ಶಿವಮೊಗ್ಗ: ಜಿಲ್ಲೆಯ ಚಿಕ್ಕಮಗಳೂರು ಗಡಿಭಾಗದಲ್ಲಿರುವ ಭದ್ರಾ ಅಭಯಾರಣ್ಯಕ್ಕೆ ನಟ ವಿಜಯ ರಾಘವೇಂದ್ರ ಕುಟುಂಬ ಸಮೇತ ಭೇಟಿ ನೀಡಿ, ಅಭಯಾರಣ್ಯದಲ್ಲಿ ಸಫಾರಿ ಮಾಡಿದ್ದಾರೆ.
ಸಂಜೆ ಆರು ಗಂಟೆಗೆ ಸಫಾರಿ ಮುಗಿಸಿ ಹೊರಡುತ್ತಿದಂತೆ ಅಭಿಮಾನಿಗಳು ವಿಜಯ ರಾಘವೇಂದ್ರ ಅವರೊಂದಿಗೆ ಸೆಲ್ಪಿ ತೆಗೆದುಕೊಂಡು ಸಂಭ್ರಮಿಸಿದ್ದಾರೆ.
ಎರಡು ದಿನದ ಹಿಂದೆ ನಟ ದರ್ಶನ್ ಹಾಗೂ ಹಾಸ್ಯ ನಟ ಚಿಕ್ಕಣ್ಣ ಭೇಟಿ ನೀಡಿ, ಸಫಾರಿ ಹಾಗೂ ಪೋಟೋಗ್ರಫಿ ನಡೆಸಿದ್ದರು.