ಶಿವಮೊಗ್ಗ: ಆಶಾ ಕಾರ್ಯಕರ್ತೆ ವಿದೇಶದಿಂದ ವಾಪಸ್ಸಾಗಿ ಹೋಮ್ ಕ್ವಾರಂಟೈನ್ನಲ್ಲಿರುವ ವ್ಯಕ್ತಿಯ ಬಡಾವಣೆಗೆ ತೆರಳಿ ಮನೆಗಳಿಗೆ ಹೋಂ ಕ್ವಾರಂಟೈನ್ ಸ್ಟೀಕರ್ ಅಂಟಿಸಲು ಹೋದಾಗ ಗ್ರಾಮ ಪಂಚಾಯತ್ ಸದಸ್ಯ ವಿರೋಧ ವ್ಯಕ್ತಪಡಿಸಿರುವ ಘಟನೆ ಶಿವಮೊಗ್ಗ ಜಿಲ್ಲೆ ರಿಪ್ಪನ್ಪೇಟೆ ಗ್ರಾಮದಲ್ಲಿ ನಡೆದಿದೆ.
ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕು ರಿಪ್ಪನಪೇಟೆ ಗ್ರಾಮದ ಆಶಾ ಕಾರ್ಯಕರ್ತೆ ಆರೋಗ್ಯ ಇಲಾಖೆ ಸೂಚಿಸಿದ ಕೆಲಸ ನಿರ್ವಹಿಸಲು ಗ್ರಾಮದ ನೆಹರು ಬಡಾವಣೆಗೆ ತೆರಳಿದ್ದಾರೆ. ಈ ಬಡಾವಣೆಯ ನಿವಾಸಿಯೊಬ್ಬರು ವಿದೇಶದಿಂದ ಬಂದಿದ್ದ ಹಿನ್ನೆಲೆ ಹೋಂ ಕ್ವಾರಂಟೈನ್ಗೆ ಒಳಗಾಗಿದ್ದರು. ಹೀಗಾಗಿ ಇವರ ಮನೆಯ ಮುಂದೆ ಆರೋಗ್ಯ ಇಲಾಖೆಯ ಹೋಂ ಕ್ವಾರಂಟೈನ್ ಸ್ಟಿಕ್ಕರ್ ಅಂಟಿಸಲು ಆಶಾ ಕಾರ್ಯಕರ್ತೆ ಹೋದಾಗ ಗ್ರಾಮ ಪಂಚಾಯತ್ ಸದಸ್ಯರೊಬ್ಬರು ಅಡ್ಡಿಪಡಿಸಿದ್ದಾರೆ ಹಾಗೂ ಮನೆಯ ಮುಂದೆ ಹೋಂ ಕ್ವಾರಂಟೈನ್ ಸ್ಟಿಕ್ಕರ್ ಅಂಟಿಸದಂತೆ ಧಮ್ಕಿ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.
ಗ್ರಾಮ ಪಂಚಾಯತ್ ಸದಸ್ಯ ಧಮ್ಕಿ ಹಾಕಿರುವ ಕುರಿತು ರಿಪ್ಪನ್ಪೇಟೆ ಪೊಲೀಸ್ ಠಾಣೆಗೆ ಗ್ರಾಮ ಪಂಚಾಯತ್ ನ ಟಾಸ್ಕ್ ಫೋರ್ಸ್ ದೂರು ನೀಡಿದೆ. ದೂರಿನಲ್ಲಿ ನೊಂದ ಆಶಾ ಕಾರ್ಯಕರ್ತೆ ನನಗೆ ಮಾನಸಿಕ ಹಿಂಸೆಯಾಗಿದೆ. ತಮಗೆ ರಕ್ಷಣೆ ನೀಡಿ ಎಂದು ನಮೂದಿಸಿದ್ದಾರೆ.