ETV Bharat / state

ಶಿವಮೊಗ್ಗ: ನಡು ರಸ್ತೆಯಲ್ಲಿ ಹೊತ್ತಿ ಉರಿದ ಬೆಂಜ್ ಕಾರು - shivamogga car burnt news

ಹೊಸನಗರ ತಾಲೂಕಿನ ಬೆಳ್ಳೂರು ಗ್ರಾಮದ ಬಳಿ ಚಲಿಸುತ್ತಿದ್ದ ಐಷಾರಾಮಿ ಬೆಂಜ್ ಕಂಪನಿಯ ಕಾರೊಂದು ರಸ್ತೆಯಲ್ಲಿ ಹೊತ್ತಿ ಉರಿಯಿತು.

car burnt
ರಸ್ತೆಯಲ್ಲಿ ಹೊತ್ತಿ ಉರಿದ ಬೆಂಜ್ ಕಾರು
author img

By

Published : Aug 16, 2021, 7:02 AM IST

Updated : Aug 16, 2021, 7:29 AM IST

ಶಿವಮೊಗ್ಗ: ಆಕಸ್ಮಿಕ ಬೆಂಕಿಯಿಂದ ಬೆಂಜ್ ಕಾರೊಂದು ಕಾಡು ರಸ್ತೆಯಲ್ಲಿ ಹೊತ್ತಿ ಉರಿದಿರುವ ಘಟನೆ ಜಿಲ್ಲೆಯ ಹೊಸನಗರ ತಾಲೂಕಿನ ಬೆಳ್ಳೂರು ಗ್ರಾಮದ ಸಮೀಪ ನಡೆದಿದೆ.

ಹೊಸನಗರ ತಾಲೂಕಿನ ಗುಳಗುಳಿ ಶಂಕರದಿಂದ ಅಲಸೆ ಚೌಡೇಶ್ವರಿ ದೇವಿ ದರ್ಶನಕ್ಕೆ ಹೋಗುತ್ತಿರುವಾಗ ಮಾರ್ಗಮಧ್ಯೆ ಕಾರಿನಲ್ಲಿ ಸಣ್ಣ ಹೊಗೆ ಕಾಣಿಸಿಕೊಂಡಿದೆ. ಕೂಡಲೇ ಕಾರು ನಿಲ್ಲಿಸಿ, ಒಳಗಿದ್ದ ಇಬ್ಬರು ಕೆಳಗೆ ಇಳಿದಿದ್ದಾರೆ. ಆ ಬಳಿಕ ನೋಡು ನೋಡುತ್ತಿದ್ದಂತೆಯೇ ಕಾರು ಸುಟ್ಟು ಹೋಯಿತು. ಅದೃಷ್ಟವಶಾತ್​ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ರಸ್ತೆ ಮಧ್ಯೆ ಹೊತ್ತಿ ಉರಿದ ಬೆಂಜ್ ಕಾರು

ಕಾರಿನಲ್ಲಿದ್ದವರು ಶಿವಮೊಗ್ಗ ನಗರದವರು ಎನ್ನಲಾಗಿದೆ. ಸ್ಥಳಕ್ಕೆ ರಿಪ್ಪನಪೇಟೆ ಪಿಎಸ್ಐ ಶಿವಾನಂದ ಕೋಳಿ ಭೇಟಿ ನೀಡಿ ಪರಿಶೀಲಿಸಿದ್ದಾರೆ.

Last Updated : Aug 16, 2021, 7:29 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.