ಶಿವಮೊಗ್ಗ: ಶಿವಮೊಗ್ಗದ ಪೊಲೀಸರಿಗೆ ಆತಂಕ ಮೂಡಿಸಿದ್ದ ಅನಾಮಧೇಯ ಪತ್ರದಲ್ಲಿ ಶಿವಮೊಗ್ಗದಲ್ಲಿ ಕೊಲೆ ನಡೆಸುವ ಬಗ್ಗೆ ಮಾಹಿತಿ ಹಾಗೂ ಯಾರು ಕೊಲೆ ಮಾಡುತ್ತಾರೆ, ಇದರಿಂದ ಜಿಲ್ಲೆಯಲ್ಲಿ ಯಾವ ರೀತಿ ಕೋಮುಗಲಭೆ ಉಂಟಾಗುತ್ತದೆ ಎಂಬ ಬಗ್ಗೆ ಉಲ್ಲೇಖಿಸಿತ್ತು.
ಏನಿದು ಪತ್ರ?: ಶಿವಮೊಗ್ಗದ ಗಾಂಧಿ ಬಜಾರ್ನ ಗಂಗಾಪರಮೇಶ್ವರಿ ದೇವಾಲಯದ ಪಕ್ಕದ ಅಂಗಡಿಯವರಿಗೆ ಒಂದು ಖಾಕಿ ಬಣ್ಣದ ಕವರ್ನಲ್ಲಿ ಪತ್ರ ಸಿಕ್ಕಿತ್ತು. ಇದರಲ್ಲಿ ಶಿವಮೊಗ್ಗದಲ್ಲಿ ಮುಂಬರುವ ಗಣೇಶನ ಹಬ್ಬದಲ್ಲಿ ಕೋಮುಗಲಭೆ ಉಂಟು ಮಾಡುವುದು, ಇದಕ್ಕಾಗಿ ಕೊಲೆ ನಡೆಸಲಾಗುತ್ತದೆ ಎಂಬುದಾಗಿತ್ತು. ಹಾಗೆ ಶಿವಮೊಗ್ಗದಲ್ಲಿ ಉಂಟಾಗಬಹುದಾದ ಕೋಮುಗಲಭೆ ಹಾಗೂ ಕೊಲೆಯನ್ನು ತಪ್ಪಿಸಬೇಕೆಂದು ಬರೆಯಲಾಗಿತ್ತು.
ಗಾಂಧಿ ಬಜಾರ್ನಲ್ಲಿ ಇರುವ ಮಾರ್ವಾಡಿ ಅಂಗಡಿ ಪಕ್ಕದ ಶೌಚಾಲಯದ ಬಳಿ ಬಂದ ಮೂವರು ಈ ಬಗ್ಗೆ ಮಾತನಾಡುತ್ತಿದ್ದನ್ನು ಕೇಳಿ ಭಯಗೊಂಡು ಈ ಪತ್ರ ಬರೆದಿದ್ದೇನೆ. ಕೊಲೆ ಮಾಡಲು ಮಂಗಳೂರಿನಿಂದ ಮೂವರನ್ನು ಕರೆಯಿಸಬೇಕು, ಅವರು ಫೋನ್ ಬಳಸಬಾರದು. ಅವರು ಕೊಲೆ ಮಾಡಿದ ನಂತರ ನಗರದಲ್ಲಿ ಗಲಾಟೆ ಉಂಟಾಗುತ್ತದೆ. ಇದರಿಂದ ಗಣಪತಿ ಹಬ್ಬ ಆಚರಣೆ ಮಾಡಲು ಆಗುವುದಿಲ್ಲ ಎಂದು ಅವರು ಮಾತನಾಡಿಕೊಳ್ಳುತ್ತಿದ್ದರು. ಅದನ್ನೇ ನಾನು ಕೇಳಿಸಿಕೊಂಡು ಬರೆದಿದ್ದೇನೆ. ಈ ಮೂಲಕ ಶಿಮೊಗ್ಗದಲ್ಲಿ ಗಲಾಟೆ ನಡೆಸುವುದನ್ನು ತಪ್ಪಿಸಬೇಕು ಎಂದು ಆಗ್ರಹ ಮಾಡಿದ್ದ.
ಉಳಿದಂತೆ ಪತ್ರದಲ್ಲಿ ಗಲಾಟೆ ಉಂಟು ಮಾಡುವವನ ಹೆಸರನ್ನೂ ಸಹ ಉಲ್ಲೇಖಿಸಿದ್ದ. ಆ ಹೆಸರೇ ಮೊಹಮದ್ ಫೈಸಲ್ ಯಾನೆ ಚೆನ್ನು. ಈ ಚೆನ್ನು ಗಾಂಜಾ ಮಾರಾಟ ಮಾಡುತ್ತಾನೆ, ಮತ್ತು ಸೇವಿಸುತ್ತಾನೆ. ಆತ ಆಜಾದ್ ನಗರದಲ್ಲಿ ರೌಡಿಯಂತೆ ವರ್ತಿಸುತ್ತಾನೆ ಎಂದು ಬರೆದಿದ್ದ. ಈ ಫೈಸಲ್ ಹಾಗೂ ಪತ್ರ ಬರೆದವನನ್ನು ಪತ್ತೆ ಮಾಡಬೇಕೆಂದು ಪತ್ರ ದೊರೆತ ಅಂಗಡಿ ಮಾಲೀಕ ಪ್ರಶಾಂತ್ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಪೊಲೀಸರು ಶಾಕ್: ಅನಮಾಧೇಯ ಪತ್ರದ ಬೆನ್ನು ಹತ್ತಿದ ಕೋಟೆ ಪೊಲೀಸರು, ಸೊಳೆಬೈಲಿನ ಅಯೂಬ್ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಘಟನೆ ಬೆಳಕಿಗೆ ಬಂದಿದೆ. ಆತ ತಾನೇ ಪತ್ರ ಬರೆದಿದ್ದು ಎಂದು ಒಪ್ಪಿಕೊಂಡಿದ್ದಾನೆ. ಫೈಜಲ್ ಪತ್ನಿಯೊಂದಿಗೆ ಅಯೂಬ್ ಅಕ್ರಮ ಸಂಬಂಧ ಹೊಂದಿದ್ದು, ಫೈಸಲ್ನನ್ನು ಜೈಲಿಗೆ ಕಳುಹಿಸಿ ತಾನು ಆತನ ಹೆಂಡತಿಯ ಜೊತೆ ಇರಬಹುದೆಂದು ಈ ರೀತಿ ಪತ್ರ ಬರೆದಿರುವುದಾಗಿ ಒಪ್ಪಿಕೊಂಡಿದ್ದಾನೆ. ಕೊನೆಗೆ ಫೈಜಲ್ನನ್ನು ಪೊಲೀಸರು ಬಂಧಿಸಿ, ಜೈಲಿಗಟ್ಟಿದ್ದಾರೆ.
ಇದನ್ನೂ ಓದಿ: ಗಣೇಶ ಚತುರ್ಥಿ, ಬಿಬಿಎಂಪಿ ಚುನಾವಣೆ: ರೌಡಿಗಳ ಮನೆ ಮೇಲೆ ಪೊಲೀಸರ ದಾಳಿ