ETV Bharat / state

ಭದ್ರಾವತಿ ವಿಧಾನಸಭೆ ಕ್ಷೇತ್ರದಲ್ಲಿ ರಾಜಕೀಯ ಲೆಕ್ಕಾಚಾರ ಜೋರು: ಅನುಕಂಪದ ಅಲೆಯಲ್ಲಿ ಜೆಡಿಎಸ್​, ಕಾಂಗ್ರೆಸ್​ - ಬಿಜೆಪಿ ಪ್ರಾಬಲ್ಯಕ್ಕೆ ಯತ್ನ - bhadravathi assembly constituency

ಭದ್ರಾವತಿ ವಿಧಾನಸಭೆ ಕ್ಷೇತ್ರದಲ್ಲಿ ರಾಜಕೀಯ ಲೆಕ್ಕಾಚಾರ ಜೋರಾಗಿದೆ. ಕಾಂಗ್ರೆಸ್​ ಮತ್ತು ಜೆಡಿಎಸ್​ ನಡುವೆ ಕ್ಷೇತ್ರದಲ್ಲಿ ನೇರ ಹಣಾಹಣಿ ಇದ್ದು ಬಿಜೆಪಿ ಕೂಡ ಪ್ರಾಬಲ್ಯ ಸಾಧಿಸುವ ಯತ್ನ ನಡೆಸಿದೆ. ಹಾಗಾಗಿ ಈ ಬಾರಿ ಮತದಾರ ಯಾವ ಪಕ್ಷದ ಅಭ್ಯರ್ಥಿಗೆ ಮಣೆ ಹಾಕಲಿದ್ದಾನೆ ಅನ್ನೋದನ್ನು ಕಾದು ನೋಡಬೇಕು ಎನ್ನುತ್ತಿದ್ದಾರೆ ಇಲ್ಲಿಯ ರಾಜಕೀಯ ವಿಶ್ಲೇಷಕರು.

bhadravathi assembly constituency profile

author img

By

Published : Apr 3, 2023, 5:30 PM IST

ಶಿವಮೊಗ್ಗ: ಭದ್ರಾವತಿ ವಿಧಾನಸಭೆ ಕ್ಷೇತ್ರ ಜಿಲ್ಲೆಯ ಇತರ ಕ್ಷೇತ್ರಗಳಿಕ್ಕಿಂತ ವಿಭಿನ್ನ ಮತ್ತು ವಿಶೇಷ ಉಳ್ಳದ್ದು. ಕ್ಷೇತ್ರದಲ್ಲಿ ಪಕ್ಷಗಳು ನಗಣ್ಯ, ಇಲ್ಲಿ ಅಭ್ಯರ್ಥಿಗಳಿಗೆ ಪ್ರಾಮುಖ್ಯತೆ. ಕಳೆದ ಎರಡು ದಶಕಗಳಿಂದ ಕ್ಷೇತ್ರದಲ್ಲಿ ಇಬ್ಬರೇ ನಾಯಕರುಗಳು ಎದುರಾಳಿಗಳಾಗಿದ್ದರು. ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷ ಕ್ಷೇತ್ರದ ಹಿಡಿತ ಸಾಧಿಸುವಲ್ಲಿ ಯಶ ಕಂಡಿದ್ದು, ಬಿಜೆಪಿ ಕೂಡ ಹಿಂದೆ ಬಿದ್ದಿಲ್ಲ. ಈ ಕ್ಷೇತ್ರವನ್ನು ತಮಿಳುನಾಡು ರಾಜ್ಯಕ್ಕೆ ಹೋಲಿಸುವುದುಂಟು. ಅದಕ್ಕೆ ಬಲವಾದ ಕಾರಣವೂ ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು.

bhadravathi assembly constituency profile
ಕುಮಾರ್ (ಬೆಜೆಪಿ)

ತಮಿಳುನಾಡಿನಲ್ಲಿ ಎಐಡಿಎಂಕೆ ಹಾಗೂ ಡಿಎಂಕೆ ಪಕ್ಷಗಳು ಮಾತ್ರ ಎದುರಾಳಿಗಳಾಗುತ್ತವೆ ಹಾಗೂ ಇಬ್ಬರಲ್ಲಿ ಒಬ್ಬರು ಗೆಲ್ಲುತ್ತಾರೆ. ಅದೇ ರೀತಿ ಭದ್ರಾವತಿಯಲ್ಲಿ ಕಳೆದ ಎರಡು ದಶಕಗಳಿಂದ ಜೆಡಿಎಸ್​ನ ಅಪ್ಪಾಜಿಗೌಡ ಹಾಗೂ ಕಾಂಗ್ರೆಸ್​ನ ಸಂಗಮೇಶ್ ನಡುವೆ ಸ್ಪರ್ಧೆ ನಡೆಯುತ್ತಲೇ ಇದೆ. ಕ್ಷೇತ್ರವು ಭದ್ರಾವತಿ ಪಟ್ಟಣ ಸೇರಿದಂತೆ ಗ್ರಾಮಾಂತರ ಪ್ರದೇಶಗಳನ್ನು ಒಳಗೊಂಡಿದೆ. ಒಟ್ಟು 2,10,212 ಮತದಾರರಿದ್ದು ಇದರಲ್ಲಿ ಮಹಿಳೆಯರು 1,07,971 ಮತ್ತು ಪುರುಷರು 1,02,236 ಜನ ಮತದಾರರು ಇದ್ದಾರೆ.

ಕ್ಷೇತ್ರ ಗಮನ ಸೆಳೆದಿರುವುದು ಇಲ್ಲಿನ ಎರಡು ಪ್ರಮುಖ ಕಾರ್ಖಾನೆಗಳಿಂದ. ಒಂದು ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ, ಇನ್ನೂಂದು ಮೈಸೂರು ಪೇಪರ್ ಮಿಲ್. ಈಗಾಗಲೇ ಮೈಸೂರು ಪೇಪರ್ ಮಿಲ್ ಕಾರ್ಖಾನೆ ಬಾಗಿಲು ಹಾಕಲಾಗಿದೆ. ಈಗ ವಿಐಎಸ್​ಎಲ್ ಕಾರ್ಖಾನೆಯು ತನ್ನ ಉಳಿಯುವಿಕೆಯ ಹೋರಾಟಕ್ಕೆ ನಿಂತಿದೆ. ಎರಡು ಕಾರ್ಖಾನೆಯ ಉಳಿವಿಕೆಗಾಗಿ ಕಾರ್ಮಿಕರು ಸಾಕಷ್ಟು ಹೋರಾಟ ನಡೆಸಿಕೊಂಡು ಬಂದಿದ್ದಾರೆ.

ಬಿ.ಕೆ. ಸಂಗಮೇಶ್ವರ್ (ಕಾಂಗ್ರೆಸ್​)

ಎರಡು ಕಾರ್ಖಾನೆಯ ಕಾರ್ಮಿಕರು ಇಲ್ಲಿನ ಪ್ರಮುಖ ಮತದಾರರು. ಒಂದು ಕಾರ್ಖಾನೆ ಮುಚ್ಚಿರುವ ಕಾರಣ ಮತದಾರರು ಬೇರೆ ಬೇರೆ ಕಡೆ ನೆಲೆಸಿದ್ದಾರೆ. ಕೈಗಾರಿಕ ಕ್ಷೇತ್ರವಾದರೂ ಸಹ ಇಲ್ಲಿ ಅಭಿವೃದ್ಧಿ ಅಷ್ಟು ಹೇಳಿಕೊಳ್ಳುವಂತಿಲ್ಲ. ಕ್ಷೇತ್ರವು ನೀರಾವರಿ ಪ್ರದೇಶವಾಗಿದೆ. ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಸಮಸ್ಯೆ ಇಲ್ಲ ಎನ್ನಬಹುದು. ಪಟ್ಟಣದ ಭಾಗದಲ್ಲಿ ರಸ್ತೆ, ಒಳಚರಂಡಿ ಹಾಗೂ ನೆರೆ ಸಮಸ್ಯೆ ಸಾಕಷ್ಟು ಇದೆ.

ಹಾಲಿ ಶಾಸಕ ಬಿ.ಕೆ. ಸಂಗಮೇಶ್ವರ್ ಅವರು ಕಾಂಗ್ರೆಸ್ ಮೂಲಕ ರಾಜಕೀಯ ಪ್ರವೇಶವನ್ನು 1999ರಲ್ಲಿ ಮಾಡಿದರು. ಅಂದು ಮಾಜಿ ಶಾಸಕ ದಿವಂಗತ ಅಪ್ಪಾಜಿಗೌಡರ ವಿರುದ್ಧ 7,386 ಮತಗಳ ಅಂತರದಿಂದ ಸೋಲನ್ನು ಅನುಭವಿಸಿದ್ದರು. ನಂತರ 2004 ರಲ್ಲಿ ಶಾಸಕರಾಗಿದ್ದ ಅಪ್ಪಾಜಿಗೌಡರ ವಿರುದ್ಧ 17,131 ಮತಗಳ ಅಂತರದಿಂದ ಜಯಭೇರಿ‌ ಬಾರಿಸಿದರು. ಹಾಲಿ ಶಾಸಕರಾಗಿ ಸಂಗಮೇಶ್ವರ ಅವರು ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಅಲ್ಲದೇ ಜಿಲ್ಲೆಯ ಏಕೈಕ ಕಾಂಗ್ರೆಸ್ ಶಾಸಕರು ಸಹ ಆಗಿದ್ದಾರೆ. ಈ ಭಾರಿ ಭದ್ರಾವತಿ ನಗರಸಭೆ ಕಾಂಗ್ರೆಸ್ ಹಿಡಿತದಲ್ಲಿದ್ದು, ಇದು ಅವರಿಗೆ ವರದಾನವಾಗುವ ಸಾಧ್ಯತೆಗಳಿವೆ.

ಶಾರದ ಅಪ್ಪಾಜಿಗೌಡ (ಜೆಡಿಎಸ್​)

ಕಳೆದ ಚುನಾವಣೆಗಳ ವಿವರ: 2008 ರಲ್ಲಿ ಕಾಂಗ್ರೆಸ್​ನ ಸಂಗಮೇಶ್ ಅವರು ಜೆಡಿಎಸ್​ನ ಅಪ್ಪಾಜಿ ಗೌಡ ಅವರ ವಿರುದ್ಧ ಕೇವಲ 487 ಮತಗಳ ಅಂತರದಿಂದ ಜಯಗಳಿಸಿದ್ದರು. 2013ರ ಚುನಾವಣೆಯಲ್ಲಿ ಅಪ್ಪಾಜಿಗೌಡ ಅವರು‌ ಸಂಗಮೇಶ್ ವಿರುದ್ಧ 44,099 ಮತಗಳ ಅಂತರದ ಭರ್ಜರಿ ಜಯ ಸಾಧಿಸಿದ್ದರು. ಈ ಚುನಾವಣೆಯಲ್ಲಿ ಹಾಲಿ ಜೆಡಿಎಸ್​ನ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಅವರು ಕಾಂಗ್ರೆಸ್​​​ನಿಂದ ಸ್ಪರ್ಧೆ ಮಾಡಿದ್ದರು. ಇದರಿಂದ ಕಾಂಗ್ರೆಸ್ ಶಾಸಕರಾಗಿದ್ದ ಬಿ.ಕೆ.ಸಂಗಮೇಶ್ ಅವರು ಅಂದು ಕೆಜೆಪಿ ಬೆಂಬಲದೊಂದಿಗೆ ಪಕ್ಷೇತರರಾಗಿ ಸ್ಪರ್ಧೆ ಮಾಡಿದ್ದರು. ಸಿ.ಎಂ.ಇಬ್ರಾಹಿಂ ಅವರು ಅಂದು ಕೇವಲ 22,329 ಮತಗಳನ್ನು ಪಡೆದಿದ್ದರು. ಇನ್ನು 2018ರ ಚುನಾವಣೆಯಲ್ಲಿ ಕಾಂಗ್ರೆಸ್​ನ ಸಂಗಮೇಶ್ ಅವರು ಜೆಡಿಎಸ್ ಶಾಸಕರಾಗಿದ್ದ ಅಪ್ಪಾಜಿಗೌಡರನ್ನು 11,567 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

2023 Karnataka Legislative Assembly election
ಭದ್ರಾವತಿ ವಿಧಾನಸಭೆ ಕ್ಷೇತ್ರದ ವಿವರ

ಭದ್ರಾವತಿ ಕಿರು‌ ಪರಿಚಯ: ಭದ್ರಾ ನದಿ ದಂಡೆಯ ಮೇಲೆ ಇರುವ ಭದ್ರಾವತಿಯ ಮೊದಲ ಹೆಸರು ಬೆಂಕಿಪುರ. ಬೆಂಕಿಪುರ ನಂತರ ದಿನಗಳಲ್ಲಿ ಭದ್ರಾವತಿಯಾಗಿ ಬದಲಾಯಿತು. ಭದ್ರಾವತಿಯಲ್ಲಿ 1937 ರಲ್ಲಿ ವಿಐಎಸ್ಎಲ್ ಹಾಗೂ ಎಂಪಿಎಂ ಕಾರ್ಖಾನೆ ಬರುವ ತನಕ ಇದು ಸಹ ಒಂದು ಹಳ್ಳಿಯಾಗಿತ್ತು. ಇಲ್ಲಿಗೆ ಬೃಹತ್ ಕಾರ್ಖಾನೆಗಳು ಬಂದ ಬಳೀಕ ಇಲ್ಲಿ ಜನ ಸಂಚಾರ ಹೆಚ್ಚಾಯಿತು. ವ್ಯಾಪಾರ ವಹಿವಾಟುಗಳು ಹೆಚ್ಚಾದವು. ಭದ್ರಾವತಿ ಬೆಳೆದಿರುವುದು ಎರಡು ಕಾರ್ಖಾನೆಗಳಿಂದಲೇ ಅಂದರೆ ತಪ್ಪಾಗಲಾರದು.

ಕಾರ್ಖಾನೆ ಹಾಗೂ ಕಾರ್ಮಿಕರ ವಸತಿ ಗೃಹ ಸೇರಿದಂತೆ ಇತರ ಕಟ್ಟಡಗಳನ್ನು ಒಳ್ಳೆಯ ಪ್ಲಾನ್​ನಲ್ಲಿ ಕಟ್ಟಿದ ಕಾರಣ ಭದ್ರಾವತಿ ಪಟ್ಟಣ ಅತ್ಯಂತ ಸುಂದರವಾಗಿ ಕಾಣುತ್ತದೆ. ಭದ್ರಾವತಿ ವಿಧಾನಸಭೆ ಕ್ಷೇತ್ರ ಪಟ್ಟಣ ಹಾಗೂ ಗ್ರಾಮೀಣ ಎರಡು ಮಿಶ್ರಣವನ್ನು ಹೊಂದಿದೆ. ಕ್ಷೇತ್ರದಲ್ಲಿ ಕಾಂಗ್ರೆಸ್​ ಮತ್ತು ಜೆಡಿಎಸ್​ಗೆ ಹೋಲಿಸಿದರೆ ಬಿಜೆಪಿ ಪ್ರಾಬಲ್ಯ ಕಡಿಮೆ.

ಈವರೆಗಿನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 12 ಸಾವಿರಕ್ಕಿಂತಲೂ ಹೆಚ್ಚು ಮತಗಳನ್ನು ಪಡೆಯದಿರುವುದು ಪಕ್ಷಕ್ಕೆ ಕಳಂಕ. ಕಳೆದ ನಾಲ್ಕು ಚುನಾವಣೆಗಳಿಂದ ಜೆಡಿಎಸ್​ನ ಅಪ್ಪಾಜಿಗೌಡ ಹಾಗೂ ಕಾಂಗ್ರೆಸ್​ನ ಸಂಗಮೇಶ್ವರ್ ಪರಸ್ಪರ ಎದುರಾಳಿಗಳಾಗುತ್ತಿದ್ದರು. ಆದರೆ, ಕಳೆದ ಬಾರಿ ಬದಲಾದ ರಾಜಕೀಯದಲ್ಲಿ ಅಪ್ಪಾಜಿಗೌಡ ಅಕಾಲಿಕವಾಗಿ ಮೃತಪಟ್ಟಿದ್ದಾರೆ. ಜೆಡಿಎಸ್​ನಿಂದ ಈ ಭಾರಿ ದಿ. ಅಪ್ಪಾಜಿಗೌಡ ಅವರ ಪತ್ನಿ ಶಾರದ ಅಪ್ಪಾಜಿಗೌಡ ಸ್ಪರ್ಧೆ ಮಾಡಲಿದ್ದಾರೆ. ಜೆಡಿಎಸ್​ನ ಪಂಚರತ್ನ ಯಾತ್ರೆಯು ಇತ್ತೀಚೆಗೆ ಭದ್ರಾವತಿಗೆ ಬಂದು ಹೋಗಿರುವುದು ಜೆಡಿಎಸ್ ಕಾರ್ಯಕರ್ತರಲ್ಲಿ ಹುರುಪು ತಂದಿದೆ. ಅಲ್ಲದೇ ಅಪ್ಪಾಜಿಗೌಡ ಅವರ ಮರಣದ ನಂತರ ಕ್ಷೇತ್ರದಲ್ಲಿ ಜೆಡಿಎಸ್​ ಪರ ಒಲವು ಹೆಚ್ಚಾಗಿದೆ ಎನ್ನಬಹುದು. ಅಪ್ಪಾಜಿಗೌಡರ ಸಾವಿನ ಅನುಕಂಪ ಈ ಭಾರಿ ಕೆಲಸ‌ ಮಾಡುತ್ತಾ ನೋಡಬೇಕಿದೆ ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು.

ಇನ್ನೂ ಬಿಜೆಪಿ ಕ್ಷೇತ್ರದಲ್ಲಿ ಉತ್ತಮ ಸಂಘಟನೆಯನ್ನು ಹೊಂದಿದ್ದರು ಸಹ ಕ್ಷೇತ್ರದ ಒಂದು ವಿಧಾನಸಭೆ ಚುನಾವಣೆಯನ್ನು ಸಹ ಗೆಲ್ಲಲು ಸಾಧ್ಯವಾಗಿಲ್ಲ. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಕ್ಷೇತ್ರದ ಮತದಾರರು ಹೆಚ್ಚು ಮತ ನೀಡುತ್ತಾರೆ. ಈ ಹಿಂದೆ ಇಲ್ಲಿ ಸ್ಪರ್ಧೆ ಮಾಡಲು ಅಭ್ಯರ್ಥಿಗಳನ್ನು ಹುಡುಕುವ ಸ್ಥಿತಿಯಲ್ಲಿ ಇದ್ದ ಬಿಜೆಪಿ ಈಗ ಸ್ಪರ್ಧೆಗೆ ಪೈಪೋಟಿ ಬಿದ್ದಿದ್ದಾರೆ. ಬಿಜೆಪಿಯ ಧರ್ಮ ಪ್ರಸಾದ್, ರುದ್ರೇಶ್ ಮಂಗೊಟೆ ಹಾಗೂ ಜೆಡಿಎಸ್ ಬಿಟ್ಟು ಬಿಜೆಪಿ ಸೇರ್ಪಡೆಗೊಂಡ ಕುಮಾರ್ ಅವರು ಪ್ರಮುಖ‌ ಆಕಾಂಕ್ಷಿಗಳಾಗಿದ್ದಾರೆ. ಭದ್ರಾವತಿ ಕ್ಷೇತ್ರದಲ್ಲಿ ಕಾಂಗ್ರೆಸ್ 7, ಜೆಡಿಎಸ್ 1 ಪಕ್ಷೇತರರು 5 ಭಾರಿ ಗೆಲುವು ಸಾಧಿಸಿದ್ದಾರೆ. ಇದರಿಂದ ಇಲ್ಲಿ ಪಕ್ಷಕ್ಕಿಂತ ವ್ಯಕ್ತಿ ಮುಖ್ಯ ಎಂಬಂತೆ ಇದೆ. ಕ್ಷೇತ್ರದಲ್ಲಿ ಒಕ್ಕಲಿಗ ಸಮೂದಾಯದ ಮತದಾರರೇ ಇಲ್ಲಿ ನಿರ್ಣಾಯಕ. ಅವರೊಂದಿಗೆ ಲಿಂಗಾಯತ, ಎಸ್ಸಿ-ಎಸ್ಟಿ, ಮುಸ್ಲಿಂ, ಕ್ರಿಶ್ಚಿಯನ್, ಬ್ರಾಹ್ಮಣ, ತಮಿಳು ಮತದಾರರೂ ಪ್ರಾಬಲ್ಯ ಉಳ್ಳವರಾಗಿದ್ದಾರೆ.

ಹೀಗೆ ಒಟ್ಟು ಕ್ಷೇತ್ರದಲ್ಲಿ 2.10 ಲಕ್ಷಕ್ಕೂ ಅಧಿಕ ಜನ ಸಂಖ್ಯೆ ಇದೆ. ಒಟ್ಟಾರೆ, ಈ ಭಾರಿ ಭದ್ರಾವತಿಯಲ್ಲಿ ವಿಐಎಸ್​ಎಲ್ ಕಾರ್ಖಾನೆ ಉಳಿಸಿಕೊಳ್ಳುವಿಕೆಯ ಕುರಿತೇ ಚುನಾವಣಾ ಪ್ರಚಾರದ ವಿಷಯವಾಗಲಿದೆ. ಯಾವ ಪಕ್ಷದ ಅಭ್ಯರ್ಥಿ ಯಾವ ರೀತಿ ಮತದಾರರ ಮನವೊಲಿಸಲು ಯತ್ನಿಸುತ್ತಾನೆ, ಅದಕ್ಕೆ ಕ್ಷೇತ್ರದ ಮತದಾರರು ಯಾವ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಾರೆ ಎಂಬುದನ್ನು ಬರುವ ವಿಧಾನಸಭೆ ಚುನಾವಣೆಯಲ್ಲಿ ಕಾದು ನೋಡಬೇಕಿದೆ.

ಇದನ್ನೂ ಓದಿ: ಸಿಎಂ ಅಭ್ಯರ್ಥಿ ಘೋಷಣೆಗೆ ಕಾಂಗ್ರೆಸ್, ಬಿಜೆಪಿ ಹೈಕಮಾಂಡ್ ಹಿಂದೇಟು; ಸಾರಥಿ ಇಲ್ಲದೇ ಚುನಾವಣೆ ಪ್ರಚಾರ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.