸ್ ತಪ್ಪು ದಾರಿಗೆ ಎಳೆಯುತ್ತಿದೆ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಭಾನುಪ್ರಕಾಶ್ ಹೇಳಿದರು.

ಜಿಲ್ಲಾ ಬಿಜೆಪಿ ವತಿಯಿಂದ ಸಹಿ ಸಂಗ್ರಹ ಅಭಿಯಾನ ಕಾರ್ಯಕ್ರಮ

ಜಿಲ್ಲಾ ಬಿಜೆಪಿ ವತಿಯಿಂದ ನಗರದ ಖಾಸಗಿ ಬಸ್ ನಿಲ್ದಾಣದಲ್ಲಿ ನಡೆದ ಸಿಎಎ ಪರ ಸಹಿ ಸಂಗ್ರಹ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್​ನವರು ಮಸೀದಿಗಳಿಗೆ ತೆರಳಿ ಸಿಎಎಯಿಂದ ಮುಸ್ಲಿಂ ಸಮಾಜಕ್ಕೆ ಅನ್ಯಾಯವಾಗುತ್ತಿದೆ ಎಂದು ಸುಳ್ಳು ಹೇಳುತ್ತಿದ್ದಾರೆ. 70 ವರ್ಷಗಳಿಂದ ನಿಮ್ಮೊಂದಿಗೆ ನಾವಿದ್ದೇವೆ ಎಂದೇಳಿಕೊಂಡು ಕಾಂಗ್ರೆಸ್​ ಪಕ್ಷ ಏನನ್ನೂ ಮಾಡಿಲ್ಲ. ಇದರಿಂದ ನಷ್ಟ ಅನಿಭವಿಸಿದ್ದೇವೆ. ಈ ಕಾಯ್ದೆಯಿಂದ ಯಾರಿಗೂ ಯಾವುದೇ ತೊಂದರೆ ಇಲ್ಲ ಎಂದರು.

ಬಳಿಕ ಸಚಿವ ಕೆ.ಎಸ್.ಈಶ್ವರಪ್ಪ ಮಾತನಾಡಿ, ಸಿಎಎ ಕಾಯ್ದೆಯಿಂದ ದೇಶಕ್ಕೆ ಒಳ್ಳೆಯದಾಗಲೆಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಅಮಿತ್​ ಶಾ ಕಾಯ್ದೆಯನ್ನು ತಿದ್ದುಪಡಿ ಮಾಡಿ ಜಾರಿಗೆ ತಂದಿದ್ದಾರೆ. ನಾವು ಮೋದಿ, ಶಾ ಅವರ ಜೊತೆಗಿದ್ದೇವೆ. ಈ ಕಾಯ್ದೆ ಪರ ಇಂದು ಸಹಿ ಸಂಗ್ರಹ ಮಾಡುತ್ತಿದ್ದೇವೆ. ಸಹಿ ಸಂಗ್ರಹ ಅಭಿಯಾನದಲ್ಲಿ ಸಾರ್ವಜನಿಕರು ಸಹ ಸಹಿ ಹಾಕಿ ಪೌರತ್ವ ಕಾಯ್ದೆಗೆ ಬೆಂಬಲ ಸೂಚಿಸುವಂತೆ ಮನವಿ ಮಾಡಿದರು.

Intro:ರಾಷ್ಟ್ರೀಯ ಪೌರತ್ವ ಒಪ್ಪದೆ ಹೋದ್ರೆ ನಷ್ಟ ಮುಸ್ಲಿಂ ಸಮಾಜಕ್ಕೆ ಹೊರತು ಹಿಂದೂ ಸಮಾಜಕ್ಕೆ ಅಲ್ಲ: ಭಾನು ಪ್ರಕಾಶ್.

ಶಿವಮೊಗ್ಗ: ರಾಷ್ಟ್ರೀಯ ಪೌರತ್ವದಿಂದ ಮುಸ್ಲಿಂ ಸಮಾಜದವರಿಗೆ ಯಾವುದೇ ನಷ್ಟವಿಲ್ಲ, ಮುಸ್ಲಿಂ ಸಮಾಜವನ್ನು ಕಾಂಗ್ರೆಸ್ ತಪ್ಪು ದಾರಿಗೆ ಎಳೆಯುತ್ತಿದೆ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಭಾನುಪ್ರಕಾಶ್ ಹೇಳಿದ್ದಾರೆ. ಶಿವಮೊಗ್ಗದಲ್ಲಿ ಜಿಲ್ಲಾ ಬಿಜೆಪಿ ವತಿಯಿಂದ ನಗರದ ಖಾಸಗಿ ಬಸ್ ನಿಲ್ದಾಣದ ಮುಂದೆ ನಡೆದ ಸಿಎಎ ಪರ ಸಹಿ ಸಂಗ್ರಹ ಕಾರ್ಯಕ್ರಮದಲ್ಲಿ ಮಾತನಾಡಿದ ಭಾನುಪ್ರಕಾಶ್ ರವರು, ಕಾಂಗ್ರೆಸ್ ನವರು ಮಸೀದಿಗಳಿಗೆ ತೆರಳಿ ಸಿಎಎ ಯಿಂದ ಮುಸ್ಲಿಂ ಸಮಾಜಕ್ಕೆ ಅನ್ಯಾಯ ಆಗುತ್ತಿದೆ ಎಂದು ಸುಳ್ಳು ಹೇಳಿತ್ತಿದ್ದಾರೆ. ಕಳೆದ‌ 70 ವರ್ಷಗಳಿಂದ ನಿಮ್ಮೂಂದಿಗೆ ನಾವಿದ್ದೆವೆ. ಕಳೆದ 70 ವರ್ಷಗಳಿಂದ ಕಾಂಗ್ರೆಸ್ ಜೊತೆ ಇದ್ದು ನಷ್ಟವನ್ನು ಅನುಭಿಸಿದ್ದೀರಿ..ಮುಂದೆ 70 ವರ್ಷಗಳ‌ ಕಾಲ ಇದ್ದರು ಸಹ ನಿಮಗೆ ನಷ್ಟ ಎಂದರು. ನೀವು ಎಷ್ಟೆ ತೊಂದ್ರೆ ನೀಡಿದ್ರು ಸಹ ಹಿಂದೂ ಸಮಾಜ ನಿಮ್ಮೂಂದಿಗೆ ಇದೆ. ಇನ್ನೂ ನೀವು ಗಣಪತಿಗೆ ಕಲ್ಲು ಹೊಡೆಯುತ್ತಿರಿ, ನಮ್ಮ ಹೆಣ್ಣು‌ ಮಕ್ಕಳನ್ನು ಎತ್ತಿ ಕೊಂಡು ಹೋಗುತ್ತಿರಿ, ಮತಾಂತರ ಮಾಡುತ್ತಿರಿ. ಇಷ್ಟು ವರ್ಷ ನಿಮ್ಮನ್ನು ಸಹಿಸಿ‌ಕೊಂಡಿದ್ದೆಲ್ಲಾ ಎಂದರು.

Body:ನಂತ್ರ ಮಾತನಾಡಿದ ಸಚಿವ ಕೆ.ಎಸ್. ಈಶ್ವರಪ್ಪನವರು ಸಿಎಎ ಕಾಯಿದೆ ಯಿಂದ ದೇಶಕ್ಕೆ ಒಳ್ಳೆಯದಾಗುತ್ತದೆ ಎಂದು ಪ್ರದಾನ ಮಂತ್ರಿ ನರೇಂದ್ರ ಮೋದಿ ಹಾಗೂ ಅಮಿತ ಷಾ ರವರು ಕಾಯಿದೆಯನ್ನು ತಿದ್ದುಪಡಿ ಮಾಡಿ ಜಾರಿಗೆ ತಂದಿದ್ದಾರೆ. ಪೌರತ್ವ ಕಾಯಿದೆಯನ್ನು ಬೆಂಬಲಿಸುವ ನಾವು ಮೋದಿ, ಷಾ ರವರ ಜೊತೆಗೆ ಇದ್ದೆವೆ ಎಂದು ಇಂದು ಸಹಿ ಸಂಗ್ರಹ ಮಾಡುತ್ತಿದ್ದೆವೆ ಎಂದರು. ಈ ವೇಳೆ ಪೌರತ್ವ ತಿದ್ದುಪಡಿಯನ್ನು ಬೆಂಬಲಿಸುವ ಅಭಿಯಾನಕ್ಕೆ ಈಶ್ವರಪ್ಪನವರು ತಮ್ಮ ಸಹಿ ಹಾಕುವ ಮೂಲಕ ಬೆಂಬಲ ನೀಡಿದರು. ನಂತ್ರ ಪಕ್ಷದ ಎಲ್ಲಾ ಮುಖಂಡರು ಸಹಿ ಹಾಕಿದರು.

Conclusion:ಸಹಿ ಸಂಗ್ರಹ ಅಭಿಯಾನದಲ್ಲಿ ಸಾರ್ವಜನಿಕರು ಸಹ ಸಹಿ ಹಾಕಿ ಪೌರತ್ವ ಕಾಯಿದೆಗೆ ಬೆಂಬಲವನ್ನು ಸೂಚಿಸಿದರು.

ಬೈಟ್: ಭಾನು ಪ್ರಕಾಶ್. ಉಪಾಧ್ಯಕ್ಷರು. ಬಿಜೆಪಿ.

ಬೈಟ್: ಕೆ.ಎಸ್.ಈಶ್ವರಪ್ಪ.‌ಸಚಿವ ಗ್ರಾಮೀಣಾಭಿವೃದ್ದಿ ಖಾತೆ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.