ETV Bharat / state

ಶಿವಮೊಗ್ಗ: ವಿಚಾರಣೆ ವೇಳೆ ಸಹೋದರರಿಂದ ಪೊಲೀಸರ ಮೇಲೆ ಹಲ್ಲೆ

ವಿಚಾರಣೆಗೆ ಕರೆ ತಂದ ಸಹೋದರರಿಬ್ಬರು ಪೊಲೀಸರ ಮೇಲೆಯೇ ಹಲ್ಲೆ ನಡೆಸಿರುವ ಘಟನೆ ಶಿವಮೊಗ್ಗ ಜಿಲ್ಲೆಯಲ್ಲಿ ನಡೆದಿದೆ.

assault-on-police-by-brothers-brought-for-enquiry
ವಿಚಾರಣೆ ವೇಳೆ ಸಹೋದರರರಿಂದ ಪೊಲೀಸರ ಮೇಲೆ ಹಲ್ಲೆ: ದೂರು ದಾಖಲಿಸಿದ ಖಾಕಿ
author img

By

Published : Nov 7, 2022, 8:26 PM IST

ಶಿವಮೊಗ್ಗ: ವಿಚಾರಣೆಗೆಂದು ಕರೆ ತಂದಿದ್ದ ಸಹೋದರರಿಬ್ಬರು ಪೊಲೀಸರ ಮೇಲೆಯೇ ಹಲ್ಲೆ ನಡೆಸಿರುವ ಘಟನೆ ಜಿಲ್ಲೆಯ ಹೊಸನಗರದ ನಗರ ಪೊಲೀಸ್ ಠಾಣೆಯಲ್ಲಿ ನಡೆದಿದೆ. ಪಿಎಸ್ಐ ನಾಗರಾಜ್ ಹಾಗೂ ಹೆಡ್ ಕಾನ್ಸ್​ಟೇಬಲ್ ವೆಂಕಟೇಶ್ ಮೇಲೆ ಹಲ್ಲೆ ನಡೆಸಲಾಗಿದೆ.

ಹಲ್ಲೆ ಪ್ರಕರಣವೊಂದರ ಸಂಬಂಧ ಭಾನುವಾರ ರಾತ್ರಿ 9 ಗಂಟೆಗೆ ಹೊಸನಗರ ತಾಲೂಕಿನ ಮಕ್ಕಿಮನೆ ಬೇಳೂರು ರಾಮಚಂದ್ರ ಹಾಗೂ ಆತನ ಸಹೋದರ ಕೃಷ್ಣಮೂರ್ತಿಯನ್ನು ಠಾಣೆಗೆ ಕರೆಯಿಸಲಾಗಿತ್ತು. ಈ ಸಹೋದರರನ್ನು ಹರೀಶ್ ಎಂಬುವರ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಕರೆಯಿಸಲಾಗಿತ್ತು.‌ ವಿಚಾರಣೆ ನಡೆಯುವ ವೇಳೆ ಸಹೋದರರಿಬ್ಬರು ಕರ್ತವ್ಯನಿರತರ ಮೇಲೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎನ್ನಲಾಗಿದೆ.

ಅಲ್ಲದೆ, ಕೈಯಿಂದ ಹಲ್ಲೆ ನಡೆಸಿ, ನೂಕಾಡಿ ಸಮವಸ್ತ್ರ ಹರಿದು ಹಾಕಿ ತಮಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ಹೊಸನಗರ ನಗರ ಪೊಲೀಸ್ ಠಾಣೆ ಪಿಎಸ್ಐ ನಾಗರಾಜ್ ಹಾಗೂ ಹೆಡ್ ಕಾನ್ಸ್​ಟೇಬಲ್ ಕೃಷ್ಣಮೂರ್ತಿ ಅವರು ತಮ್ಮದೇ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.‌

ಇದನ್ನೂ ಓದಿ: 70ರ ಅಜ್ಜಿ ಮೇಲೆ 28ರ ಯುವಕನಿಂದ ಅತ್ಯಾಚಾರ ಆರೋಪ: ಕಲಬುರಗಿಯಲ್ಲಿ ಪೈಶಾಚಿಕ ಕೃತ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.